newsfirstkannada.com

ರಜೆಗೆ ಪೋಷಕರ ಬಳಿ ಬಂದ ಮಕ್ಕಳು ವಾಂತಿ-ಭೇದಿಯಿಂದ ಸಾವು.. ಅಪ್ಪ-ಅಮ್ಮ ಸೇರಿ ಮೂವರು ಅಸ್ವಸ್ಥ

Share :

Published April 28, 2024 at 11:44am

    ಅಪ್ಪ-ಅಮ್ಮನ ಬಳಿ ರಜೆಗೆ ಬಂದ ಇಬ್ಬರು ಮಕ್ಕಳು ಸಾವು

    ಬ್ರಿಕ್ಸ್ ತಯಾರಿಕೆಯಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕ ಕುಟುಂಬ

    ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಸಾವನ್ನಪ್ಪಿದ್ದಾರೆ

ರಾಯಚೂರು: ಅಪ್ಪ-ಅಮ್ಮನ ಬಳಿ ರಜೆಗೆ ಬಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ‌ನಡೆದಿದೆ. ಆರತಿ (7), ಪ್ರಿಯಾಂಕ್ (9) ಸಾವನ್ನಪ್ಪಿದ್ದಾರೆ.  ಪೋಷಕರಾದ ಹುಸೇನಮ್ಮ (35), ಮಾರುತಿ (40), ಲಕ್ಷ್ಮಣ್ (60) ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂಲತಃ ಲಿಂಗಸೂಗೂರು ತಾಲೂಕಿನ ಕಮಲದಿನ್ನಿ ಗ್ರಾಮದಿಂದ ವಡ್ಲೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಬ್ರಿಕ್ಸ್ ತಯಾರಿಕೆಯಲ್ಲಿ ಈ ಕೂಲಿ ಕಾರ್ಮಿಕ ಕುಟುಂಬ ನಿರತರಾಗಿದ್ದರು. ರಜೆ ನಿಮಿತ್ತ ಪೋಷಕರ ಬಳಿ ಇಬ್ಬರೂ ಮಕ್ಕಳು ಬಂದಿದ್ದರು. ಆದರೆ ವಾಂತಿ- ಭೇದಿಯಿಂದ ಇಬ್ಬರು ಮಕ್ಕಳು ‌ಸಾವನ್ನಪ್ಪಿದ್ದಾರೆ. ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಲಕ್ಷ್ಮಣ್- ಮಾರುತಿ

ಇದನ್ನೂ ಓದಿ: ಭಾವನಿಂದ ಅತ್ಯಾ**ಕ್ಕೊಳಗಾದ ಮಹಿಳೆ.. ವಿಷಯ ತಿಳಿಸಿದಂತೆ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಗಂಡ

ಕುಟುಂಬ ಚಪಾತಿ, ಹೆಸರಕಾಳು, ಅನ್ನ, ಸಾಂಬಾರು ಸೇವಿಸಿದ್ದರು. ಬಳಿಕ ಐವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಾಣಿಸಿಕೊಂಡಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು ಮೂವರು ಅಸ್ವಸ್ಥರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜೆಗೆ ಪೋಷಕರ ಬಳಿ ಬಂದ ಮಕ್ಕಳು ವಾಂತಿ-ಭೇದಿಯಿಂದ ಸಾವು.. ಅಪ್ಪ-ಅಮ್ಮ ಸೇರಿ ಮೂವರು ಅಸ್ವಸ್ಥ

https://newsfirstlive.com/wp-content/uploads/2024/04/Chikldrens-died.jpg

Load More