ಹೇಗಿತ್ತು ಆರ್ಸಿಬಿ VS ಗುಜರಾತ್ ಹೈ-ವೋಲ್ಟೇಜ್ ಕದನ?
9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ನಮ್ಮ RCB
ಸತತ 2ನೇ ಗೆಲುವು ದಾಖಲಿಸಿದ ಡುಪ್ಲೆಸಿ ಪಡೆ
ಆರ್ಸಿಬಿಯ ಗೆಲುವಿನ ಓಟ ಗುಜರಾತ್ನಲ್ಲೂ ಮುಂದುವರೆದಿದೆ. ಹೈದ್ರಾಬಾದ್ ಬಳಿಕ ಇದೀಗ ಗುಜರಾತ್ ಟೈಟನ್ಸ್ ಎದುರು ಆರ್ಸಿಬಿ ಗೆದ್ದು ಬೀಗಿದೆ. ಆರ್ಸಿಬಿ ಅಸಲಿ ಖದರ್ ನೋಡಿ ಟೈಟನ್ಸ್ ಪಡೆ ಒಂದು ಕ್ಷಣ ಶಾಕ್ ಆಗಿದ್ದು ಸುಳ್ಳಲ್ಲ.. ನಮೋ ಅಂಗಳದಲ್ಲಿ ಕಿಂಗ್ ಕೊಹ್ಲಿ ಹಾಗೂ ವಿಲ್ ಜಾಕ್ಸ್ ಘರ್ಜನೆ ಹಂಗಿತ್ತು.
ಅಹ್ಮದಾಬಾದ್ನ ನಮೋ ಅಂಗಳದಲ್ಲಿ ಆರ್ಸಿಬಿಯ ಅಬ್ಬರದ ಆಟಕ್ಕೆ ಗುಜರಾತ್ ಟೈಟನ್ಸ್ ಥಂಡಾ ಹೊಡೆದು ಹೊಯ್ತು. ವಿಲ್ ಜಾಕ್ಸ್ – ವಿರಾಟ್ ಕೊಹ್ಲಿ ಬೌಲರ್ಗಳ ಮೇಲೆ ದಂಡೆತ್ತಿ ಹೋಗಿ, ಬೌಂಡರಿ – ಸಿಕ್ಸರ್ಗಳ ತೋರಣ ಕಟ್ಟಿ ಬಿಟ್ರು. ಅಬ್ಬರದ ಆಟ ಕಂಡ ಆರ್ಸಿಬಿ ಫ್ಯಾನ್ಸ್ ಫುಲ್ ಖುಷ್ ಆದರು.
ಮೊದಲ ಓವರ್ನಲ್ಲೇ ಗುಜರಾತ್ಗೆ ಸ್ಪಿನ್ ‘ಗುನ್ನಾ’..!
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಗುಜರಾತ್ ಟೈಟನ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಮೊದಲ ಓವರ್ನಲ್ಲೇ ಓಪನರ್ ವೃದ್ಧಿಮಾನ್ ಸಹಾ ಪೆವಿಲಿಯನ್ ಸೇರಿದ್ರು. ಕೇವಲ 5 ರನ್ಗಳಿಗೆ ಸಹಾ ಆಟ ಅಂತ್ಯವಾಯ್ತು.
ಗಿಲ್ ಆಟಕ್ಕೆ ಬ್ರೇಕ್ ಹಾಕಿದ ಮ್ಯಾಕ್ಸ್ವೆಲ್..!
ಸಹಾ ನಿರ್ಗಮನದ ಬಳಿಕ ಶುಭ್ಮನ್ ಗಿಲ್, ಸಾಯಿ ಸುದರ್ಶನ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ರು. ಈ ವೇಳೆ ದಾಳಿಗಿಳಿದ ಗ್ಲೇನ್ ಮ್ಯಾಕ್ಸ್ವೆಲ್ ಪಾರ್ಟನರ್ ಶಿಪ್ ಬ್ರೇಕ್ ಮಾಡಿದ್ರು. ಕಮ್ಬ್ಯಾಕ್ ಮಾಡಿದ ಪಂದ್ಯದ ಮೊದಲ ಓವರ್ನಲ್ಲೇ, ಗಿಲ್ಗೆ ಪೆವಿಲಿಯನ್ ದಾರಿ ತೋರಿಸಿದ್ರು.
ತಂಡಕ್ಕೆ ಆಸರೆಯಾದ ಸುದರ್ಶನ್-ಶಾರೂಖ್
45 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡ ಗುಜರಾತ್ ತಂಡಕ್ಕೆ ಸಾಯ್ ಸುದರ್ಶನ್, ಶಾರೂಖ್ ಖಾನ್ ಆಸರೆಯಾದ್ರು. 3ನೇ ವಿಕೆಟ್ಗೆ ಜೊತೆಯಾದ ಈ ಜೋಡಿ ಆರಂಭದಲ್ಲಿ ತಾಳ್ಮೆಯ ಆಟವಾಡಿತು. ಸೆಟಲ್ ಆದ ಬಳಿಕ ಆರ್ಸಿಬಿ ಬೌಲರ್ಗಳ ಸವಾರಿ ಮಾಡಿ 86 ರನ್ಗಳ ಜೊತೆಯಾಟವಾಡಿತು. ಅಬ್ಬರದ ಬ್ಯಾಟಿಂಗ್ ನಡೆಸಿದ ಶಾರೂಖ್ ಖಾನ್ 3 ಬೌಂಡರಿ, 5 ಸಿಕ್ಸರ್ ಸಿಡಿಸಿ ಘರ್ಜಿಸಿದ್ರು. ಹಾಫ್ ಸೆಂಚುರಿ ಸಿಡಿಸಿ ಬಿಗ್ ಸ್ಕೋರ್ ಕಲೆ ಹಾಕೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ಮೊಹಮ್ಮದ್ ಸಿರಾಜ್ ಇದಕ್ಕೆ ಅವಕಾಶ ನೀಡಲಿಲ್ಲ. 58 ರನ್ಗಳಿಸಿದ್ದ ವೇಳೆ ಸಿರಾಜ್ ಕ್ಲೀನ್ ಬೋಲ್ಡ್ ಮಾಡಿದ್ರು.
ಅಂತಿಮ ಹಂತದವರೆಗೆ ಹೋರಾಡಿದ ಸುದರ್ಶನ್
ಶಾರೂಖ್ ಖಾನ್ ನಿರ್ಗಮನದ ಬಳಿಕ ಕಣಕ್ಕಿಳಿದ ಡೇವಿಡ್ ಮಿಲ್ಲರ್, ಸಾಯ್ ಸುದರ್ಶನ್ಗೆ ಸಾಥ್ ನೀಡಿದ್ರು. ಬೌಂಡರಿ-ಸಿಕ್ಸರ್ಗಳನ್ನ ಸಿಡಿಸಿದ ಸಾಯ್ ಸುದರ್ಶನ್ ಹಾಫ್ ಸೆಂಚುರಿ ಸಿಡಿಸಿದ್ರು. 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 84 ರನ್ ಸಿಡಿಸಿದ್ರು. 26 ರನ್ಗಳೊಂದಿಗೆ ಡೇವಿಡ್ ಮಿಲ್ಲರ್ ಅಜೇಯರಾಗುಳಿದ್ರು. 20 ಓವರ್ಗಳಲ್ಲಿ ಗುಜರಾತ್ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.
ಕೊಹ್ಲಿ-ಜಾಕ್ಸ್ ಜಬರ್ದಸ್ತ್ ಆಟ, ಫ್ಯಾನ್ಸ್ಗೆ ಹಬ್ಬ..!
201 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಅಬ್ಬರದ ಆರಂಭ ಮಾಡಿದ ಫಾಫ್ ಡುಪ್ಲೆಸಿ 12 ಎಸೆತಗಳಲ್ಲಿ 24 ರನ್ ಸಿಡಿಸಿ ಔಟಾದ್ರು. 2ನೇ ವಿಕೆಟ್ ಜೊತೆಯಾದ ವಿರಾಟ್ ಕೊಹ್ಲಿ-ವಿಲ್ ಜಾಕ್ಸ್ ಗುಜರಾತ್ ಬೌಲರ್ಗಳ ಬೆಂಡೆತ್ತಿದ್ರು. ಯಾವ ಹಂತದಲ್ಲೂ ಈ ಟಾರ್ಗೆಟ್ ಸವಾಲಿದ್ದು ಅನ್ನಿಸಲೇ ಇಲ್ಲ. ಅಷ್ಟು ಸಲೀಸಾಗಿ ಇವರಿಬ್ಬರು ಬ್ಯಾಟಿಂಗ್ ನಡೆಸಿದ್ರು. ಗುಜರಾತ್ ಬೌಲರ್ಗಳನ್ನ ಮನಬಂದಂತೆ ದಂಡಿಸಿದ ಈ ಜೋಡಿ ಅಜೇಯ 166 ರನ್ಗಳ ಜೊತೆಯಾಟವಾಡಿತು.
ಕಿಂಗ್ ಕೊಹ್ಲಿ ಅಬ್ಬರಕ್ಕೆ ಥಂಡಾ ಹೊಡೆದ ಗುಜರಾತ್
ನಮೋ ಅಂಗಳದಲ್ಲಿ ವಿರಾಟ್ ಕೊಹ್ಲಿ ಸಖತ್ ಕಾಲ್ಕುಲೇಟೆಡ್ ಇನ್ನಿಂಗ್ಸ್ ಆಡಿದ್ರು. ತನ್ನ ಬ್ಯಾಟಿಂಗ್ನಿಂದಲೇ ಸ್ಟ್ರೈಕ್ರೇಟ್ನ ಟೀಕೆಗಳಿಗೂ ಆನ್ಸರ್ ಕೊಟ್ರು. ಕೇವಲ 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 70 ರನ್ ಚಚ್ಚಿದ್ರು.
ವಿಲ್ ಜಾಕ್ಸ್ ಶತಕದಾಟ, ಸುಸ್ತು ಹೊಡೆದ ಬೌಲರ್ಸ್..!
ಯಂಗ್ ಬ್ಯಾಟ್ಸ್ಮನ್ ವಿಲ್ ಜಾಕ್ಸ್ ಗುಜರಾತ್ ಬೌಲರ್ಗಳನ್ನ ಬಿಡದೇ ಕಾಡಿದ್ರು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಜಾಕ್ಸ್, ಅಂತಿಮ ಹಂತದಲ್ಲಿ ಅಕ್ಷರಶಃ ಘರ್ಜಿಸಿದ್ರು. ಮೊಹಿತ್ ಶರ್ಮಾ, ರಶೀದ್ ಖಾನ್ರಂತ ಲೆಜೆಂಡ್ ಬೌಲರ್ ದಾಳಿಯನ್ನ ಚಚ್ಚಿ ಬಿಸಾಕಿದ್ರು. 41 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ರು. ವಿರಾಟ್ ಕೊಹ್ಲಿ-ವಿಲ್ ಜಾಕ್ಸ್ ಅಬ್ಬರದ ಆಟದ ನೆರವಿನೊಂದಿಗೆ ಆರ್ಸಿಬಿ 16 ಓವರ್ಗಳಲ್ಲೇ ಗುರಿ ತಲುಪಿತು. ಕೇವಲ 1 ವಿಕೆಟ್ ಕಳೆದುಕೊಂಡು 9 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್