ಹಾಸನ ಅಶ್ಲೀಲ ವಿಡಿಯೋ ಕೇಸ್ನಲ್ಲಿ ಹೆಚ್.ಡಿ ರೇವಣ್ಣಗೂ ಸಂಕಷ್ಟ
ವಿದೇಶದಿಂದ ಪ್ರಜ್ವಲ್ನ ವಾಪಸ್ ಕರೆ ತರುತ್ತೇವೆ ಎಂದ ಗೃಹ ಸಚಿವರು
ಹಾಸನ ಸಂತ್ರಸ್ತರ ರಕ್ಷಣೆ ನಮ್ಮ ಹೊಣೆ ಎಂದ ರಾಜ್ಯ ಮಹಿಳಾ ಆಯೋಗ
ಬೆಂಗಳೂರು: ಹಾಸನದಲ್ಲಿ ಹರಿದಾಡ್ತಿರುವ ಅಶ್ಲೀಲ ವಿಡಿಯೋಗಳು ಇಡೀ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ದೇಶಾದ್ಯಂತ ಹಲ್ಚಲ್ ಎಬ್ಬಿಸಿರುವ ಈ ಕೇಸ್ನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹೆಸರು ತಳುಕು ಹಾಕಿಕೊಂಡಿದೆ. ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಇದೀಗ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರೇವಣ್ಣ ಕುಟುಂಬ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.
ಅಶ್ಲೀಲ ವಿಡಿಯೋ ಕೇಸ್ನಲ್ಲಿ ಹೆಚ್.ಡಿ ರೇವಣ್ಣಗೂ ಸಂಕಷ್ಟ
ಎಫ್ಐಆರ್ಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ
ಹಾಸನ ಪೆನ್ಡ್ರೈವ್ ಕೇಸಲ್ಲಿ ನಿನ್ನೆ ಮೊದಲ ಎಫ್ಐಆರ್ ದಾಖಲಾಗಿತ್ತು. ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಮನೆ ಕೆಲಸದಾಕೆ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಮೊದಲ ಆರೋಪಿಯಾಗಿ ಹೆಚ್.ಡಿ ರೇವಣ್ಣ ಹೆಸರಿದ್ರೆ ಎರಡನೇ ಆರೋಪಿಯಾಗಿ ಪ್ರಜ್ವಲ್ ರೇವಣ್ಣ ಹೆಸರನ್ನ ಉಲ್ಲೇಖಿಸಲಾಗಿದೆ. ಇದೀಗ ಈ ಎಫ್ಐಆರ್ಗೆ ತಡೆ ಕೋರಿ ಹೆಚ್.ಡಿ ರೇವಣ್ಣ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಪ್ರಜ್ವಲ್ ಫಾರಿನ್ಗೆ ಹೋಗಬೇಕಾಗಿತ್ತು ಹೋಗಿದ್ದಾನೆ, ಇವರೇನು FIR ಹಾಕ್ತಾರೆಂದು ಗೊತ್ತಿತ್ತಾ? -ರೇವಣ್ಣ
ಯಾವ್ಯಾವ ಸೆಕ್ಷನ್ ಅಡಿ ಕೇಸ್?
ಸೆಕ್ಷನ್ 354 (A) ಅಡಿ ಲೈಂಗಿಕ ಕಿರುಕುಳ ನೀಡಿರುವುದು
ಸೆಕ್ಷನ್ 354 (D) ಅಡಿ ಮಹಿಳೆಗೆ ಮುಜುಗರ ಮಾಡುವುದು
ಸೆಕ್ಷನ್ 506ರ ಅಡಿ ಮಹಿಳೆಗೆ ಬೆದರಿಕೆ ಹಾಕಿರುವುದು
ಸೆಕ್ಷನ್ 509 ಮಹಿಳೆಯ ಮಾನಕ್ಕೆ ಹಾನಿ ಮಾಡಿರುವುದು
ಇದನ್ನೂ ಓದಿ: ‘1 ಲಕ್ಷ ಪೆನ್ಡ್ರೈವ್ ಗಲ್ಲಿ, ಗಲ್ಲಿಗೆ ಹಂಚಿದ್ದಾರೆ’- ಹಾಸನ ಅಶ್ಲೀಲ ವಿಡಿಯೋ ಕೇಸ್ಗೆ HDK ಸ್ಫೋಟಕ ಹೇಳಿಕೆ
ವಿದೇಶದಿಂದ ಪ್ರಜ್ವಲ್ನ ವಾಪಸ್ ಕರೆ ತರುತ್ತೇವೆ ಎಂದ ಪರಂ
ಸಂತ್ರಸ್ತರ ರಕ್ಷಣೆ ನಮ್ಮ ಹೊಣೆ ಎಂದ ರಾಜ್ಯ ಮಹಿಳಾ ಆಯೋಗ
ಹಾಸನದ ಅಶ್ಲೀಲ ವಿಡಿಯೋಗಳ ಕೇಸ್ನ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಎಸ್ಐಟಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದ ಪರಮೇಶ್ವರ್, ಜರ್ಮನಿಗೆ ಹಾರಿರೋ ಪ್ರಜ್ವಲ್ ರೇವಣ್ಣನ ವಾಪಸ್ ಕರೆತರುತ್ತೇವೆ ಎಂದಿದ್ದಾರೆ. ಯಾರೇ ತೊಂದರೆಗೆ ಈಡಾಗಿದ್ರೂ ನಮ್ಮ ಬಳಿ ಬಂದು ದೂರು ನೀಡಬಹುದು ಅಂತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಅಭಯ ನೀಡಿದ್ದಾರೆ.
ರಾಜ್ಯದೆಲ್ಲೆಡೆ ಅಶ್ಲೀಲ ವಿಡಿಯೋಗಳ ಹಲ್ಚಲ್ ಎದ್ದಿದೆ. ಇದೀಗ ವಿಡಿಯೋ ಹಿಂದಿನ ಅಸಲಿಯತ್ತಿನ ಬಗ್ಗೆ ತನಿಖೆ ಆರಂಭವಾಗಿದೆ. ತನಿಖೆಯ ಬಳಿಕವಷ್ಟೇ ವಿಡಿಯೋಗಳ ಸತ್ಯ, ಅಸತ್ಯತೆ ಹೊರಬೀಳಬೇಕಿದೆ.
ಇದನ್ನೂ ಓದಿ: ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ.. ಹೆಚ್ ಡಿ ಕುಮಾರಸ್ವಾಮಿ ಹೀಗ್ಯಾಕಂದ್ರು?
ಪ್ರಜ್ವಲ್ ಮುಂದಿರೋ ಆಯ್ಕೆಗಳೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ