ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಇಂದು ಚೆನ್ನೈ ಸೂಪರ್ ಕಿಂಗ್ಸ್, ಆರ್ಸಿಬಿ ತಂಡದ ಮಧ್ಯೆ ರೋಚಕ ಪಂದ್ಯ
ಮಳೆ ಬಂದೂ ಪಿಚ್ ವೆಟ್ ಆದ್ರೂ ಭರ್ಜರಿ ಬ್ಯಾಟಿಂಗ್ ಮಾಡಿದ ಕೊಹ್ಲಿ!
ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಆರ್ಸಿಬಿ ಫಸ್ಟ್ ಬ್ಯಾಟಿಂಗ್ ಮಾಡುತ್ತಿದೆ.
ಇನ್ನು, ಪಂದ್ಯ ನಡೆಯುತ್ತಿದ್ದಾಗಲೇ ಮಳೆ ಬಂದ ಕಾರಣ ಕೆಲವು ಕಾಲ ಮ್ಯಾಚ್ ಸ್ಥಗಿತಗೊಂಡಿತ್ತು. ಬಳಿಕ ಪಂದ್ಯ ಶುರುವಾದ ಬಳಿಕ ಬಾಲ್ ಟರ್ನ್ ಆಗುತ್ತಿತ್ತು. ಎಷ್ಟು ಪ್ರಯತ್ನಪಟ್ರೂ ರನ್ಗಳು ಬರುತ್ತಲೇ ಇರಲಿಲ್ಲ. ಇದರ ಮಧ್ಯೆಯೂ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು.
ತಾನು ಆಡಿದ 29 ಬಾಲ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಜತೆಗೆ 3 ಫೋರ್ ಸಿಡಿಸಿದ್ರು. ಬರೋಬ್ಬರಿ 47 ರನ್ ಸಿಡಿಸಿ ಕೇವಲ ಮೂರು ರನ್ಗಳಿಂದ ಅರ್ಧಶತಕ ವಂಚಿತರಾದ್ರು. ಸಿಕ್ಸ್ ಹೊಡೆಯಲು ಹೋಗಿ ಔಟಾದ್ರು. ಸ್ಲೋ ಪಿಚ್ ಮಧ್ಯೆಯೂ ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 162ಕ್ಕೂ ಹೆಚ್ಚಿತ್ತು.
ಇದನ್ನೂ ಓದಿ: ಚೆನ್ನೈ, ಆರ್ಸಿಬಿ ನಡುವಿನ ಪಂದ್ಯ ದಿಢೀರ್ ಸ್ಥಗಿತ.. ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ