ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ಸ್ಟೇಡಿಯಂಗೆ ಹೋಗಿರೋದಾ?
ಚೆನ್ನೈ ಅನ್ನು ಬಗ್ಗು ಬಡಿದು ಪ್ಲೇ ಆಫ್ಗೆ ಆರ್ಸಿಬಿ ಗ್ರ್ಯಾಂಡ್ ಎಂಟ್ರಿ
RCB ಮಾಜಿ ಪ್ಲೇಯರ್ ಗೇಲ್ ಜೊತೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡು ಆರ್ ಡೈ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿದ್ದವು. ರಣರೋಚಕ ಪಂದ್ಯದಲ್ಲಿ ಚೆನ್ನೈಯನ್ನು 27 ರನ್ಗಳಿಂದ ಆರ್ಸಿಬಿ ತಂಡ ಮಣಿಸಿ ಗೆಲುವಿನ ನಗೆ ಬೀರಿದೆ. ಇನ್ನು ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕೆರಿಬಿಯನ್ ದೈತ್ಯ ಕ್ರಿಕೆಟರ್ ಕ್ರಿಸ್ಗೇಲ್ ಜೊತೆ ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಚೆನ್ನೈ ವಿರುದ್ಧ ನಡೆದ ಹೈವೋಲ್ಟೇಜ್ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಪಂದ್ಯದ ವೇಳೆ ಯೂನಿವರ್ಸಲ್ ಬಾಸ್ ಕ್ರಿಸ್ಗೇಲ್ ಜೊತೆಯಾಗಿ ಕುಳಿತು ನಟ ರಿಷಬ್ ಶೆಟ್ಟಿ ಮ್ಯಾಚ್ ವೀಕ್ಷಣೆ ಮಾಡಿದ್ದಾರೆ. ರಿಷಬ್ ಶೆಟ್ಟಿ ಕೂಡ ಆರ್ಸಿಗೆ ಸಪೋರ್ಟ್ ಮಾಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಹೀಗಾಗಿ ರಿಷಬ್ ಶೆಟ್ಟಿ ಮತ್ತು ಗೇಲ್ ಒಂದೇ ಗ್ಯಾಲರಿಯಲ್ಲಿ ಇದ್ದಿದ್ದರಿಂದ ಪರಸ್ಪರ ಕೈಕುಲುಕಿ ಬಳಿಕ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
It’s history!!
My first match at stadium!!
See you at the top!
RCB❤️@RCBTweets #RCB #RCBians #IPL2024 #RCBvCSK pic.twitter.com/2NqDPjrQQn— Rishab Shetty (@shetty_rishab) May 18, 2024
ಸದ್ಯ ಆರ್ಸಿಬಿಯ ಮಾಜಿ ಪ್ಲೇಯರ್ ಕ್ರಿಸ್ಗೇಲ್ ಹಾಗೂ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಜೊತೆಯಾಗಿ ಕ್ಲಿಕ್ಕಿಸಿಕೊಂಡಿರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೇ ಫಸ್ಟ್ ಟೈಮ್ ನಾನು ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿದ್ದು. ಆರ್ಸಿಬಿ ಗೆದ್ದು ಇತಿಹಾಸ ಬರೆದಿದೆ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ನೆಟ್ಟಿಗರು ಕೂಡ ವಿಧ ವಿಧವಾದ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಇನ್ನು ಫೋಟೋದಲ್ಲಿ ರಿಷಬ್ ಶೆಟ್ಟಿ ಕಪ್ಪು ಶರ್ಟ್, ವೈಟ್ ಪಂಚೆಯಲ್ಲಿ ಕಂಗೊಳಿಸಿದರೆ, ಕ್ರಿಸ್ಗೇಲ್ ಆರ್ಸಿಬಿ ಜೆರ್ಸಿಯಲ್ಲಿ ಮಿಂಚಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ