ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ಆಡಲಿದೆ ಬೆಂಗಳೂರು ತಂಡ
ಮುಂದಿನ ಮ್ಯಾಚ್ ಅನ್ನು ಯಾರ ವಿರುದ್ಧ ಆರ್ಸಿಬಿ ತಂಡ ಆಡಲಿದೆ..?
ಈಗಾಗಲೇ ಚೆನ್ನೈನ ಬಗ್ಗು ಬಡಿದು ಪ್ಲೇ ಆಫ್ಗೆ ಎಂಟ್ರಿಕೊಟ್ಟ ಆರ್ಸಿಬಿ
ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ 27 ರನ್ಗಳಿಂದ ರಾಯಲ್ ಚಾಲೆಂಜರ್ಸ್ ತಂಡ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್ಗೆ ರಾಯಲ್ ಆಗಿ 4ನೇ ತಂಡವಾಗಿ ಎಂಟ್ರಿ ಕೊಟ್ಟಿದೆ. ಸಿಎಸ್ಕೆ ಜೊತೆ ಬೆಂಗಳೂರು ತಂಡ 18 ರನ್ಗಳು ಅಂತರದಿಂದ ಗೆಲ್ಲಬೇಕಾಗಿತ್ತು. ಆದ್ರೆ ಅದಕ್ಕಿಂತ ಹೆಚ್ಚಿನ ರನ್ಗಳಿಂದಲೇ ಮ್ಯಾಚ್ ವಿನ್ ಆಗಿದೆ. ಇನ್ನು ಮುಂದಿನ ಪಂದ್ಯ ಯಾರ ಜೊತೆ ಎನ್ನುವುದು ಇಂದು ರಾತ್ರಿ ವೇಳೆಗೆ ಗೊತ್ತಾಗಲಿದೆ.
ಐಪಿಎಲ್ನ ಪಾಯಿಂಟ್ ಪಟ್ಟಿಯಲ್ಲಿ ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಟಾಪ್ ಅಲ್ಲಿ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ಇದೆ. ಸನ್ ರೈಸರ್ಸ್ ಹೈದ್ರಾಬಾದ್ 3ನೇ ಸ್ಥಾನ ಪಡೆದುಕೊಂಡಿದ್ದು ಚೆನ್ನೈ ವಿರುದ್ಧ ಗೆಲ್ಲುವ ಮೂಲಕ ಆರ್ಸಿಬಿ 4ನೇ ತಂಡವಾಗಿ ಪ್ಲೇ ಆಫ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಆದ್ರೆ ಇಂದು 3:30ಕ್ಕೆ ಪಂಜಾಬ್ ಜೊತೆ ಹೈದ್ರಾಬಾದ್ ಟೀಮ್ ಸೆಣಸಾಟ ನಡೆಸಲಿದೆ. ಜೊತೆಗೆ 7:30ಕ್ಕೆ ರಾಜಸ್ಥಾನ ರಾಯಲ್ಸ್ ವಿರುದ್ಧ ಕೆಕೆಆರ್ ಪೈಪೋಟಿಗೆ ಬೀಳಲಿದೆ. ಈ ಪಂದ್ಯಗಳ ಫಲಿತಾಂಶ ಬಂದ ಮೇಲೆ ಆರ್ಸಿಬಿಯು ಮುಂದಿನ ಪಂದ್ಯದಲ್ಲಿ ಯಾರ ಜೊತೆ ಅಖಾಡಕ್ಕೆ ಇಳಿಯಲಿದೆ ಎಂದು ಗೊತ್ತಾಗಲಿದೆ.
ಇದನ್ನೂ ಓದಿ: RCB ಮಾಜಿ ಪ್ಲೇಯರ್ ಜೊತೆ ಪಂದ್ಯ ವೀಕ್ಷಿಸಿದ ಡಿವೈನ್ ಸ್ಟಾರ್.. ಕ್ರಿಸ್ಗೇಲ್ ಜೊತೆ ಕಾಣಿಸಿದ ರಿಷಬ್ ಶೆಟ್ಟಿ
ಆರ್ಸಿಬಿ ಯಾರ ಜೊತೆ ಕಣಕ್ಕೆ ಇಳಿಯಲಿದೆ ಎನ್ನುವುದು ಗೊತ್ತಾದ ಬಳಿಕ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ 7:30ಕ್ಕೆ ನಡೆಯಲಿದೆ. ಇದೇ ಸ್ಟೇಡಿಯಂನಲ್ಲಿ ಕೆಕೆಆರ್ ಕೂಡ ಒಂದು ಪಂದ್ಯ ಆಡಲಿದೆ. ಆದ್ರೆ ಮುಂದಿನ ಪಂದ್ಯಗಳನ್ನು ಯಾವ ಟೀಮ್, ಯಾರ ಜೊತೆ ಸೆಣಸಾಟ ನಡೆಯಲಿದೆ ಎನ್ನುವುದು ಇವತ್ತು ಸಂಜೆ ವೇಳೆಗೆ ಬಹುತೇಕ ಗೊತ್ತಾಗಲಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ