newsfirstkannada.com

RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?

Share :

Published May 19, 2024 at 8:34am

Update May 19, 2024 at 8:37am

    ನಮ್ಮ ಬೆಂಗಳೂರಿನಲ್ಲಿ ಕೊಹ್ಲಿ ಏನೆಲ್ಲಾ ಸಾಧನೆ ಮಾಡಿದ್ದಾರೆ?

    ಬೆಂಗಳೂರಿಗರೇ, ಕೊಹ್ಲಿ ಚಿನ್ನಸ್ವಾಮಿಯಲ್ಲಿ ಬರೆದ ಸಾಧನೆ ಕೇಳಿದ್ರಾ?

    ಸಿಎಸ್​​ಕೆಯನ್ನು ಸೋಲಿಸಿ 9ನೇ ಬಾರಿಗೆ ಪ್ಲೇಆಫ್​ಗೆ ಅರ್ಹತೆ ಪಡೆದ ಆರ್​ಸಿಬಿ

ನಿನ್ನೆ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 27 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರ ಆರ್​ಸಿಬಿ ತಂಡ ಪ್ಲೇಆಫ್​ಗೂ ಬಲಗಾಲಿಟ್ಟಿದೆ. ಇದಲ್ಲದೆ, ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್​ ಕೊಹ್ಲಿ ದಾಖಲೆಯನ್ನು ಬರೆದಿದ್ದಾರೆ. ಅವರ ದಾಖಲೆಯನ್ನು ನೋಡೋದಾದ್ರೆ..

ಅಭಿಮಾನಿಗಳ ನೆಚ್ಚಿನ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಚೆನ್ನೈ ತಂಡವನ್ನು ಸೋಲಿಸಿ 14 ಅಂಕ ಗಳಿಸಿದೆ. ಆ ಮೂಲಕ ರುತುರಾಜ್​ ಗಾಯಕ್ವಾಡ್​ ತಂಡವನ್ನು ಮನೆಗೆ ಕಳುಹಿಸಿದೆ. ರನ್​ರೇಟ್​​ನಲ್ಲಿ ಸಿಎಸ್​​ಕೆ ತಂಡವನ್ನು ಮಣಿಸಿದ ಆರ್​ಸಿಬಿ 9ನೇ ಬಾರಿಗೆ ಪ್ಲೇಆಫ್​ಗೆ ಅರ್ಹತೆ ಪಡೆದಿದ್ದಾರೆ.

ಚೆನ್ನೈ ವಿರುದ್ಧ ಕೊಹ್ಲಿ 47 ರನ್​ ಗಳಿಸಿದ್ದಾರೆ. ಐಪಿಎಲ್​ ಸರಣಿಯಲ್ಲಿ ಬೆಂಗಳೂರು ಮೈದಾನದಲ್ಲಿ ಕೊಹ್ಲಿ 89 ಪಂದ್ಯ ಆಡಿದ್ದಾರೆ. ಅದರಲ್ಲಿ 3005 ರನ್​ ಬಾರಿಸಿದ್ದಾರೆ. ಆ ಮೂಲಕ ಒಂದೇ ಸ್ಥಳದಲ್ಲೇ 3 ಸಾವಿರ ರನ್​ ದಾಟಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಎಸ್​ಕೆ ವಿರುದ್ಧ ವಿರಾಟ್​​ 3 ಅರ್ಧಶತಕ ಬಾರಿಸಿ 280 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲೇ ಕಣ್ಣೀರು ಸುರಿಸಿದ ಕೊಹ್ಲಿ.. ಇದು RCB ಅಭಿಮಾನಿಗಳ ಮನಮುಟ್ಟುವ ಸ್ಟೋರಿ

ವಿರಾಟ್​ ಕೊಹ್ಲಿ ಟಿ20ಐ ಭಾರತದ ನೆಲದಲ್ಲಿ 9 ಸಾವಿರ ರನ್​​ಗಳ ಮೈಲುಗಲ್ಲು ದಾಟಿದ ಮೊದಲ ಭಾರತೀಯ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಅಂದಹಾಗೆಯೇ ಕೊಹ್ಲಿ ಭಾರತದಲ್ಲಿ ಒಟ್ಟು 268 ಟಿ20 ಪಂದ್ಯ ಆಡಿದ್ದು, 9,014 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?

ಇದಲ್ಲದೆ, ಪ್ರಸಕ್ತ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸ್​ ಸಿಡಿಸಿದವರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಂದಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್​​ 37 ಸಿಕ್ಸ್ ಬಾರಿಸಿದ್ದಾರೆ. ಇನ್ನು ಈ ಋತುವಿನಲ್ಲಿ 14 ಪಂದ್ಯವಾಡಿದ್ದು, ಒಂದು ಶತಕ, 5 ಅರ್ಧ ಶತಕ ಜೊತೆಗೆ 708 ರನ್​ ಬಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?

https://newsfirstlive.com/wp-content/uploads/2024/05/Virat-Kohli-3.jpg

Load More