newsfirstkannada.com

ಖುಷಿಯಲ್ಲಿ ಫಾಫ್​ ಕೆನ್ನೆಗೆ ಮುತ್ತಿಟ್ಟ ಕೊಹ್ಲಿ.. ಅನುಷ್ಕಾಗೆ ಟ್ಯಾಗ್​ ಮಾಡಿದ ಫ್ಯಾನ್ಸ್​!

Share :

Published May 19, 2024 at 11:06am

Update May 19, 2024 at 11:09am

    ಗೆಲುವಿನ ಗೆರೆ ದಾಟಿದ ಆರ್​ಸಿಬಿ.. ವಿರಾಟ್​​ ಕೊಹ್ಲಿಗೇ ಖುಷಿಯೇ ಖುಷಿ

    ಓಡುತ್ತಾ, ಚೀರುತ್ತಾ, ನಾಯಕ ಫಾಫ್ ಬೆನ್ನೇರಿ ಕುಳಿತ ಕಿಂಗ್​ ಕೊಹ್ಲಿ​

    ಫಾಫ್​ ಕೆನ್ನೆಗೆ ಸಿಹಿ ಮುತ್ತು ಕೊಟ್ಟ ವಿರಾಟ್​.. ಫ್ಯಾನ್ಸ್​ ಕಾಮೆಂಟ್​ ನೋಡಿದ್ರಾ?

ಆರ್​ಸಿಬಿ ತಂಡ ಫ್ಲೇಆಫ್​ಗೆ ಕಾಲಿಡುತ್ತಿರೋ ಖುಷಿ ಅಭಿಮಾನಿಗಳಿಗೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಕೊಹ್ಲಿ ಕತೆ ಏನು. ಚೀರುತ್ತಾ, ಹಾರುತ್ತಾ ಕೊನೆಗೊ ಫಾಫ್​ ಬೆನ್ನೇರಿದ ಕೊಹ್ಲಿ ಮುತ್ತು ಕೊಟ್ಟೇ ಬಿಟ್ರು!.

ಹೌದು. ಯಾರು ಸುಳ್ಳು ಹೇಳಿದ್ರು ಕ್ಯಾಮೆರಾ ಸುಳ್ಳು ಹೇಳಲು ಸಾಧ್ಯವಿಲ್ಲ. ಕ್ಯಾಮೆರಾ ಕಣ್ಣಿಗೆ ಕೊಹ್ಲಿ ಖುಷಿಯನ್ನು ಸೆರೆ ಹಿಡಿಯುವುದೇ ಒಂದು ಕೆಲಸವಾಗಿತ್ತು. ಅದರಲ್ಲೂ ಅನೇಕ ಅಡಚಣೆಯ ನಡುವೆಯೂ ಆರ್​ಸಿಬಿಗೆ ಜಯ ಸಿಕ್ಕಾಗ ಆ ಜಯವನ್ನು ಕೊಹ್ಲಿ ನಾಯಕ ಫಾಫ್​​ ಮೇಲೆ ತೋರ್ಪಡಿಸಿದ ರೀತಿಯದು.

ಆರ್​ಸಿಬಿ ನಾಯಕನ ಬೆನ್ನೇರಿದ ಕೊಹ್ಲಿ ಮೈದಾನದಲ್ಲೇ ಫಾಫ್​​ ಕೆನ್ನೆಗೆ ಮುತ್ತಿಟ್ಟು ಬಿಟ್ಟಿದ್ರು. ಇದನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು. ಮಳೆಯ ಅವಾಂತರ , ಕೈಕೊಟ್ಟ ಪಿಚ್​, ವಿಕೆಟ್​ ಪತನ ಇದರ ನಡುವೆ ಆರ್​ಸಿಬಿ 27 ರನ್​ಗಳ ಭರ್ಜರಿ ಜಯದ ಗೆಲುವು ನೆನಪಲ್ಲಿ ಉಳಿಯುವಂತೆ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಮತ್ತು ಫಾಫ್​ ಸಂತದ ದೃಶ್ಯ ವೈರಲ್​ ಆಗಿದೆ. ಅನೇಕರು ಈ ದೃಶ್ಯ ಕಂಡು ಕೊಹ್ಲಿ, ಅನುಷ್ಕಾ ಮತ್ತು ಫಾಫ್​​ ಕಾಳೆದಿದ್ದಾರೆ. ಅದರಲ್ಲೊಬ್ಬ ಅನುಷ್ಕಾ ಈ ದೃಶ್ಯದ ಬಗ್ಗೆ ನೀವೇ ವಿವರಣೆ ನೀಡಬೇಕು ಎಂದು ಹೇಳಿದ್ದಾನೆ.

ಇದನ್ನೂ ಓದಿ: 140-150 ರನ್​ ಟಾರ್ಗೆಟ್​ ಹಾಕೊಂಡಿದ್ವಿ, ಧೋನಿ ಬಗ್ಗೆಯೂ ಯೋಚಿಸಿದ್ದೆ.. ಜಯದ ಬಳಿಕ ಫಾಫ್​ ಅಚ್ಚರಿಯ ಮಾತುಗಳು 

ಕಣ್ಣೀರಿಟ್ಟ ಕೊಹ್ಲಿ 

ಕೊಹ್ಲಿಗೆ ನಿನ್ನೆಯ ಗೆಲುವು ದೊಡ್ಡ ಸಮಧಾನ ನೀಡಿದೆ. ತನ್ನ ಛಲ, ಹೋರಾಟದ ಪ್ರತಿಫಲವಾಗಿ ಆರ್​ಸಿಬಿ ಪ್ಲೇಆಪ್​ಗೆ ಹೋಗಿರುವುದನ್ನು ತನ್ನಿಂದಲೇ ನಂಬಲಾಗುತ್ತಿಲ್ಲವೆಂಬಂತೆ ಮೈದಾನದಲ್ಲಿ ಕೊಹ್ಲಿ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: VIDEO: ಅವರು ಧೋನಿಯನ್ನು ನಾನ್​ಸೆನ್ಸ್​ ಎಂದು ದೂಷಿಸುತ್ತಾರೆ.. ಮಾಹಿ ಬಗ್ಗೆ ಕೊಹ್ಲಿ ಹೀಗ್ಯಾಕಂದ್ರು?

ಅತ್ತ ಅನುಷ್ಕಾ ಶರ್ಮಾ ಕೂಡ ಗಂಡನ ಸಂತಸವನ್ನು ಕಣ್ಣಾರೆ ಕಂಡು ಮೈದಾನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾತ್ರವಲ್ಲದೆ ಗಂಡನ ಖುಷಿಯನ್ನು ಕಂಡ ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ಸಿಕ್ಕಿದ್ದು, ಸದ್ಯ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಖುಷಿಯಲ್ಲಿ ಫಾಫ್​ ಕೆನ್ನೆಗೆ ಮುತ್ತಿಟ್ಟ ಕೊಹ್ಲಿ.. ಅನುಷ್ಕಾಗೆ ಟ್ಯಾಗ್​ ಮಾಡಿದ ಫ್ಯಾನ್ಸ್​!

https://newsfirstlive.com/wp-content/uploads/2024/05/Virat-Kohli-4.jpg

Load More