ಸಿಎಸ್ಕೆ ಆಟಗಾರನ ಬಗ್ಗೆ ಚಿಂತಿಸಿದ್ದ ಫಾಫ್!
ಗೆಲುವಿನ ಬಳಿಕ ಆ ಆಟಗಾರನ ಬಗ್ಗೆ ಬಾಯ್ಬಿಟ್ಟ ಆರ್ಸಿಬಿ ನಾಯಕ
ಫಾಫ್ ಮತ್ತು ವಿರಾಟ್ ಹಾಕಿಕೊಂಡಿದ್ರು ಸಾಧಾರಣ ಟಾರ್ಗೆಟ್
‘‘ಮಳೆ ಬಂದ ನಂತರ ನಾವು ಮೊದಲೇ ನಿಧನವಾಗಿ ಆಡುತ್ತಿದ್ದೆವು. ಹೆಚ್ಚಿನ ಉದ್ದೇಶವನ್ನು ಬಯಸಿದ್ದೆವು. 175 ರನ್ ಬಾರಿಸಲು ಯೋಚಿಸಿದ್ದೆವು. ಅದು ಸ್ವಲ್ಪ ಹತ್ತಿರವಾಯಿತು. ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದೆ. ಆತ ಅದನ್ನು ಹಲವು ಬಾರಿ ಅದನ್ನು ಮೀರಿಸಿದ್ದಾರೆ’’- ಫಾಫ್ ಡು ಪ್ಲೆಸಿಸ್
ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ಗೆ ಪಂದ್ಯದ ಜೊತೆ ಜೊತೆಗೆ ಧೋನಿ ಬಗ್ಗೆ ಚಿಂತೆ ಮಾಡಿದ್ದರಂತೆ. ಕಾರಣ ಸುಲಭ ಸವಾಲನ್ನು ಧೋನಿ ತೀರಿಸಿಬಿಡುತ್ತಾರೋ ಎಂಬ ಯೋಚನೆ ಬಂದಿತ್ತಂತೆ. ಭರ್ಜರಿ ಜಯದ ಬಳಿಕ ಫಾಫ್ ಈ ವಿಚಾರವಾಗಿ ಮಾತನಾಡಿದ್ದಾರೆ.
ಆರ್ಸಿಬಿ ನಾಯಕ ಏನಂದ್ರು?
‘‘ಎಂತಹ ರಾತ್ರಿ. ನಂಬಲಾಗದಂತಹ ಮತ್ತು ಉತ್ತಮ ವಾತವರಣ. ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ. ಮೊದಲು ಬ್ಯಾಟಿಂಗ್ ಮಾಡುವುದರಿಂದ, ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ 140-150 ರನ್ ಬಾರಿಸುವ ಟಾರ್ಗೆಟ್ ಬಗ್ಗೆ ಮಾತನಾಡುತ್ತಿದ್ದೆವು. ಮಳೆಯಿಂದಾಗಿ ಪಿಚ್ ಒದ್ದೆಯಾಗುತ್ತದೆ ಎಂದು ಅಂಪೈರ್ ಮಾತನಾಡುತ್ತಿದ್ದರು. ಅವರು ಆಟವನ್ನು ಮುಂದೂಡಲು ಬಯಸಿದರು. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆ’’ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿದ ಅವರು, ‘‘ನಾನು ಸ್ಯಾಂಟ್ನರ್ಗೆ ಹೇಳುತ್ತಿದ್ದೆ, ಇದು ರಾಂಚಿಯಲ್ಲಿ ನಡೆದಂತೆ 5ನೇ ದಿನ ಟೆಸ್ಟ್ ಪಂದ್ಯವಾಗಿದೆ. ಅದರಲ್ಲಿ 200 ರನ್ ಗಳಿಸೋದು ಕೂಡ ನಂಬಲಸಾಧ್ಯವಾಗಿತ್ತು. ಕಳೆದ 6 ಪಂದ್ಯಗಳಲ್ಲಿ ಬ್ಯಾಟರ್ಗಳು ಉತ್ತಮ ಉದ್ದೇಶ ಮತ್ತು ಉತ್ತಮ ಸ್ಟೈಕ್ ರೇಟ್ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ’’ ಎಂದರು.
175 ರನ್ ಬಾರಿಸಲು ಯೋಚಿಸಿದ್ದೆವು
ನಾವು ಮೊದಲೇ ನಿಧನವಾಗಿ ಆಡುತ್ತಿದ್ದೆವು. ಹೆಚ್ಚಿನ ಉದ್ದೇಶವನ್ನು ಬಯಸಿದ್ದೆವು. 175 ರನ್ ಬಾರಿಸಲು ಯೋಚಿಸಿದ್ದೆವು. ಅದು ಸ್ವಲ್ಪ ಹತ್ತಿರವಾಯಿತು. ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದೆ. ಆತ ಅದನ್ನು ಹಲವು ಬಾರಿ ಮೀರಿಸಿದ್ದಾನೆ. ಒದ್ದೆಯಾದ ಚೆಂಡಿನೊಂದಿಗೆ ನಾವು ಬೌಲಿಂಗ್ ಮಾಡಿದ ರೀತಿ ನಂಬಲಾಗದಂತಿತ್ತು. ಅದನ್ನು ನಾವು ಬದಲಾಯಿಸಲು ಯತ್ನಿಸಿದೆವು.
ಮ್ಯಾನ್ ಆಫ್ ದಿ ಮ್ಯಾಚ್ ಯಶ್ ದಯಾಳ್ಗೆ ಅರ್ಪಿಸುತ್ತೇನೆ
ನಾನು ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ಯಶ್ ದಯಾಳ್ಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್ ಮಾಡಿದ ರೀತಿ ನಂಬಲಸಾಧ್ಯವಾದಂತಿತ್ತು. ಯಾರ್ಕರ್ ಮೊದಲ ಎಸೆತದಲ್ಲೆ ವರ್ಕೌಟ್ ಆಗಿಲ್ಲ. ಬಳಿಕ ವೇಗವಾಗಿ ಎಸೆಯಲು ಯತ್ನಿಸಿದರು. ಅದು ಚೆನ್ನಾಗಿ ಕೆಲಸ ಮಾಡಿತು. ಸಿಎಸ್ಕೆ ಮತ್ತು ಆರ್ಸಿಬಿ ನಂಬಲಾಗದ ವಾತವರಣ ಮತ್ತು ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ. ನಾವು 6 ಪಂದ್ಯ ಗೆದ್ದಿದ್ದು ನಿಜವಾಗಿ ಮುಖ್ಯವಾಗಿದೆ ಎಂದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ