newsfirstkannada.com

RCB ಮರೆಯದ ವಿಜಯ್ ಮಲ್ಯ.. ಪ್ಲೇ ಆಫ್​ಗೆ ಬೆಂಗಳೂರು ರಾಯಲ್​ ಎಂಟ್ರಿ ಕೊಟ್ಟಿದ್ದಕ್ಕೆ ಏನಂದ್ರು?

Share :

Published May 19, 2024 at 11:47am

    ವಿಶ್ವದ ಯಾವುದೇ ಮೂಲೆಯಲ್ಲಿದ್ರೂ ಆರ್​ಸಿಬಿಗಾಗಿ ಆ ಸಂದೇಶ

    27 ರನ್​ಗಳಿಂದ CSKಯನ್ನು ಮಣಿಸಿ ಆರ್​ಸಿಬಿ ಗೆಲುವು ಪಡೆದಿದೆ

    ಆರ್​ಸಿಬಿ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಹೇಳಿರುವುದು ಏನು?

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಡು ಆರ್​ ಡೈ ಮ್ಯಾಚ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಜಿದ್ದಾಜಿದ್ದಿ ನಡೆಸಿದ್ದವು. ಹೈವೋಲ್ಟೇಜ್​ ಮ್ಯಾಚ್​ನಲ್ಲಿ ಚೆನ್ನೈಯನ್ನು 27 ರನ್​ಗಳಿಂದ ಮಣಿಸಿ ಆರ್​ಸಿಬಿ ಜಯಭೇರಿ ಬಾರಿಸಿದೆ. ಇನ್ನು ಬೆಂಗಳೂರು ತಂಡ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದ್ದಕ್ಕೆ ಆರ್​ಸಿಬಿಯ ಮಾಜಿ ಮಾಲೀಕ ವಿಜಯ ಮಲ್ಯ ಅವರು ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್​ ಪೋಸ್ಟ್​ನಲ್ಲಿ ಉದ್ಯಮಿ ವಿಜಯ್ ಮಲ್ಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಮೂಲಕ ಹೃದಯ ಪೂರಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು ಎಂದು ಉದ್ಯಮಿ ವಿಜಯ್​ ಮಲ್ಯ ಹೇಳಿದ್ದಾರೆ.

ಈ ಹಿಂದೆ ಆರ್​ಸಿಬಿ ಮಹಿಳಾ ತಂಡ WPL ಟೂರ್ನಿಯ ಫೈನಲ್​ನಲ್ಲಿ ಕಪ್​ ಗೆದ್ದಾಗಲೂ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದರು. ಇದೀಗ ಚೆನ್ನೈ ವಿರುದ್ಧ ಆರ್​ಸಿಬಿ ಗೆದ್ದು ಪ್ಲೇ ಆಫ್​ಗೆ ಹೋಗಿದ್ದಕ್ಕೆ ಮಲ್ಯ ಶುಭಾಶಯಗಳನ್ನು ತಿಳಿಸಿದ್ದಾರೆ. RCB ಪುರುಷರ ತಂಡ ಐಪಿಎಲ್ ಗೆದ್ದರೆ ಈ ಖುಷಿ ಡಬಲ್ ಆಗಲಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಮಲ್ಯ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದು ಶೇರ್ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಮರೆಯದ ವಿಜಯ್ ಮಲ್ಯ.. ಪ್ಲೇ ಆಫ್​ಗೆ ಬೆಂಗಳೂರು ರಾಯಲ್​ ಎಂಟ್ರಿ ಕೊಟ್ಟಿದ್ದಕ್ಕೆ ಏನಂದ್ರು?

https://newsfirstlive.com/wp-content/uploads/2024/05/VIRAT_VIJAY_MALYA.jpg

Load More