ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು
ದಾಳಿ ವೇಳೆ ಮಾದಕ ವಸ್ತುಗಳಾದ ಎಂಡಿಎಂಎ ಮತ್ತು ಕೊಕೇನ್ ಪತ್ತೆ
ಪಾರ್ಟಿಯಲ್ಲಿ ಕಿರುತೆರೆ ಹಾಗೂ ಸಿನಿಮಾ ನಟಿಯರು ಭಾಗಿ
ಬೆಂಗಳೂರು: ಮಾದಕವಸ್ತು ಎಂಡಿಎಂಎ ಮತ್ತು ಕೊಕೇನ್ ಜೊತೆಗೆ ರೇವ್ ಪಾರ್ಟಿ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ಮಾಡಿದಾಗ ಸಿನಿಮಾ ನಟಿಯರು, ಮಾಡೆಲ್ಗಳು, ಡಿಜೆಗಳು ಇರುವುದು ಬೆಳಕಿಗೆ ಬಂದಿದೆ. ಸದ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬರ್ತ್ ಡೇ ಹೆಸರಿನಲ್ಲಿ ಸನ್ ಸೆಟ್ ಟು ಸನ್ ರೈಸ್ ಎಂದು ಪಾರ್ಟಿ ಆಯೋಜನೆ ಮಾಡಲಾಗಿತ್ತು. ಭಾನುವಾರ ಸಂಜೆ ಐದು ಘಂಟೆ ಯಿಂದ ಬೆಳಗ್ಗೆ ಆರು ಘಂಟೆ ತನಕ ಪಾರ್ಟಿ ನಡೆಯುತ್ತಿತ್ತು. ಆಂಧ್ರ ಹಾಗೂ ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಪತ್ತೆಯಾಗಿದ್ದಾರೆ. ತೆಲುಗು ಸಿನಿರಂಗದ ಕಿರುತೆರೆ ಹಾಗೂ ಸಿನಿಮಾ ನಟಿಯರು ಸೇರಿದಂತೆ 25ಕ್ಕೂ ಹೆಚ್ಚು ಯುವತಿಯರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಾದಕ ವಸ್ತುಗಳ ಜೊತೆಗೆ ರೇವ್ ಪಾರ್ಟಿ! MLA ಪಾಸ್ ಕೂಡ ಪತ್ತೆ! ಯಾರವರು ಗೊತ್ತಾ?
ಪಾರ್ಟಿಯಲ್ಲಿ ಡಿಜೆ, ಮಾಡೆಲ್, ಟೆಕ್ಕಿಗಳು
ರೇವ್ ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್ಗಳು ಹಾಗೂ ಟೆಕ್ಕಿಗಳು ಪತ್ತೆಯಾಗಿದ್ದಾರೆ. ಡಿಜೆಗಳಾದ RABZ, KAYVEE ಮತ್ತು BLOODY MASCARA ಗಳು ಭಾಗಿಯಾಗಿದ್ದಾರೆ. ಸದ್ಯ ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ
ಆ ನಟಿ ಯಾರು?
ಪಾರ್ಟಿಯಲ್ಲಿ ತೆಲುಗು ಸಿನಿರಂಗದ ಕಿರುತೆರೆ ಹಾಗೂ ಪೋಷಕ ನಟಿರೊಬ್ಬರು ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಪಾರ್ಟಿಯಲ್ಲಿ ಭಾಗಿಯಾಗಿದ್ದ ಐವತ್ತಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ