newsfirstkannada.com

KGF ಪಾರ್ಟ್​-1 ಹಿಟ್​ ಆಗ್ಲಿಲ್ಲ.. ಪಾರ್ಟ್​- 2 ಬ್ಲಾಕ್ ​ಬಸ್ಟರ್​ ಹಿಟ್; RCB ಫುಲ್​ ಪೈಸಾ ವಸೂಲ್​

Share :

Published May 20, 2024 at 2:10pm

    ಎದುರಾಳಿ ಹಣಿಯಲು ನಾಯಕ ರೂಪಿಸಿದ ರಣತಂತ್ರ ಸಕ್ಸಸ್​

    ಬೆಂಗಳೂರಿನ ಸಕ್ಸಸ್​ನ ಬಹುಪಾಲು ಕ್ರೆಡಿಟ್​ ಕೊಹ್ಲಿಗೆ ಸಲ್ಲಬೇಕಾ..?

    ಕೋಟಿ ವೀರ ಕ್ಯಾಮರೂನ್​ ಗ್ರೀನ್​ ಕಮ್​ಬ್ಯಾಕ್​​ ಪ್ಲಸ್​ ಪಾಯಿಂಟ್

ಫಸ್ಟ್​​ ಹಾಫ್​ ಐಪಿಎಲ್​ನಲ್ಲಿ ಆರ್​​ಸಿಬಿ ಫ್ಯಾನ್ಸ್​ ನೊಂದು ಬೆಂದಿದ್ರು. ಸತತ ಸೋಲಿನ ಬೇಸರ, ಹತಾಶೆ, ನೋವು ಬಿಡದೇ ಕಾಡಿತ್ತು. ಆದ್ರೆ, ಸೆಕೆಂಡ್​ ಹಾಫ್​​ನಲ್ಲಿ ಭರಪೂರ​​ ಎಂಟರ್​​ಟೈನ್​ಮೆಂಟ್​ ಫ್ಯಾನ್ಸ್​ಗೆ ಸಿಕ್ಕಿದೆ. ಈ ಸೀಸನ್​ನಲ್ಲಿ ಆರ್​​ಸಿಬಿಯ ಕೆಜಿಎಫ್​ ಪಾರ್ಟ್-​​ 1 ವರ್ಕೌಟ್​ ಆಗ್ಲಿಲ್ಲ. ಆದ್ರೆ, ಪಾರ್ಟ್​- 2 ಬ್ಲಾಕ್ ​ಬಸ್ಟರ್​ ಹಿಟ್​ ಆಗಿದೆ. ಫ್ಯಾನ್ಸ್​ಗಂತೂ ಪೈಸಾ ವಸೂಲ್​ ಎಂಟರ್​​ಟೈನ್​ಮೆಂಟ್​ ಸಿಗ್ತಿದೆ.

ಬಹುಷಃ ಕ್ರಿಕೆಟ್​ ಲೋಕದಲ್ಲೇ ಯಾರೂ ನಿರೀಕ್ಷೆ ಮಾಡಿರಲಿಲ್ಲ ಅನ್ಸುತ್ತೆ. ಹೀಗಾಗುತ್ತೆ ಅಂತಾ. ಈ ಸೀಸನ್​​ ಐಪಿಎಲ್​ ಟೂರ್ನಿಯನ್ನ ಹೊಸ ಅಧ್ಯಾಯ ಅಂತಾ ಶುರು ಮಾಡಿದ್ದ ಆರ್​​ಸಿಬಿ, ಹಳೆ ಸಂಪ್ರದಾಯವನ್ನೇ ಮುಂದುವರೆಸಿತ್ತು. ಮೊದಲ 8 ಪಂದ್ಯಗಳಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡಿತ್ತು. ಈ ಕಳಪೆಯಾಟ ನೋಡಿ ಲಾಯಲ್​​ ಫ್ಯಾನ್ಸ್​ ಕೂಡ ರೊಚ್ಚಿಗೆದ್ದಿದ್ರು. ಆಗ ಬಹುತೇಕ ಎಲ್ಲರೂ ಈ ಸೀಸನ್​​​ನಲ್ಲಿ ಆರ್​​ಸಿಬಿ ಕಥೆ ಮುಗೀತು ಎಂದೇ ತಿರ್ಮಾನಿಸಿಬಿಟ್ಟಿದ್ರು.

ಇದನ್ನೂ ಓದಿ: ವಿಲನ್​ಗಳೇ ಹೀರೋಗಳಾದ ಕಥೆ.. ಈ ಯಂಗ್​ ಪ್ಲೇಯರ್ ಆಡಿದ ಪಂದ್ಯಗಳಲ್ಲಿ RCBಗೆ ರೋಚಕ ಗೆಲುವು

ನೋಡಿ, ಇದು ಒಂದು ಪಂದ್ಯದ ವಿಚಾರ. ಒಂದು ಪಂದ್ಯದಲ್ಲಿ ಕೆ.ಜಿ.ಎಫ್​​ ಚನ್ನಾಗಿ ಆಡಿದ್ರೆ, ನಮ್ಮನ್ನ ಯಾರೂ ತಡೆಯೋಕೆ ಆಗಲ್ಲ.

ಮೊಹಮ್ಮದ್ ಸಿರಾಜ್, ಆರ್​ಸಿಬಿ ಬೌಲರ್

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಪಡೆ ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದಾಗ ಸಿರಾಜ್​ ಆಡಿದ ಮಾತುಗಳಿವು. ತಂಡ ಹೀನಾಯ ಸ್ಥಿತಿ ತಲುಪಿದ್ರೂ, ನಾವು ಪುಟಿದೇಳುತ್ತೇವೆ ಅನ್ನೋ ವಿಶ್ವಾಸ ಸಿರಾಜ್​ ಮಾತುಗಳಲ್ಲಿತ್ತು. ಆ ವಿಶ್ವಾಸಕ್ಕೆ ಕಾರಣಕ್ಕೆ ಕೆ.ಜಿ.ಎಫ್​ ಜೋಡಿ. ಸದ್ಯ ಆರ್​​ಸಿಬಿಯ ಕಮ್​​ಬ್ಯಾಕ್​ ಹಿಂದಿನ ಸೀಕ್ರೆಟ್​ ಕೂಡ ಇದೇ ಕೆ.ಜಿ.ಎಫ್​ ಜೋಡಿಯೇ ಆಗಿದೆ. ಆದ್ರೆ, ಇದು ಕೆ.ಜಿ.ಎಫ್​ ಪಾರ್ಟ್-​ 2 ಕಹಾನಿ.

ವಿಧಿಯಾಟವನ್ನೇ ಬದಲಿಸಿದ ತ್ರಿಮೂರ್ತಿಗಳು.!

ಕ್ಯಾಪ್ಟನ್​ ಫಾಫ್​ ಡುಪ್ಲೆಸಿ, ವಿರಾಟ್​ ಕೊಹ್ಲಿ, ಗ್ಲೆನ್​ ಮ್ಯಾಕ್ಸ್​ವೆಲ್​.. ಈ ಮೂವರನ್ನ ಆರ್​​ಸಿಬಿ ಅಭಿಮಾನಿ ಕೆಜಿಎಫ್​ ಸ್ಟಾರ್ಸ್​ ಎಂದೇ ಕರೀತಾ ಇದ್ರು. ಕಳೆದ 2 ಸೀಸನ್​​ಗಳಲ್ಲಿ ಈ ತ್ರಿಮೂರ್ತಿಗಳು ಅಂತಾ ಆಟವಾಡಿದ್ರು. ಹೀಗಾಗಿ ಈ ಸೀಸನ್​ ಆರಂಭಕ್ಕೂ ಮುನ್ನ ಕೂಡ ಇವ್ರ ಮೇಲೆ ತೀವ್ರವಾದ ನಿರೀಕ್ಷೆಯಿತ್ತು. ಆದ್ರೆ, ಅಖಾಡದಲ್ಲಿ ಹುಸಿಯಾಯ್ತು. ಗ್ಲೇನ್​ ಮ್ಯಾಕ್ಸ್​ವೆಲ್​ ಅಂತೂ ಅಟ್ಟರ್​ಫ್ಲಾಫ್​ ಶೋ ನೀಡಿದ್ರು. ಆರ್​​ಸಿಬಿ ಫಸ್ಟ್​ ಹಾಫ್​ನಲ್ಲಿ ಹೀನಾಯ ಸ್ಥಿತಿ ತಲುಪಿದ್ದಕ್ಕೆ ಇದೂ ಒಂದು ಕಾರಣವೇ.

ಮ್ಯಾಕ್ಸ್​ವೆಲ್​ ಫ್ಲಾಪ್​.. ಸಿಡಿದೆದ್ದ ಕ್ಯಾಮರೂನ್​ ಗ್ರೀನ್..!​

ಗ್ಲೇನ್​ ಮ್ಯಾಕ್ಸ್​ವೆಲ್ ನೀಡಿದ​ ಫ್ಲಾಪ್​ ಶೋ ಆರ್​ಸಿಬಿಗೆ ತೀವ್ರವಾದ ಹಿನ್ನಡೆ ತಂದಿಟ್ಟಿತ್ತು. ಆದ್ರೆ, ಸೆಕೆಂಡ್​ ಹಾಫ್​ನಲ್ಲಿ ಆಸಿಸ್​ ಮಿಸೈಲ್​, ಕೋಟಿ ವೀರ ಕ್ಯಾಮರೂನ್​ ಗ್ರೀನ್​ ಸಿಡಿದೆದ್ರು. ಅಸಲಿ ಹೊಸ ಅಧ್ಯಾಯ ಶುರುವಾಗಿದ್ದು ಇಲ್ಲಿಂದಲೇ ನೋಡಿ. ಕೆಜಿಎಫ್​ ಜೋಡಿಯ ಆಟ ವರ್ಕೌಟ್​ ಆಗ್ಲಿಲ್ಲ.. ಕೆಜಿಎಫ್​ ಪಾರ್ಟ್​ 2 ಕಮಾಲ್​ ಮಾಡಿಬಿಡ್ತು.

ಕಿಂಗ್ ​ಕೊಹ್ಲಿ ರಣಾರ್ಭಟ, ಎದುರಾಳಿಗಳಿಗೆ ನಡುಕ.!

ಫಸ್ಟ್​ ಹಾಫ್​ನಲ್ಲಿ ಏಕಾಂಗಿಯಾಗಿ ಹೋರಾಡಿದ್ದ ವಿರಾಟ್​ ಕೊಹ್ಲಿ ಸೆಕೆಂಡ್​ ಹಾಫ್​ನಲ್ಲೂ ಸಾಲಿಡ್​ ಬ್ಯಾಟಿಂಗ್​ ನಡೆಸಿದ್ರು. ಬೌಲರ್​ಗಳ ಮೇಲೆ ಸವಾರಿ ಮಾಡಿದ ಕೊಹ್ಲಿ, ಕನ್ಸಿಸ್ಟೆಂಟ್​ ಆಗಿ ರನ್​ಗಳಿಸಿದ್ರು. ಬ್ಯಾಟಿಂಗ್​ ಮಾತ್ರವಲ್ಲ, ಫೀಲ್ಡಿಂಗ್​ ವೇಳೆಯೋ ಕೊಹ್ಲಿ, ತಂಡಕ್ಕೆ ನೆರವಾದ್ರು. ನಾಯಕನಲ್ಲದಿದ್ರೂ, ಲೀಡ್​​ ರೋಲ್​​ ನಿಭಾಯಿಸಿದ ಕೊಹ್ಲಿ, ಬೌಲರ್​ಗಳಿಗೆ ಪ್ರತಿ ಪಂದ್ಯದಲ್ಲೂ ಅಗತ್ಯ ಟಿಪ್ಸ್​​ ನೀಡ್ತಿದ್ರು. ಫೀಲ್ಡ್​ ಪ್ಲೇಸ್​ಮೆಂಟ್​​, ಗೇಮ್​ಪ್ಲಾನ್​ಗಳಲ್ಲಿ ನಾಯಕ ಫಾಫ್​ ಡುಪ್ಲೆಸಿಗೆ ನೆರವಾದ್ರು. ಆರ್​​ಸಿಬಿ ಸಕ್ಸಸ್​ನ ಬಹುಪಾಲು ಕ್ರೆಡಿಟ್​ ಕೊಹ್ಲಿಗೆ ಸಲ್ಲಬೇಕು.

ಫಾರ್ಮ್​ಗೆ ಮರಳಿದ ಕ್ಯಾಪ್ಟನ್, ಫಾಫ್​ ಫೆಂಟಾಸ್ಟಿಕ್​.!

ಫಸ್ಟ್​ ಹಾಫ್​ನಲ್ಲಿ ರನ್​ಗಳಿಕೆಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ತಿಣುಕಾಡಿದ್ರು. ನಾಯಕನಾಗಿ ಫಾಫ್​ ಫುಲ್​ ಫ್ಲಾಪ್​ ಆಗಿದ್ರು. ಸೆಕೆಂಡ್​ ಹಾಫ್​ನಲ್ಲಿ ಸಾಲಿಡ್​ ಕಮ್​ಬ್ಯಾಕ್​ ಮಾಡಿದ್ರು. ಫಾರ್ಮ್​ ಕಂಡುಕೊಂಡ ಡುಪ್ಲೆಸಿ ಸರಾಗವಾಗಿ ರನ್​ ಕಲೆ ಹಾಕಿದ್ರು. ಎದುರಾಳಿಗಳನ್ನ ಹಣಿಯಲು ನಾಯಕ ರೂಪಿಸಿದ ರಣತಂತ್ರಗಳೂ ಸಕ್ಸಸ್​ ಆದ್ವು. ಫಾಫ್​ ಡುಪ್ಲೆಸಿಯ ಫೆಂಟಾಸ್ಟಿಕ್​ ಆಟ ತಂಡವನ್ನ ಇದೀಗ ಪ್ಲೇ ಆಫ್​ಗೆ ಕ್ವಾಲಿಫೈ ಮಾಡಿದೆ.

ಇದನ್ನೂ ಓದಿ: KSRTC ಬಸ್​- ಕಾರಿನ ಮಧ್ಯೆ ಭಯಾನಕ ಡಿಕ್ಕಿ.. ಸ್ಥಳದಲ್ಲೇ ಚಾಲಕ ಸಾವು, ನಾಲ್ವರ ಸ್ಥಿತಿ ಚಿಂತಾಜನಕ

ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಕ್ಯಾಮರೂನ್​ ಕಮಾಲ್​.!

ವಿರಾಟ್​ ಕೊಹ್ಲಿ, ಫಾಫ್​ ಡುಪ್ಲೆಸಿಗೆ ಕೋಟಿ ವೀರ ಕ್ಯಾಮರೂನ್​ ಗ್ರೀನ್​ ಸಾಥ್​ ನೀಡಿದ್ರು. ಬ್ಯಾಟಿಂಗ್​ನಲ್ಲಿ ಕನ್ಸಿಸ್ಟೆಂಟ್​ ಆಗಿ ರನ್​ಗಳಿಸಿದ ಗ್ರೀನ್​, ಬೌಲಿಂಗ್​ನಲ್ಲಿ ತಂಡದ ಗೇಮ್​ಪ್ಲಾನ್​ಗಳನ್ನ ಸಖತ್ತಾಗಿ ವರ್ಕೌಟ್​​ ಮಾಡಿದ್ರು. ಕೋಟಿ ವೀರ ಕ್ಯಾಮರೂನ್​ ಗ್ರೀನ್​ ಕಮ್​ಬ್ಯಾಕ್​​ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಯ್ತು.

ಕೆ.ಜಿ.ಎಫ್​ ಪಾರ್ಟ್​- 2, ಐಪಿಎಲ್​ ಸೆಕೆಂಡ್​ ಹಾಫ್​ನಲ್ಲಿ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ಫ್ಯಾನ್ಸ್​ಗೆ ಪೈಸಾ ವಸೂಲ್​ ಎಂಟರ್​​ಟೈನ್​​ಮೆಂಟ್​​ ನೀಡ್ತಾ, ತಂಡವನ್ನ ಪ್ಲೇ ಆಫ್​ ದಡವನ್ನೂ ಸೇರಿಸಿದೆ. ಮುಂದಿನ ಪಂದ್ಯಗಳಲ್ಲೂ ಈ ಜೋಡಿ ಹೀಗೆ ಆಡಿದ್ರೆ, ಕಪ್​ ನಮ್ದಾಗೋದ್ರಲ್ಲಿ ಡೌಟೇ ಬೇಡ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KGF ಪಾರ್ಟ್​-1 ಹಿಟ್​ ಆಗ್ಲಿಲ್ಲ.. ಪಾರ್ಟ್​- 2 ಬ್ಲಾಕ್ ​ಬಸ್ಟರ್​ ಹಿಟ್; RCB ಫುಲ್​ ಪೈಸಾ ವಸೂಲ್​

https://newsfirstlive.com/wp-content/uploads/2024/05/KGF_KOHLI.jpg

Load More