newsfirstkannada.com

ಆರ್​​​ಸಿಬಿಗೆ ಕೇವಲ ಒಂದೇ ಒಂದು ಪರ್ಸೆಂಟ್​ ಚಾನ್ಸ್​​.. ಈ ರೋಚಕ ಜರ್ನಿಯಲ್ಲಿ 3 ಮಹತ್ವದ ಹೆಜ್ಜೆ ಇಡಬೇಕು!

Share :

Published May 20, 2024 at 3:42pm

    ಆರ್​ಸಿಬಿ ನಾಯಕ ಫಾಫ್​ ಡು ಫ್ಲೆಸ್ಸಿಸ್ ತಂಡದ ಬಗ್ಗೆ ಹೇಳಿದ್ದೇನು?

    ಹೋರಾಟದಲ್ಲಿ ಯಾವುದೂ ಅಸಾಧ್ಯವಲ್ಲ, ಆರ್​ಸಿಬಿ ಎಕ್ಸಾಂಪಲ್!

    NEVER GIVE UP ಅಟಿಟ್ಯುಡ್​ನೊಂದಿಗೆ ಕಣಕ್ಕಿಳಿದಿದ್ದ ಆರ್​ಸಿಬಿ

ಪ್ಲೇ ಆಫ್​ಗೆ ಆರ್​​ಸಿಬಿ ಎಂಟ್ರಿ ಆಗಿರೋ ಮಾತು ನಿಜಾನಾ ಎಂಬ ಅನುಮಾನ ಇವತ್ತಿಗೂ ಕೆಲವರಿಗೆ ಕಾಡ್ತಿದೆ. ಯಾಕಂದ್ರೆ, ಆರ್​ಸಿಬಿಯ ಈ ಸಾಧನೆ ಅಸಾಧ್ಯವಾದುದ್ದಾಗಿತ್ತು. ಜಸ್ಟ್​ 2 ವಾರಗಳ ಹಿಂದೆ ಮಾತು ಹೇಳಿದ್ರೆ, ಎಲ್ರೂ ನಗ್ತಾ ಇದ್ರು. ಕೇವಲ 1 ಪರ್ಸೆಂಟ್​ ಚಾನ್ಸ್​ ಉಳಿಸಿಕೊಂಡಿದ್ದ, ಆರ್​​ಸಿಬಿ ಪ್ಲೇ ಆಫ್‌ ಪ್ರವೇಶ ಮಾಡಿದ ಪರಿ ನಿಜಕ್ಕೂ ರೋಚಕ. ಅತಿ ರೋಚಕ. ಅಂಥಹ ರೋಚಕ ಜರ್ನಿಯ ಮಾಹಿತಿ ಇಲ್ಲಿದೆ.

ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು. 7 ಸೋಲು.. ಈ ಪೈಕಿ ಸತತ 6 ಮುಖಭಂಗ. ಪಾಯಿಂಟ್ ಟೇಬಲ್​ನಲ್ಲಿ ಕೊನೆ ಸ್ಥಾನ​. 10ನೇ ಸ್ಥಾನದಲ್ಲಿದ್ದ ಆರ್​ಸಿಬಿ ಕನಿಷ್ಠ 9ನೇ ಸ್ಥಾನಕ್ಕೇರುತ್ತೆ ಎಂಬ ಕಿಂಚಿತ್ತೂ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದ್ರೆ, ಅಸಾಧ್ಯ ಅಂದದನ್ನ ಸಾಧಿಸಿ ತೋರಿಸಿದೆ ಆರ್​ಸಿಬಿ.

ಇದನ್ನೂ ಓದಿ: ವಿಲನ್​ಗಳೇ ಹೀರೋಗಳಾದ ಕಥೆ.. ಈ ಯಂಗ್​ ಪ್ಲೇಯರ್ ಆಡಿದ ಪಂದ್ಯಗಳಲ್ಲಿ RCBಗೆ ರೋಚಕ ಗೆಲುವು

ಕೆಲವೊಮ್ಮೆ ನಿರೀಕ್ಷೆ ಮಾಡದಂತ ಘಟನೆಗಳು ನಡೆಯುತ್ತವೆ. ದುರಾದೃಷ್ಟಕರವಾದ ಘಟನೆಗಳೂ ನಡೆಯುತ್ತವೆ. ಇವತ್ತು ನಾನು ಇಲ್ಲಿರೋದಕ್ಕೆ ಕಾರಣ ಇನ್ನೂ 1% ಅವಕಾಶವಿದೆ. ಕೆಲವೊಮ್ಮೆ ಈ ಅವಕಾಶ ಸಾಕು. ಆದ್ರೆ, ನೀವು ಆ 1% ಅವಕಾಶದ ಬಗ್ಗೆ ಹೇಗೆ ಯೋಚಿಸ್ತಿರಿ ಅನ್ನೋದು ಮುಖ್ಯವಾಗುತ್ತೆ. ನೀವು ಆಟದಲ್ಲಿ ಸಂಪೂರ್ಣ ಪರಿಶ್ರಮ​ ಹಾಕಲು ಬಯಸಿದ್ರೆ, ಅದನ್ನು 1ರಿಂದ 10 ಪರ್ಸೆಂಟ್ ಮಾಡಬಹುದು. ನಂತರ 10ರಿಂದ 30ಕ್ಕೆ ಹೆಚ್ಚಿಸಬಹದು. ಅಂತಿಮವಾಗಿ ಏನಾದರೂ ಮ್ಯಾಜಿಕ್ ನಡೆಯಬಹುದು.

ವಿರಾಟ್​ ಕೊಹ್ಲಿ, ಆಟಗಾರ

ವರ್ಷದ ಹಿಂದೆ ಆರ್​ಸಿಬಿ ವನಿತೆಯರಿಗೆ ಕೊಹ್ಲಿ ಹೇಳಿದ ಮಾತುಗಳಿವು. ಅಂದಿನ ಮಾತು, ಇಂದು ನಿಜವಾಗಿದೆ. ಈ ಸೀಸನ್​​ನಲ್ಲಿ ಆರ್​ಸಿಬಿ ಮೆನ್ಸ್​ ತಂಡದ ಪರಿಸ್ಥಿತಿ ಹಾಗೇ ಇತ್ತು. ಆದ್ರೆ, ಆ 1 ಪರ್ಸೆಂಟ್​ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ.

ಸತತ 6 ಸೋಲು.. ಪ್ಲೇ ಆಫ್​​ ಚಾನ್ಸ್​ ಶೇ.1ರಷ್ಟು..!

ಮೊದಲ ಪಂದ್ಯದಲ್ಲಿ ಇದೇ ಚೆನ್ನೈ ಎದುರು ಮುಖಭಂಗ ಅನುಭವಿಸಿದ್ದ ಆರ್​ಸಿಬಿ, ತವರಿನಲ್ಲಿ ನಡೆದ 2ನೇ ಪಂದ್ಯದಲ್ಲಿ ಗೆದ್ದು ಬೀಗಿತ್ತು. ಆರ್​ಸಿಬಿ ಹೊಸ ಅಧ್ಯಾಯ ಕಿಕ್​ ಸ್ಟಾರ್ಟ್​ ಆಯ್ತು ಎಂದು ಭಾವಿಸಿಲಾಗಿತ್ತು. ಆದ್ರೆ, ಅದ್ರ ಬೆನ್ನಲ್ಲೇ ಒಂದಲ್ಲ.. ಎರಡಲ್ಲ.. ಸತತ 6 ಪಂದ್ಯಗಳಲ್ಲಿ ಸೋಲುಂಡಿತು. ಈ 6 ಸೋಲುಗಳು, ಆರ್​ಸಿಬಿಯ ಪ್ಲೇ ಆಫ್​ ಕನಸನ್ನ ಬಹುತೇಕ ಕಮರುವಂತೆ ಮಾಡಿತ್ತು. ಕೆಕೆಎರ್ ಎದುರು ಈಡನ್ ಗಾರ್ಡನ್ಸ್​ನಲ್ಲಿ 1 ರನ್​ನಿಂದ ಸೋತಾಗ ಆರ್​ಸಿಬಿಗೆ ಪ್ಲೇ ಆಫ್​ ಎಂಟ್ರಿಗಿದ್ದ ಚಾನ್ಸ್​ ಕೇವಲ 1 ಪರ್ಸೆಂಟ್ ಮಾತ್ರ.

ನಮಗೆ ಕೇವಲ 1 ಪರ್ಸೆಂಟ್ ಚಾನ್ಸ್​ ಇತ್ತು. ಹೀಗಾಗಿ ನಾವು ಉತ್ತಮ ಕ್ರಿಕೆಟ್ ಆಡಲು ಬಯಸಿದ್ವಿ. 2 ಪಂದ್ಯಗಳ ನಂತರ ಪ್ಲೇ ಆಫ್ ಅವಕಾಶದ ಬಗ್ಗೆ ಯೋಚನೆ ಮಾಡಿದ್ವಿ. ಇಂದು ಆಫ್​ಫೀಲ್ಡ್​ನತ್ತ ಹೆಜ್ಜೆ ಹಾಕುತ್ತಿದ್ದರೆ ಕನಸಿನಂತೆ ಭಾಸವಾಗುತ್ತಿದೆ.

ಫಾಫ್​ ಡು ಫ್ಲೆಸ್ಸಿಸ್​, ಆರ್​ಸಿಬಿ ನಾಯಕ

ಸೋಲು.. ಟೀಕೆ ಟಿಪ್ಪಣೆ.. ಗ್ರೇಟ್​ ಕಮ್​ಬ್ಯಾಕ್

ಸತತ ಸೋಲಿನಿಂದ ಕಗ್ಗಂಟ್ಟಿದ್ದ ಆರ್​ಸಿಬಿಯ ಪ್ಲೇ ಆಫ್ ಡೋರ್​​ ಬಹುತೇಕ ಮುಚ್ಚಿತ್ತು. ದಿಗ್ಗಜ ಆಟಗಾರರು ಆರ್​ಸಿಬಿ ತಂಡಕ್ಕೆ ಕೊನೆ ಸ್ಥಾನವೇ ಗತಿ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ರು. ಆದ್ರೆ, NEVER GIVE UP ಆಟಿಟ್ಯುಡ್​ ನೊಂದಿಗೆ ಕಣಕ್ಕಿಳಿದ ಆರ್​​ಸಿಬಿ ಬಲಿಷ್ಠ ಸನ್​ ರೈಸರ್ಸ್ ಹೈದ್ರಾಬಾದ್ ತಂಡವನ್ನ ಅವರದೇ ನೆಲದಲ್ಲಿ ಸೋಲಿಸಿತ್ತು. ಅಲ್ಲಿಂದ ಶುರುವಾಯ್ತು ನೋಡಿ ಆರ್​ಸಿಬಿಯ ಅಸಲಿ ಹೊಸ ಅಧ್ಯಾಯ..

ಡು ಆರ್​ ಡೈ.. ವೀರ ಹೋರಾಟ.. 6ಕ್ಕೆ 6 ಜಯ..!

9 ಪಂದ್ಯಗಳ ಪೈಕಿ ಜಸ್ಟ್​ ಎರಡರಲ್ಲಿ ಮಾತ್ರ ಗೆದ್ದಿದ್ದ ಆರ್​ಸಿಬಿ, ಸನ್ ರೈಸರ್ಸ್ ಎದುರಿನ ಗೆಲುವು ಹೊಸ ಅಧ್ಯಾಯಕ್ಕೆ ನಾಂದಿಯಾಡ್ತು. ಪ್ಲೇ-ಆಫ್​ ಎಂಟ್ರಿಗೆ ಕೇವಲ 1 ಪರ್ಸೆಂಟ್​​ ಮಾತ್ರವೇ ಅವಕಾಶ ಇದ್ದರೂ, ಹೋರಾಟದ ಛಲ ಬಿಡದ ಆರ್​ಸಿಬಿ ಪ್ರತಿ ಮ್ಯಾಚ್​ನ ನಾಕೌಟ್​ನಂತೆ ಸ್ವೀಕರಿಸಿತು. ಇದಕ್ಕೆ ಸಿಕ್ಕ ಪ್ರತಿಫಲ 6ಕ್ಕೆ 6 ಗೆಲುವು.

ಇದನ್ನೂ ಓದಿ: KGF ಪಾರ್ಟ್​-1 ಹಿಟ್​ ಆಗ್ಲಿಲ್ಲ.. ಪಾರ್ಟ್​- 2 ಬ್ಲಾಕ್ ​ಬಸ್ಟರ್​ ಹಿಟ್; RCB ಫುಲ್​ ಪೈಸಾ ವಸೂಲ್​ 

​​ಬ್ಯಾಕ್ ಟು ಬ್ಯಾಕ್ ಗುಜರಾತ್​ ಎದುರು 2 ಪಂದ್ಯ ಗೆದ್ದ ಆರ್​ಸಿಬಿ, ಪಾಯಿಂಟ್​ ಟೇಬಲ್​​ನ ಕೊನೆ ಸ್ಥಾನದಿಂದ 7ನೇ ಸ್ಥಾನಕ್ಕೆ ಲಗ್ಗೆ ಇಡ್ತು. ಈ ಬೆನ್ನಲ್ಲೇ ಪಂಜಾಬ್ ಹಾಗೂ ಡೆಲ್ಲಿ ಎದುರು ಗೆಲುವು ಸಾಧಿಸಿದ ಆರ್​ಸಿಬಿ 5ನೇ ಸ್ಥಾನಕ್ಕೆ ಎಂಟ್ರಿ ನೀಡ್ತು. ಆದ್ರೆ, ಕಹಾನಿ ಮೇ ಟ್ವಿಸ್ಟ್ ಎಂಬಂತೆ ಲಕ್ನೋ ಎದುರು ಡೆಲ್ಲಿ ಗೆದ್ದಾಗ ಮತ್ತೆ ಪಾಂಯಿಂಟ್ ಟೇಬಲ್​ನಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ಬಳಿಕ ಚಿನ್ನಸ್ವಾಮಿಯಲ್ಲಿ ಡೆಲ್ಲಿಗೆ ಡಿಚ್ಚಿ ನೀಡಿ, ಚೆನ್ನೈಗೆ ಚಮಕ್​ ನೀಡಿದ ಆರ್​ಸಿಬಿ, 4ನೇ ತಂಡವಾಗಿ ಪ್ಲೇ ಆಫ್​ಗೆ ಗ್ರ್ಯಾಂಡ್ ಎಂಟ್ರಿ ನೀಡ್ತು.

ಇದನ್ನೂ ಓದಿ: ಲೋಕಲ್​ ಬಾಯ್ಸ್​​ನಂತೆ ಹೆಗಲ ಮೇಲೆ ಕೈ ಹಾಕೊಂಡು ಭರ್ಜರಿ ಸ್ಟೆಪ್ಸ್.. ಕಾರ್ತಿಕ್, ಸಿರಾಜ್ ಡ್ಯಾನ್ಸ್ ಹೇಗಿದೆ? ​

ಅಸಾಧ್ಯವಾದುದ್ದು ಯಾವುದು ಇಲ್ಲ.. ಇದಕ್ಕೆ ಆರ್​ಸಿಬಿಯ ಕಮ್​ಬ್ಯಾಕ್ ಕಥೆಯೇ​ ಸ್ಪೂರ್ತಿ. ಸತತ ಸೋಲನುಭವಿಸಿದ್ರೂ, ಆರ್​ಸಿಬಿಯಲ್ಲಿ ಹೋರಾಟದ ಕಿಚ್ಚಿತ್ತು. ಗುರಿ ಸ್ಪಷ್ಟವಾಗಿತ್ತು. ಸಾಧಿಸುವ ಛಲ ತಂಡದಲ್ಲಿತ್ತು. ಆರ್​​ಸಿಬಿ ಸಾಗಿ ಬಂದ ಹಾದಿಯಲ್ಲಿ ನಂಬಿಕೆಯೊಂದೇ ಆಸ್ತಿಯಾಗಿತ್ತು. ಬಂದೆಲ್ಲ ಸವಾಲನ್ನ ಸ್ವೀಕರಿಸಿ, ಆನ್​ ಫೀಲ್ಡ್​ನಲ್ಲಿ ನೂರರಷ್ಟು ಎಫರ್ಟ್ ಹಾಕಿ, ಒಗ್ಗಟ್ಟಾಗಿ ಹೋರಾಡಿ ಇದೀಗ ಗುರಿ ತಲುಪಿದೆ. ಯಾವುದೂ ಅಸಾಧ್ಯವಲ್ಲ ಅನ್ನೋ ಮಾತಿಗೆ ಈ ಸೀಸನ್​ನ ಆರ್​​ಸಿಬಿ ಜರ್ನಿ ಬೆಸ್ಟ್​ ಎಕ್ಸಾಂಪಲ್​.!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆರ್​​​ಸಿಬಿಗೆ ಕೇವಲ ಒಂದೇ ಒಂದು ಪರ್ಸೆಂಟ್​ ಚಾನ್ಸ್​​.. ಈ ರೋಚಕ ಜರ್ನಿಯಲ್ಲಿ 3 ಮಹತ್ವದ ಹೆಜ್ಜೆ ಇಡಬೇಕು!

https://newsfirstlive.com/wp-content/uploads/2024/05/RCB-KGF.jpg

Load More