2024 ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸಾವಿರ ಮೀಟರ್ ಉದ್ದದ ಪ್ರಾಕ್ ತೊಟ್ಟ ಬೆಡಗಿ
ಮೊದಲನೇ ಬಾರಿಗೆ ಅತಿ ದೊಡ್ಡ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾದ ನ್ಯಾನ್ಸಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನ್ಯಾನ್ಸಿ ತ್ಯಾಗಿ ವಿಡಿಯೋಗಳು
ಇತ್ತೀಚಿನ ದಿನಗಳಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಅಂದು ಹೇಳಲು ಅಸಾಧ್ಯ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ತುಂಡುಗಳಿಂದ ಭಿನ್ನ ವಿಭಿನ್ನವಾಗಿ ಅದರಲ್ಲೂ ಎಲ್ಲರ ಕಣ್ಣು ಕುಕ್ಕುವಂತೆ ಸ್ಟಿಚ್ ಮಾಡುತ್ತಿದ್ದ ಯುವತಿ ಈಗ ಸಖತ್ ಫೇಮಸ್.
ಇದನ್ನೂ ಓದಿ: ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಐಶ್ವಯಾ ರೈ.. ಈ ಬಾರಿ ಸಖತ್ ಸ್ಪೆಷಲ್; ಏನು ಗೊತ್ತಾ?
ಸಾಕಷ್ಟು ಜನಕ್ಕೆ ನ್ಯಾನ್ಸಿ ತ್ಯಾಗಿ ಯಾರು ಅಂತ ಗೊತ್ತಿಲ್ಲ. ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ಅಂತಲೇ ಗುರುತಿಸಿಕೊಂಡಿರೋ ನ್ಯಾನ್ಸಿ ತ್ಯಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಟಾಪಿಕ್ ಆಗಿದ್ದಾರೆ. ಕೇವಲ ಇನ್ಸ್ಟಾಗ್ರಾಮ್ನಲ್ಲಿ ಸೆಲೆಬ್ರಿಟಿಗಳು ತೊಡುವ ಉಡುಪುಗಳನ್ನು ರೀ ಕ್ರಿಯೇಟ್ ಮಾಡಿ ತಾನೇ ಹೊಲಿಗೆ ಯಂತ್ರದಿಂದ ರೆಡಿ ಮಾಡಿ ಎಕ್ಸಿಕ್ಯೂಟ್ ಮಾಡ್ತಾ ಇದ್ದರು. ಇದೀಗ ಇದೇ ನ್ಯಾನ್ಸಿ ತ್ಯಾಗಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಅದರಲ್ಲೂ ಮೊದಲನೇ ಬಾರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ಎಂಟ್ರಿ ಕೊಟ್ಟಿದ್ದ ನ್ಯಾನ್ಸಿ ತ್ಯಾಗಿ ಸುಮಾರು 1,000 ಮೀಟರ್ಗಿಂತಲೂ ಹೆಚ್ಚು ಫ್ಯಾಬ್ರಿಕ್ ಬಟ್ಟೆಯನ್ನು ಬಳಸಿ ತಯಾರಿಸಿದ ಬ್ಯೂಟಿಫುಲ್ ಆಗಿದ್ದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ಅನ್ನು ಸ್ವತಃ ನಾನೇ ತಯಾರಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಈ ಗೌನ್ ತಯಾರಿಸಲು ನ್ಯಾನ್ಸಿ ತ್ಯಾಗಿ ಅವರಿಗೆ ಬರೋಬ್ಬರಿ ಒಂದು ತಿಂಗಳು ಬೇಕಾಯಿತು ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
View this post on Instagram
ನ್ಯಾನ್ಸಿ ತ್ಯಾಗಿ ಅವರು ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅವರ ಫಾಲೋವರ್ಸ್ ನಿಬ್ಬೆರಗಾಗಿದ್ದಾರೆ. ಯಾರಿಗೆ ತಾನೇ ಇಂತಹ ಅವಕಾಶ ಸಿಗುತ್ತೆ ಹೇಳಿ ಅದು ನಿಮಗೆ ಸಿಕ್ಕಿದೆ ನೀವು ತುಂಬಾ ಅದೃಷ್ಟವಂತರು ಅಂತ ಫಾಲೋವರ್ಸ್ ಕಾಮೆಂಟ್ ಮಾಡಿ ಅಚ್ಚರಿ ಪಟ್ಟಿದ್ದಾರೆ. ಎರಡನೇ ದಿನದ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನ್ಯಾನ್ಸಿ ತ್ಯಾಗಿ ತಾನೇ ರೆಡಿ ಮಾಡಿದ್ದ ಲ್ಯಾವೆಂಡರ್ ಬಣ್ಣದ ಸೀರೆಯಲ್ಲಿ ಮಿರ ಮಿರ ಮಿಚ್ಚಿದ್ದಾರೆ. ಸದ್ಯ ಇದೇ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೀವ್ಸ್ ಪಡೆದುಕೊಳ್ಳುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ