ಈ ಬಿಗ್ ಗೇಮ್ನಲ್ಲಿ ಈ ಆಟನಗಾರನ ಆಟ ಆರ್ಸಿಬಿಗೆ ವರದಾನ
ಹಳಿ ತಪ್ಪಿದ ರಾಜಸ್ಥಾನ ರಾಯಲ್ಸ್ಗೆ ಗೆಲುವಿನ ಕನವರಿಕೆ ಕಾಡುತ್ತಿದೆ
ಎಲಿಮಿನೇಟರ್ ಮ್ಯಾಚ್ ಗೆಲ್ಲಲೇಬೇಕಾದ ಒತ್ತಡದಲ್ಲಿ RCB, RR
ಇಂದು ಐಪಿಎಲ್ ಅಖಾಡದಲ್ಲಿ ನಡೆಯುತ್ತಿರೋದು ರಾಯಲ್ಸ್ ಫೈಟ್. ಇಬ್ಬರ ಗುರಿಯೂ ಗೆಲುವೊಂದೇ. ಆದ್ರೆ, ಈ ಗೆಲುವಿನ ಹಾದಿಯೇ ಕಷ್ಟ. ಸೀಸನ್ನ ಮೊದಲ ಪಂದ್ಯದಿಂದ ಇದೀಗ ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗಿರುವ ಇವರಿಬ್ಬರ ಕಥೆಯೇ ಡಿಫ್ರೆಂಟ್ ಆಗಿದೆ. ಇಂದಿನ ಎಲಿಮಿನೇಟರ್ ಕಾದಾಟದಲ್ಲಿ ಇವರಿಬ್ಬರಲ್ಲಿ ಯಾರು ಎಲಿಮಿನೇಟ್ ಆಗ್ತಾರೆ, ಯಾರು ಕ್ವಾಲಿಫೈ ಆಗ್ತಾರೆ ಅನ್ನೋದೆ ಕುತೂಹಲ.
ಈ ಕಪ್ ನಮ್ದೇ ಅನ್ನೋಕೆ ಜಸ್ಟ್ ಮೂರೇ 3 ಹೆಜ್ಜೆಯಷ್ಟೇ ಬಾಕಿ. ಆದ್ರೆ, ಈ ಕಪ್ ನಮ್ದಾಗಬೇಕು ಅಂದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ರಾಯಲ್ ಆಟವಾಡಬೇಕಿದೆ. ಗೆಲುವಿನ ನಾಗಲೋಟ ಮುಂದುವರಿಸಬೇಕಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿಗೆ ಎದುರಾಗ್ತಿರೋದು ರಾಜಸ್ಥಾನ್ ರಾಯಲ್. ಈ ಸವಾಲನ್ನ ಮೆಟ್ಟಿನಿಲ್ಲಬೇಕಿದೆ.
ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗ್ತಿವೆ. ಈ ಹೈಟೆನ್ಶನ್ ಮ್ಯಾಚ್ಗೆ ಅಹ್ಮದಾಬಾದ್ನ ನಮೋ ಸ್ಟೇಡಿಯಂ ಸಜ್ಜಾಗಿದೆ. ಇಂದಿನ ಕದನದಲ್ಲಿ ಗೆದ್ದು ಕ್ವಾಲಿಫೈಯರ್-2ಗೆ ಅರ್ಹತೆ ಗಿಟ್ಟಿಸುವ ಲೆಕ್ಕಚಾರ ಉಭಯ ತಂಡಗಳದ್ದಾಗಿದೆ.
ಎಲಿಮಿನೇಟರ್ ಹಣಾಹಣಿಯಲ್ಲಿ RCB ಫೇವರಿಟ್..!
ಇಂದಿನ ಎಲಿಮಿನೇಟರ್ ಮ್ಯಾಚ್ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಆರ್ಸಿಬಿ ಹಾಗೂ ರಾಜಸ್ಥಾನ್ ಸಿಲುಕಿವೆ. ಈ ಡು ಆರ್ ಡೈ ಕದನಲ್ಲಿ ಆರ್ಸಿಬಿ ಹಾಟ್ ಫೇವರಿಟ್ ಆಗಿ ಕಣಕ್ಕಿಳಿಯುತ್ತಿದೆ. ಸತತ 6 ಗೆಲುವುಗಳೊಂದಿಗೆ ಪ್ಲೇ-ಆಫ್ಗೆ ಪ್ರವೇಶಿಸಿರುವ ಆರ್ಸಿಬಿ, ನಮೋ ಸ್ಟೇಡಿಯಂನಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಆದ್ರೆ, ಕಳೆದ 5 ಪಂದ್ಯಗಳಿಂದ ಗೆಲುವನ್ನೇ ಕಾಣದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆತ್ಮವಿಶ್ವಾಸ ಕೊರತೆಯಿದೆ. ಬಲಾಬಲದ ಲೆಕ್ಕಾಚಾರದಲ್ಲೂ ಆರ್ಸಿಬಿ ಒಂದೆಜ್ಜೆ ಮುಂದಿದೆ.
ಆರ್ಸಿಬಿ ಸ್ಟ್ರೆಂಥ್
ಆರ್ಸಿಬಿಯ ಪರ ವಿರಾಟ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಫಾಫ್ ಜೊತೆ ಉತ್ತಮ ಅಡಿಪಾಯ ಹಾಕಿಕೊಡ್ತಿರುವ ಇವರು, ಆರ್ಸಿಬಿ ಸಕ್ಸಸ್ನ ಮೊದಲ ಮೆಟ್ಟಿಲಾಗಿದ್ದಾರೆ. ರಜತ್ ಸ್ಥಿರ ಪ್ರದರ್ಶನ ನೀಡ್ತಿದ್ರೆ, ಗ್ರೀನ್ ಹಾಗೂ ಮ್ಯಾಕ್ಸಿಯ ಆಲ್ರೌಂಡರ್ ಆಟ ತಂಡಕ್ಕೆ ಬೋನಸ್ ಸಿಕ್ಕಿದೆ. ಡಿಕೆ ಫಿನಿಷರ್ ರೋಲ್ ಜೊತೆ ಸಿರಾಜ್, ಪರ್ಗುಸನ್, ಯಶ್ ದಯಾಳ್ ಅದ್ಭುತ ದಾಳಿ ಸಂಘಟಿಸುತ್ತಿದ್ದಾರೆ. ಇದಲ್ಲಕಿಂತ ಮಿಗಿಲಾಗಿ ಸಂಘಟಿತ ಆಟದ ಜೊತೆ ಅದ್ಭುತ ಫೀಲ್ಡಿಂಗ್ ತಂಡಕ್ಕೆ ಬಲ ಹೆಚ್ಚಿಸಿದೆ.
ನೋಡೋಕೆ ಆರ್ಸಿಬಿ ಆರ್ಆರ್ಗಿಂತ ಹೆಚ್ಚು ಬಲಿಷ್ಠವಾಗೇ ಇದೆ. ಆದ್ರೂ, ಕೆಲ ವೀಕ್ನೆಸ್ಗಳು ಆರ್ಸಿಬಿ ಪಾಳೆಯದಲ್ಲಿವೆ.
ಆರ್ಸಿಬಿ ವೀಕ್ನೆಸ್
ನಾಯಕ ಫಾಫ್ ಅಸ್ಥಿರ ಪ್ರದರ್ಶನ ತಲೆ ನೋವಾಗಿದೆ. ಜೊತೆಗೆ ಇಡೀ ತಂಡ ಟಾಪ್-3 ಮೇಲೆಯೇ ಅವಲಂಬಿತವಾಗಿದೆ. ಇದರ ಜೊತೆ ಮಿಡಲ್ ಆರ್ಡರ್ನ ಹೆಚ್ಚು ನಂಬಿಕೊಳ್ಳುವಂತಿಲ್ಲ. ಕ್ರೂಶಿಯಲ್ ಟೈಮ್ನಲ್ಲಿ ಬೌಲರ್ಗಳು ಕೈಕೊಡುವ ಭೀತಿ ಇದ್ದೇ ಇದೆ. ಇನ್ನು ಗೆಲುವಿನ ಅತಿಯಾದ ಆತ್ಮವಿಶ್ವಾಸವೂ ಮುಳುವಾಗುವ ಟೆನ್ಶನ್ ಇದ್ದೇ ಇದೆ.
ಆರ್ಸಿಬಿಯಂತೆ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲೂ ಸ್ಟ್ರೆಂಥ್ & ವೀಕ್ನೆಸ್ ಇದ್ದೇ ಇದೆ. ಆ ಪ್ಲಸ್ -ಮೈನಸ್ ಅಂಶಗಳನ್ನ ನೋಡೋದಾದ್ರೆ.,
ಆರ್ಆರ್ ಸ್ಟ್ರೆಂಥ್ & ವಿಕ್ನೇಸ್
ರಾಜಸ್ಥಾನ್ ರಾಯಲ್ಸ್ ಪರ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಧ್ರವ್ ಜುರೇಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇದರ ಜೊತೆ ಸಂಜು ನಾಯಕತ್ವದ ಜೊತೆಗೆ ಸಂಗಕ್ಕಾರ ಮಾರ್ಗದರ್ಶನ ತಂಡಕ್ಕಿದೆ. ವೆಸ್ಟ್ ಇಂಡೀಸ್ನ ಶಿಮ್ರಾನ್ ಹೇಟ್ಮೆಯರ್, ರೋವ್ಮನ್ ಪೋವೆಲ್ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಶಕ್ತಿಯಾಗಿದೆ. ಅನುಭವಿ ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ, ಚಹಲ್, ಅಶ್ವಿನ್ರಂಥ ಚಾಣಕ್ಷ ಬೌಲಿಂಗ್ ಪಡೆ ಇದೆ. ಇದೆಲ್ಲ ಸ್ಟ್ರೆಂಥ್ ಆದ್ರೆ, ಆರಂಭಿಕ ಯಶಸ್ವಿ ಜೈಸ್ವಾಲ್ ಅಸ್ಥಿರ ಪ್ರದರ್ಶನ, ಜೋಸ್ ಬಟ್ಲರ್ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಿದೆ. ಸತತ ಸೋಲುಗಳಿಂದ ಕಂಗ್ಗೆಟ್ಟಿರುವ ಆರ್ಆರ್, ಹೈ ಪ್ರೆಶರ್ ಗೇಮ್ನಲ್ಲಿ ಪರ್ಫಾಮ್ ಮಾಡುತ್ತಾ ಅನ್ನೋ ಪ್ರಶ್ನೆ ಇದ್ದೇ ಇದೆ.
ಐಪಿಎಲ್ನಲ್ಲಿ ಆರ್ಆರ್, ಆರ್ಸಿಬಿ ಕಥೆ ವಿಭಿನ್ನ
ಐಪಿಎಲ್ನಲ್ಲಿ ಆರ್ಸಿಬಿ ಹಾಗೂ ಆರ್ಆರ್ ತಂಡಗಳ ಕಥೆ.. ನಿಜಕ್ಕೂ ತದ್ವಿರುದ್ಧ. ಮೊದಲ 9 ಪಂದ್ಯಗಳಲ್ಲಿ ರಾಜಸ್ಥಾನ, ಬರೋಬ್ಬರಿ 8 ಪಂದ್ಯಗಳಲ್ಲಿ ಗೆದ್ದು, ಒಂದರಲ್ಲಿ ಮಾತ್ರ ಸೋತಿತ್ತು. ಅಷ್ಟು ಸಾಲಿಡ್ ಫಾರ್ಮ್ನಲ್ಲಿದ್ದ ರಾಜಸ್ಥಾನ್, ವಿಚಿತ್ರ ಎಂಬಂತೆ ಮೇ ತಿಂಗಳದಲ್ಲಿ ಒಂದು ಪಂದ್ಯ ಗೆದ್ದಿಲ್ಲ. ಆಡಿದ 5 ಪಂದ್ಯಗಳ ಪೈಕಿ 4ರಲ್ಲಿ ಸೋಲುಂಡಿದ್ದು, ಕೊನೆಯ ಪಂದ್ಯ ಮಳೆಗೆ ಬಲಿಯಾಯ್ತು.
ಆರ್ಸಿಬಿ ಕಥೆ ಉಲ್ಟಾ.. ಮೊದಲ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯಿಸಿದ್ದ ಆರ್ಸಿಬಿ, ನಂತರ ಫಿನಿಕ್ಸ್ನಂತೆ ಮೇಲೇಳ್ತು. ಅತ್ತ ಆರ್ಆರ್ ಗೆದ್ದಾಗ ಸೋತಿದ್ದ ಆರ್ಸಿಬಿ, ಆರ್ಆರ್ ಸೋಲಿನ ಸುಳಿಯಲ್ಲಿ ಸಿಕ್ಕಾಗ ಗೆದ್ದು ಬೀಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ, ಮೇ ತಿಂಗಳಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಸಿಬಿ ಮುನ್ನುಗ್ಗಿದ್ರೆ, ಆರ್ಆರ್ ಗೆಲುವನ್ನೇ ಕಾಣದಂತಾಗಿದೆ. ಹೀಗಾಗಿ ನಂಬರ್ ಗೇಮ್ ಆಟದಲ್ಲಿ ಆರ್ಸಿಬಿ ಗೆದ್ದೇ ಗೆಲ್ಲುತ್ತೆ ಅನ್ನೋದು ಫ್ಯಾನ್ಸ್ ಲೆಕ್ಕಚಾರ.
37 ಸಿಕ್ಸರ್ಗಳ ಪೈಕಿ 20 ಸಿಕ್ಸರ್ಗಳು ಪವರ್ ಪ್ಲೇನಲ್ಲಿ ಬಂದಿವೆ
ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಆಟವೇ ಆರ್ಸಿಬಿಗೆ ವರವಾಗಿದೆ. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವಾಡ್ತಿರುವ ಕೊಹ್ಲಿ, 161.79ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್ ಸಿಡಿಸಿರುವ 37 ಸಿಕ್ಸರ್ಗಳ ಪೈಕಿ 20 ಸಿಕ್ಸರ್ಗಳು ಪವರ್ ಪ್ಲೇನಲ್ಲಿ ಬಂದಿವೆ. ಈ ಅಲ್ಟ್ರಾ ಅಗ್ರೆಸ್ಸಿವ್ ಬ್ಯಾಟಿಂಗ್, ಆರ್ಸಿಬಿ ಗೆಲುವಿನಲ್ಲಿ ಬಿಗ್ ಇಂಪ್ಯಾಕ್ಟ್ ಮೂಡಿಸಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.
ಇಂದಿನ ಎಲಿಮಿನೇಟರ್ ಮ್ಯಾಚ್ ಬ್ಯಾಟ್ ಆ್ಯಂಡ್ ಬಾಲ್ ನಡುವಿನ ಹೋರಾಟ ಅಂತಾನೇ ಬಿಂಬಿತವಾಗಿದೆ. ನಮೋ ಅಂಗಳದಲ್ಲಿ ಯಾರು ಪ್ರೆಷರ್ನ ಡೀಲ್ ಮಾಡ್ತಾರೋ ಅವರಿಗೆ ಗೆಲುವಿನ ಹಾರ ಫಿಕ್ಸ್. ಎಲಿಮಿನೇಟ್ ಯಾರಾಗ್ತಾರೆ, ಕ್ವಾಲಿಫೈಯರ್ಗೆ ಕ್ವಾಲಿಫೈ ಯಾರಾಗ್ತಾರೆ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ