ಮೇ ತಿಂಗಳಲ್ಲಿ ಆರ್ಸಿಬಿ ಎಷ್ಟು ಪಂದ್ಯಗಳನ್ನ ಗೆದ್ದುಕೊಂಡಿದೆ
ಕ್ವಾಲಿಫೈಯರ್- 2ಗೆ ಅರ್ಹತೆ ಪಡೆಯಲು 2 ತಂಡ ಪೈಪೋಟಿ
ರಾಜಸ್ಥಾನ ರಾಯಲ್ಸ್ಗೆ ಮೇ ತಿಂಗಳು ಎಂದರೆ ಕಂಟಕನಾ..?
ಎಲಿಮಿನೇಟರ್ ಪಂದ್ಯದಲ್ಲಿಂದು ರಾಜಸ್ಥಾನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯಲಿದೆ. ಕದನದಲ್ಲಿ ಗೆದ್ದು ಕ್ವಾಲಿಫೈಯರ್-2ಗೆ ಅರ್ಹತೆ ಪಡೆಯಲು ಎರಡು ತಂಡಗಳು ಪೈಪೋಟಿ ನಡೆಸಲಿವೆ. ಆದ್ರೆ ಇದರಲ್ಲಿ ಇಂಟ್ರೆಸ್ಟಿಂಗ್ ಅಂದ್ರೆ ಮೇ ತಿಂಗಳು. ಮೇ ತಿಂಗಳು ಆರ್ಸಿಬಿಗೆ ನವ ವಸಂತನೇ ಎಂದು ಹೇಳಬಹುದು.
ಹೈಟೆನ್ಶನ್ ಮ್ಯಾಚ್ಗೆ ಇಂದು ಅಹ್ಮದಾಬಾದ್ನ ಮೋದಿ ಸ್ಟೇಡಿಯಂ ರೆಡಿಯಾಗಿದ್ದು ಈಗಾಗಲೇ ಎರಡು ತಂಡದ ಪ್ಲೇಯರ್ಸ್ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಪಂದ್ಯದ ವೇಳೆ ಆರ್ಆರ್ಗಿಂತ ಆರ್ಸಿಬಿ ಹೆಚ್ಚು ಬಲಿಷ್ಠವಾಗಿದೆ. ಕಳೆದ 5 ಪಂದ್ಯಗಳಿಂದ ಗೆಲುವನ್ನೇ ಕಾಣದ ರಾಜಸ್ಥಾನದ ತಂಡದಲ್ಲಿ ಆತ್ಮವಿಶ್ವಾಸ ಕೊರತೆಯಿದೆ. ಬಲಾಬಲದ ಲೆಕ್ಕಾಚಾರದಲ್ಲೂ ಆರ್ಸಿಬಿನೇ ಮುಂದಿದೆ.
ಇದನ್ನೂ ಓದಿ: ಪವರ್ ಪ್ಲೇನಲ್ಲಿ RCBಗೆ ಬೇಕಿದೆ ಪವರ್ ಫುಲ್ ಆಟ.. ಈ ಸ್ಟಾರ್ ಪ್ಲೇಯರ್ನಿಂದ ಮಾತ್ರ ಅದು ಸಾಧ್ಯ!
ಮೇನಲ್ಲಿ ಆರ್ಆರ್ ಆಡಿದ 5 ಪಂದ್ಯಗಳು?
ಐಪಿಎಲ್ನಲ್ಲಿ ಆರ್ಸಿಬಿ ಹಾಗೂ ಆರ್ಆರ್ ತಂಡಗಳ ಕಥೆ ನಿಜಕ್ಕೂ ತದ್ವಿರುದ್ಧವಾಗಿದೆ. ಏಕೆಂದರೆ ಮೇ ತಿಂಗಳಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಆರ್ಸಿಬಿ ಜಯಭೇರಿ ಬಾರಿಸಿದ್ರೆ, ಇತ್ತ ಆರ್ಆರ್ ಮೇನಲ್ಲಿ ಆಡಿದ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಸೋತು, ಒಂದು ಪಂದ್ಯ ಮಾತ್ರ ಮಳೆಯಿಂದ ರದ್ದಾಗಿದೆ. ಮೊದಲ 9 ಪಂದ್ಯಗಳಲ್ಲಿ ರಾಜಸ್ಥಾನ 8 ಪಂದ್ಯ ಗೆದ್ದು ಒಂದರಲ್ಲಿ ಮಾತ್ರ ಸೋತಿತ್ತು. ಆದ್ರೆ ವಿಚಿತ್ರ ಎಂಬಂತೆ ಮೇ ತಿಂಗಳದಲ್ಲಿ ಒಂದು ಪಂದ್ಯ ಕೂಡ ರಾಜಸ್ಥಾನ ಗೆದ್ದಿಲ್ಲ. ಇದೇ ಆರ್ಸಿಬಿಗೆ ಇಂದು ವರದಾನವಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಯ ಹಣದಿಂದ ಈ ಮಹಿಳೆ ಏನು ಮಾಡಿದರು ಗೊತ್ತಾ.. ಸಿಎಂ, ಡಿಸಿಎಂಗೆ ಧನ್ಯವಾದ ಹೇಳಿದ ಸಕ್ಕುಬಾಯಿ
ಇನ್ನು ಆರ್ಸಿಬಿ ಕಥೆ ಇದಕ್ಕೆ ಉಲ್ಟಾ.. ಮೊದಲ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯಿಸಿದ್ದ ಆರ್ಸಿಬಿ, ನಂತರ ಫಿನಿಕ್ಸ್ನಂತೆ ಮೇಲೇದ್ದಿದೆ. ಆರ್ಆರ್ ಸೋಲಿನ ಸುಳಿಯಲ್ಲಿ ಸಿಕ್ಕಾಗ ಬೆಂಗಳೂರು ಗೆದ್ದು ಬೀಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಮೇ ತಿಂಗಳಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಸಿಬಿ ಮುನ್ನುಗ್ಗಿದೆ. ಇದೇ ತಿಂಗಳಲ್ಲಿ ಗುಜರಾತ್, ಪಂಜಾಬ್, ಡೆಲ್ಲಿ ಹಾಗೂ ಚೆನ್ನೈ ತಂಡಗಳನ್ನ ಆರ್ಸಿಬಿ ಮಣ್ಣು ಮುಕ್ಕಿಸಿದೆ. ಆಡಿದ 4 ಪಂದ್ಯಗಳಲ್ಲೂ ಆರ್ಸಿಬಿ ಗೆಲುವಿನಲ್ಲಿ ತೇಲಾಡಿದೆ. ಇದರಿಂದಾಗಿ ಇಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿಯೇ ಬಹುತೇಕ ವಿಜಯ ಪತಾಕೆ ಹಾರಿಸಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ