ಎಬಿ ಡಿವಿಲಿಯರ್ಸ್ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್
ರಾಜಸ್ಥಾನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಆರ್ಸಿಬಿ
ಕ್ವಾಲಿಫೈಯರ್ 2ಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ರಾಜಸ್ಥಾನ್ ರಾಯಲ್ಸ್
ನಿನ್ನೆ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ 17ನೇ ಸೀಸನ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆದ್ದು ಬೀಗಿದೆ. ಈ ಮೂಲಕ ಕ್ವಾಲಿಫೈಯರ್ 2ಕ್ಕೆ ಎಂಟ್ರಿ ಕೊಟ್ಟಿದೆ.
ಕಪ್ ಗೆಲ್ಲುವ ಕನಸಿನ ಓಟವನ್ನು ಆರ್ಸಿಬಿ ಈ ವರ್ಷಕ್ಕೆ ಕೊನೆಗೊಳಿಸಿದೆ. ಮುಂದಿನ ವರ್ಷ ಮತ್ತೆ ಪುಟಿದು ಬರಲಿದೆ. ಇನ್ನು ಆರ್ಸಿಬಿ ಸೋಲುತ್ತಿದ್ದಂತೆ ಕೋಟ್ಯಾಂತ ಅಭಿಮಾನಿಗಳ ಹೃದಯ ಒಡೆದಿದೆ. ಕನಸು ನುಚ್ಚು ನೂರಾದ ಹಿನ್ನೆಲೆಯಲ್ಲಿ ಬೇಸಪಟ್ಟುಕೊಂಡಿದ್ದಾರೆ.
ಅಂತೆಯೇ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡೆವಿಲಿಯರ್ಸ್ ಕೂಡ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದ್ದಾರೆ. ಕಳೆದುಕೊಳ್ಳುವುದು ಯಾವಾಗಲೂ ನೋವಿನಿಂದ ಕೂಡಿರುತ್ತದೆ. ನಾನೊಬ್ಬ ಅಭಿಮಾನಿಯಾಗಿ.. ಆರ್ಸಿಬಿ ಮೇಲೆ ಹೆಮ್ಮೆ ಇದೆ. ಮೇ ತಿಂಗಳ ಆರಂಭದಲ್ಲಿ ಎಲ್ಲ ಭರವಸೆಗಳು ಕಳೆದು ಹೋದಂತೆ ತೋರುತ್ತಿದ್ದರೂ ನಂಬುವಂತೆ ಮಾಡಿದ ನಮ್ಮ ಹುಡುಗರ ಮೇಲೆ ಹೆಮ್ಮೆ ಇದೆ. ಮುಂದಿನ ವರ್ಷ ಖಂಡಿತ ಸ್ಟ್ರಾಂಗ್ ಆಗಿ ಕಮ್ಬ್ಯಾಕ್ ಮಾಡಲಿದೆ. ಜೊತೆಗೆ ಮನೆಗೆ ಕಪ್ ತೆಗೆದುಕೊಂಡು ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
It’s always painful to lose. But as a fan, I’m proud of the boys for making us believe, even when all hope seemed lost at the start of May.
I’m sure #RCB will come back stronger next year and bring home that elusive title. 💪 ❤️ #IPL2024
— AB de Villiers (@ABdeVilliers17) May 22, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ