ಎಸ್ಪಿ ಅಶೋಕ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದೇ ರೋಚಕ
ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ನಕ್ಸಲರು ದಾಳಿ ಮಾಡಿದ್ರು
ಬೆಂಗಳೂರಲ್ಲೇ ವಾಸವಿದ್ದುಕೊಂಡು ಡ್ರೈವರ್ ಆಗಿ ಕೆಲಸ ಮಾಡ್ತಿದ್ದನು
ತುಮಕೂರು: ಪಾವಗಡದ ವೆಂಕಟಮ್ಮನಹಳ್ಳಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಂಕರ ಅಲಿಯಾಸ್ ಕೊತ್ತಗೆರೆ ಶಂಕರ (38) ಬಂಧಿತ ಆರೋಪಿ.
2005ರಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೋಯಿಸ್ಟ್ ನಕ್ಸಲರು ಭಯಾನಕವಾದ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಬಂದೂಕು ಹಾಗೂ ಬಾಂಬ್ಗಳಿಂದಾಗಿ ಕರ್ತವ್ಯ ನಿರತದಲ್ಲಿದ್ದ 7 ಮಂದಿ ಪೊಲೀಸರು ಸಾವನ್ನಪ್ಪಿದ್ದರು. ಇದೇ ವೇಳೆ 5 ಜನ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ಕ್ಯಾಂಪ್ ಮುಂಭಾಗ ನಿಂತಿದ್ದ ಖಾಸಗಿ ಬಸ್ ಕ್ಲೀನರ್ನನ್ನ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: ಪೋರ್ಶ್ ಕಾರು ಆಕ್ಸಿಡೆಂಟ್; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್ನಲ್ಲಿ ಬಾಲಾಪರಾಧಿ ಏನೇನು ಮಾಡಬೇಕು ಗೊತ್ತಾ?
ಬಳಿಕ ಪೊಲೀಸ್ ಕ್ಯಾಂಪ್ನಲ್ಲಿದ್ದ ಬಂದೂಕು ಹಾಗೂ ಗುಂಡುಗಳನ್ನ ದೋಚಿಕೊಂಡು ನಕ್ಸಲರು ನಾಪತ್ತೆ ಆಗಿದ್ದರು. ಈ ಸಂಬಂಧ ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ 32 ಜನ ಆರೋಪಿಗಳ ಮೇಲೆ ಪಾವಗಡ ಜೆಎಂಎಫ್ಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದರು. ಅದರಂತೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ನಕ್ಸಲ್ ಶಂಕರನನ್ನ ಯಶಸ್ವಿಯಾಗಿ ಬಂಧಿಸಲಾಗಿದೆ.
ಇದನ್ನೂ ಓದಿ: ಪೋರ್ಶ್ ಕಾರು ಆಕ್ಸಿಡೆಂಟ್ ಕೇಸ್; 2 ಪಬ್ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್ ಕಟ್ಟಿದ್ದ ಬಾಲಕ?
ಆರೋಪಿಯು ಬೆಂಗಳೂರಿನ ಗೌರಿಪಾಳ್ಯದಲ್ಲಿ ವಾಸವಿದ್ದುಕೊಂಡು ಬಿಬಿಎಂಪಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ