T20 ವಿಶ್ವಕಪ್ ಬಳಿಕ ವಿರಾಟ್ ವಿದಾಯ ಹೇಳೋದು ಪಕ್ಕಾನಾ?
ಕ್ರಿಕೆಟ್ ಕರಿಯರ್ಗೆ ಫುಲ್ ಸ್ಟಾಪ್ ಇಡ್ತಾರಾ ವಿರಾಟ್ ಕೊಹ್ಲಿ?
ಐಪಿಎಲ್ನಲ್ಲಿ ಆರ್ಸಿಬಿ ಕಪ್ ಗೆಲ್ಲಲಿಲ್ಲ, ಕೊಹ್ಲಿ ಸಾಲಿಡ್ ಬ್ಯಾಟಿಂಗ್
ಐಪಿಎಲ್ ಸೀಸನ್ ಅಂತ್ಯದ ಬೆನ್ನಲ್ಲೇ ಕಿಂಗ್ ಕೊಹ್ಲಿಯ ರಿಟೈರ್ಮೆಂಟ್ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಮುಂಬರೋ ಟಿ20 ವಿಶ್ವಕಪ್ ಅಂತ್ಯದ ಬೆನ್ನಲ್ಲೇ, ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿದೆ. ಇದು ನಿಜನಾ.? ಆಶ್ಚರ್ಯಭರಿತ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹುದು. 2 ಬಲವಾದ ಕಾರಣಗಳು ನಿವೃತ್ತಿಯ ಗಾಳಿಸುದ್ದಿಗೆ ಪುಷ್ಟಿ ನೀಡಿವೆ.
ಐಪಿಎಲ್ನಲ್ಲಿ ಆರ್ಸಿಬಿ ಕಪ್ ಗೆಲ್ಲಲಿಲ್ಲ ನಿಜ. ಆದ್ರೆ, ಕಿಂಗ್ ಕೊಹ್ಲಿ ಮಾತ್ರ ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. ಎಂಟೆದೆ ಬಂಟನಂತೆ ರನ್ಭೂಮಿಯಲ್ಲಿ ಹೋರಾಟ ನಡೆಸಿದ್ರು. ಕಿಂಗ್ ಕೊಹ್ಲಿ ಆರ್ಭಟಕ್ಕೆ ಬೌಲರ್ಗಳು ಪತರುಗುಟ್ಟಿದ್ರು. ಎದುರಾಳಿ ತಂಡಗಳೆಲ್ಲಾ ಬೆಚ್ಚಿ ಬಿದ್ವು. ಹಸಿದ ಹುಲಿಯಂತೆ ಅಬ್ಬರಿಸಿ 741 ರನ್ಗಳಿಸಿದ್ರು. ಈ ಅತ್ಯದ್ಭುತ ಆಟ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟುಹಾಕಿದೆ.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್
ಬಿರುಗಾಳಿ ಎಬ್ಬಿಸಿದ ಕಿಂಗ್ ಕೊಹ್ಲಿ ನಿವೃತ್ತಿ ಸುದ್ದಿ
ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ ಟಿ20 ವಿಶ್ವಕಪ್ ಸಮರ ಆರಂಭವಾಗಲಿದೆ. ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಶೀಘ್ರದಲ್ಲೇ, ವಿಂಡೀಸ್ಗೆ ಹಾರಲಿದೆ. ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಫ್ಲೈಟ್ ಹತ್ತಿಲ್ಲ. ಅದಾಗಲೇ ವಿರಾಟ್ ಕೊಹ್ಲಿಯ ನಿವೃತ್ತಿಯ ಚರ್ಚೆಗಳು ಆರಂಭವಾಗಿವೆ. ಮುಂಬರೋ ಮಹತ್ವದ ಟಿ20 ವಿಶ್ವಕಪ್ ಬಳಿಕ ಕೊಹ್ಲಿ, ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ.
ಗಾಳಿ ಸುದ್ದಿಗೆ ಪುಷ್ಠಿ ನೀಡಿದ 2 ಬಲವಾದ ಕಾರಣಗಳು..!
ವಿರಾಟ್ ಕೊಹ್ಲಿಯ ರಿಟೈರ್ಮೆಂಟ್ ಬಗ್ಗೆ ಮಾತನಾಡಿದ್ರೆ ನಿಮಗೆ ಆಶ್ಚರ್ಯ ಆಗಬಹುದು. ಅದ್ಭುತ ಬ್ಯಾಟಿಂಗ್ ಮಾಡ್ತಿದ್ದಾರೆ. ಸಾಲಿಡ್ ಫೀಲ್ಡಿಂಗ್ ಮಾಡ್ತಿದ್ದಾರೆ. ಫಿಟ್ನೆಸ್ ವಿರಾಟ್ ಕೊಹ್ಲಿಯನ್ನ ಮೀರಿಸೋ ಮತ್ತೊಬ್ಬ ಆಟಗಾರ ವಿಶ್ವದಲ್ಲೇ ಇಲ್ಲ ಬಿಡಿ. ಇನ್ನು ಕೊಹ್ಲಿಗೆ ಅಂತಾ ಏನ್ ಮಹಾನ್ ವಯಸ್ಸಾಗಿಲ್ಲ. 35 ವರ್ಷದಿಂದ 38ರವರೆಗೆ ಆಡಿದ ಕ್ರಿಕೆಟರ್ಸ್ ಇದ್ದಾರೆ. 39 ವರ್ಷ ಆಡಿದ ಸಚಿನ್ ತೆಂಡುಲ್ಕರ್ ಇದ್ದಾರೆ. ಸದ್ಯ ಇರೋ ಕೊಹ್ಲಿ ಫಾರ್ಮ್, ಫಿಟ್ನೆಸ್ ನೋಡಿದ್ರೆ, ಇನ್ನೂ 4-5 ವರ್ಷ ಆಡಬಹುದು ಅಂತಾ ನಿಮಗೂ ಅನ್ನಿಸಿರುತ್ತೆ. ಆದ್ರೂ ಕೊಹ್ಲಿಯ ರಿಟೈರ್ಮೆಂಟ್ ಚರ್ಚೆ ಶುರುವಾಗಿರೋದಕ್ಕೆ 2 ಬಲವಾದ ಕಾರಣ ಇದೆ.
ಇದನ್ನೂ ಓದಿ:ಕೊಹ್ಲಿಗೆ 10/10, ಮ್ಯಾಕ್ಸಿಗೆ 2/10 ; RCB ರಿಪೋರ್ಟ್ ಕಾರ್ಡ್.. ಯಾರಿಗೆ ಎಷ್ಟು ಮಾರ್ಕ್ಸ್..
ಕಾರಣ-1: ಮಡದಿ, ಮಕ್ಕಳು ಮತ್ತು ಕುಟುಂಬದ ಮೇಲಿನ ಪ್ರೀತಿ
2021ರ ಭಾರತದ ಆಸ್ಟ್ರೇಲಿಯಾ ಟೂರ್ ನಿಮಗೆ ನೆನಪಿರಬಹುದು. ನಿರೀಕ್ಷೆಯೂ ಮಾಡದ ರೀತಿಯಲ್ಲಿ ಟೀಮ್ ಇಂಡಿಯಾ 36 ರನ್ಗಳಿಗೆ ಆಲೌಟ್ ಆದ ಹೀನಾಯ ದಾಖಲೆ ಬರೆದು ಮೊದಲ ಟೆಸ್ಟ್ ಸೋತಿತ್ತು. ಆಗ ವಿರಾಟ್ ಕೊಹ್ಲಿ ತಂಡದ ಫುಲ್ ಟೈಮ್ ಕ್ಯಾಪ್ಟನ್ ಆಗಿದ್ರು. ನಾಯಕನಾಗಿದ್ದು, ತಂಡ ಹೀನಾಯವಾಗಿ ಸೋತ್ರೂ, ಸರಣಿಯ ಉಳಿದ ಪಂದ್ಯಗಳನ್ನಾಡದೇ ತವರಿಗೆ ವಾಪಾಸ್ಸಾಗಿದ್ರು. ಮಗಳು ವಮಿಕಾ ಹುಟ್ಟಿನ ಕಾರಣಕ್ಕೆ ತವರಿಗೆ ಬಂದಿದ್ರು.
ಈ ವರ್ಷದ ಆರಂಭದಲ್ಲೂ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ಕೊಹ್ಲಿ ಇಂಗ್ಲೆಂಡ್ ಸರಣಿಯಿಂದಲೇ ಹೊರ ನಡೆದಿದ್ರು. ಪತ್ನಿ ಅನುಷ್ಕಾಗೆ ಹುಷಾರಿಲ್ಲಾ ಅಂದಾಗಲೂ ಕ್ರಿಕೆಟ್ನಿಂದ ಬ್ರೇಕ್ ಪಡೆದಿದ್ರು. ಈ ಹಿಂದೆ ತಂದೆಗೆ ಸಾವಿನ ನೋವಲ್ಲೂ ಕ್ರಿಕೆಟ್ ಆಡಿದ್ದ ಕೊಹ್ಲಿ, ಈಗ ಫ್ಯಾಮಿಲಿ ಫಸ್ಟ್ ಅಂತಿದ್ದಾರೆ. ಇದನ್ನ ಕೊಹ್ಲಿಯ ತಪ್ಪು ಅನ್ನೋಕಾಗಲ್ಲ. ಯಾಕಂದ್ರೆ, ಟೀಮ್ ಇಂಡಿಯಾದ ಬ್ಯುಸಿ ಶೆಡ್ಯೂಲ್ ಹಾಗಿದೆ. ಇಡೀ ವರ್ಷಪೂರ್ತಿ ಕ್ರಿಕೆಟ್ ಆಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಸತತವಾಗಿ ಆಡ್ತಿರೋ ಕೊಹ್ಲಿ, ಟಿ20 ವಿಶ್ವಕಪ್ ಮುಗಿದ ಬಳಿಕ ನಿವೃತ್ತಿ ಹೇಳಬಹುದು.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?
ಕಾರಣ-2: ವಿರಾಟ್ ಕೊಹ್ಲಿಯ ಕಣ್ಣಿನ ದೃಷ್ಟಿ
35ರ ಗಡಿ ದಾಟಿದ್ರೂ ವಿರಾಟ್ ಕೊಹ್ಲಿ ಅದ್ಭುತವಾದ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಇದ್ರಲ್ಲಿ ಪ್ರಾಬ್ಲಮ್ ಇಲ್ಲ. ಆದ್ರೆ, ಕೊಹ್ಲಿಗೆ EYE SIGHTನ ಸಮಸ್ಯೆಯಿದೆ. ಆಫ್ ದ ಫೀಲ್ಡ್ನಲ್ಲಿ ಕೊಹ್ಲಿ ಹೆಚ್ಚಾಗಿ pointed glasses ಬಳಸ್ತಿರೋದನ್ನು ನೀವು ನೋಡಿರಬಹುದು. ಈ ಹಿಂದೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಈ ಬಗ್ಗೆ ಮಾತನಾಡಿದ್ರು. ಸದ್ಯ ಕೊಹ್ಲಿಯ ಬ್ಯಾಟ್ ಅಂಡ್ ಬಾಲ್ನ ಕನೆಕ್ಷನ್ ಚೆನ್ನಾಗಿದೆ. ಪರ್ಫೆಕ್ಟ್ ಟೈಮಿಂಗ್ ಹೊಂದಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಈ EYE SIGHTನ ಸಮಸ್ಯೆ ಕೊಹ್ಲಿಯನ್ನ ಕಾಡಬಹುದು. ಹೀಗಾಗಿ ಫುಲ್ ಫಿಟ್ ಆಗಿದ್ರೂ ಕೊಹ್ಲಿ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರೆ ಅನ್ನೋ ಚರ್ಚೆ ನಡೀತಿದೆ.
ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್ಸಿಬಿ ಪ್ಲಾನ್
ಒಟ್ಟಿನಲ್ಲಿ, ಈ ಎರಡು ಬಲವಾದ ಕಾರಣಗಳು ಕೊಹ್ಲಿ ನಿವೃತ್ತಿಯ ಗಾಳಿಸುದ್ದಿಗೆ ಪುಷ್ಟಿ ನೀಡಿವೆ. ಆದ್ರೆ, ವಿರಾಟ್ ಕೊಹ್ಲಿ ಸದ್ಯ ಆಡ್ತಿರೋ ರೀತಿಯನ್ನ ನೋಡಿದ್ರೆ, ಸದ್ಯಕ್ಕಂತೂ ಗುಡ್ ಬೈ ಸೂಚನೆಗಳಿಲ್ಲ. ಮುಂದೆನಾಗುತ್ತೆ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್