ಇಸ್ರೋ ಹಂಚಿಕೊಂಡ ಚಂದ್ರಯಾನ-3 ಫೋಟೋಗಳು ಇಲ್ಲಿವೆ
₹600 ಕೋಟಿ ಪ್ರಾಜೆಕ್ಟ್ನಲ್ಲಿ ಸಿದ್ಧಗೊಂಡಿರುವ ಚಂದ್ರಯಾನ-3
ಜುಲೈ 14 ರಂದು ನಭಕ್ಕೆ ಚಿಮ್ಮಿಲಿರುವ GSLV-Mk3 ರಾಕೆಟ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಕ್ಷಣಗಣನೆಗೆ ಕಾದು ಕೂತಿದ್ದು, ಹೆಮ್ಮೆಯ ಇಸ್ರೋ ಐತಿಹಾಸಿಕ ಪುಟಗಳಲ್ಲಿ ಮತ್ತೊಂದು ಮೈಲಿಗಲ್ಲು ಊರಲು ರೆಡಿಯಾಗಿದೆ. ಅದಕ್ಕೆ ದಿನಗಣನೇ ಶುರುವಾಗಿದ್ದು, ಜುಲೈ 14 ರಂದು ಚಂದ್ರನತ್ತ ಭಾರತ ಪ್ರಯಾಣಿಸಲಿದೆ.
ಇಸ್ರೋ ವಿಜ್ಞಾನಿಗಳು ‘ಚಂದ್ರಯಾನ-3’ಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 13 ರಂದೇ ನಭದತ್ತ ಇಸ್ರೋದ ರಾಕೆಟ್ ಚಿಮ್ಮಲಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳು, ರಾಕೆಟ್ಗೆ ಪೆಲೋಡ್ಗಳನ್ನು ಸೇರಿಸುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ವಿಡಿಯೋ ಮತ್ತು ಫೋಟೋಗಳನ್ನು ಇಸ್ರೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 14, ಮಧ್ಯಾಹ್ನ ಮಾಡ್ಯೂಲ್ಗಳನ್ನು (Modules) ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ. ಚಂದ್ರನ ಅಂಗಳಕ್ಕೆ ತಲುಪುವ ಗುರಿಯೊಂದಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ ವಿ -ಎಂಕೆ3 (GSLV-Mk3 ) ಎಂಬ ಲಾಂಚಿಂಗ್ ವೆಹಿಕಲ್ ಗಗನಕ್ಕೆ ನಗೆಯಲಿದೆ.
ನೌಕೆಗಳನ್ನು ಹೊತ್ತು ನಭಕ್ಕೆ ಚಿಮ್ಮುವ GSLV-Mk3 ವಾಹಕದ ವಿಶೇಷತೆ ಏನಂದರೆ, ಅದು ಸ್ವದೇಶಿ ನಿರ್ಮಿತ. ಮೇಕ್ ಇನ್ ಇಂಡಿಯಾ ಕಲ್ಪನೆ ಅಡಿಯಲ್ಲಿ ನಿರ್ಮಾಣವಾಗಿದೆ. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (Geosynchronous Satellite Launch Vehicle Mark III) ಕೂಡ ಮಹತ್ವದ್ದಾಗಿದೆ.
ಇದು ನಾಲ್ಕು ಹಂತಗಳನ್ನು ದಾಟಲಿದ್ದು, 3 ಮತ್ತು ಕೊನೆಯ ಹಂತ ತುಂಬಾನೇ ನಿರ್ಣಾಯಕವಾಗಲಿದೆ. ಬಾಹ್ಯಾಕಾಶದಲ್ಲಿ ವೇಗ ತುಂಬಿಕೊಳ್ಳಲು ಇಂಧನದ ಕ್ಷಮತೆ ಇರಬೇಕಾಗಿದ್ದು, ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಇಸ್ರೋ ಮಾಡಿಕೊಂಡಿದೆ. ಇದರ ಪ್ರತಿ ಹಂತಕ್ಕೂ ಕ್ರಯೊಜೆನಿಕ್ ಹಂತ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ