newsfirstkannada.com

ದರ್ಶನ್‌ಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ತಂದು ಕೊಟ್ಟಿದ್ದು ನಿಜಾನಾ? ರಾಜಾತಿಥ್ಯಕ್ಕೆ ಭಾರೀ ವಿರೋಧ!

Share :

Published June 12, 2024 at 1:59pm

Update June 12, 2024 at 2:05pm

    ಪೊಲೀಸ್‌ ಠಾಣೆಯಲ್ಲಿರುವ ನಟ ದರ್ಶನ್ ನಿನ್ನೆಯಿಂದ ಊಟ ತಿಂದಿಲ್ವಾ?

    ಚಾಲೆಂಜಿಂಗ್ ಸ್ಟಾರ್ ಬದುಕಿಗೆ ಕಂಟಕವಾದ ರೇಣುಕಾಸ್ವಾಮಿ ಮರ್ಡರ್ ಕೇಸ್

    ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ಮೇಲೆ ದರ್ಶನ್‌ ಪೊಲೀಸರ ಬಳಿ ಕೇಳಿದ್ದೇನು?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವಿತ್ರಾಗೌಡರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಇಬ್ಬರ ಜೊತೆಗೆ ಇನ್ನು ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಈ ಕೇಸ್​ನಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ನಿನ್ನೆ ಮಧ್ಯಾಹ್ನದಿಂದ ಪೊಲೀಸ್ ಠಾಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಬಿರಿಯಾನಿ ಕೊಟ್ಟಿದ್ದಕ್ಕೆ ವಿರೋಧ!
ಕೊಲೆ ಆರೋಪಿ ದರ್ಶನ್‌ಗೆ ಬಿರಿಯಾನಿ ಕೊಟ್ಟ ವಿಚಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ದರ್ಶನ & ಗ್ಯಾಂಗ್ ಮೇಲೆ ಅಮಾಯಕ ಯುವಕನನ್ನು ಅಮಾನವೀಯವಾಗಿ ಕೊಂದ ಆರೋಪವಿದೆ. ಜನಸಾಮಾನ್ಯರಿಗೆ ಒಂದು ನ್ಯಾಯ , ಬಡವರಿಗೆ ಒಂದು ನ್ಯಾಯ ಎಂದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೊತ್ತಿನ ಅನ್ನ ತಿನ್ನಲು ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಕ್ರೂರವಾಗಿ ಕೊಂದ ಆರೋಪ ಹೊತ್ತಿರುವ ದರ್ಶನ್ ಗ್ಯಾಂಗ್‌ಗೆ ಮಾತ್ರ ಬಿರಿಯಾನಿ ಸಪ್ಲೈ ಮಾಡಿರೋದು ಸರಿಯಲ್ಲ. ಕ್ರಿಮಿನಲ್ಸ್ ಪೊಲೀಸ್ ಠಾಣೆಯಲ್ಲಿ ಇದ್ದಾರಾ ಅಥವಾ ಹೋಟೆಲ್ ಅಲ್ಲಿದ್ದರಾ ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ: ನನಗೆ ಸಿಗರೇಟ್ ಬೇಕು.. ಟೆನ್ಷನ್​ನಲ್ಲಿರೋ ನಟ ದರ್ಶನ್‌ಗೆ ಪೊಲೀಸ್ರು ಚಾಕಲೇಟ್ ಕೊಟ್ಟು ಖಡಕ್ ವಾರ್ನಿಂಗ್!

ಪೊಲೀಸರು ಹೇಳಿದ್ದೇನು?
ಕೊಲೆ ಆರೋಪಿಗಳಿಗೆ ಬಿರಿಯಾನಿ ತರಿಸಿ ಕೊಟ್ಟ ವಿಚಾರಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಬಿರಿಯಾನಿ ಬಗ್ಗೆ ನನಗೆ ಗೊತ್ತಿಲ್ಲ. ಆರೋಪಿಗಳಿಗೆ ಊಟ ಇಲ್ಲದೆ ಸಾಯಿಸುವುದಕ್ಕೆ ಆಗಲ್ವಲ್ಲ. ಪೊಲೀಸರು ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ? ಚಿಕನ್ ತರಿಸಿಕೊಟ್ರಾ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..

ಈ ಬಿರಿಯಾನಿ ವಿಚಾರಕ್ಕೆ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೊಲೆ ಆರೋಪಿಗಳಿಗೆ ಬಿರಿಯಾನಿ ತರಿಸಿದ್ದು ಪೊಲೀಸ್ ಸಿಬ್ಬಂದಿಗಳು. ಬಿರಿಯಾನಿ ತರಿಸಿದ್ದು ಬೌನ್ಸರ್‌ಗಳಿಗೆ ಎಂದಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ನಿನ್ನೆ ಕೊಲೆ ಆರೋಪಿಗಳಿಗೆ ಬಿರಿಯಾನಿ ನೀಡಿಲ್ಲ. ಅದು ನಮ್ಮ ಕಬ್ಬಡಿ ಟೀಮ್‌ಗೆ ತರಿಸಲಾಗಿತ್ತು. ಅವರಿಗೆ ಯಾವುದೇ ಬಿರಿಯಾನಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಚಿಕ್ಕಪೇಟೆಯಿಂದ ದೊನ್ನೆಬಿರಿಯಾನಿ ತರಿಸಿಕೊಂಡು ದರ್ಶನ್ ತಿಂದಿದ್ದಾರೆ ಎನ್ನುವುದು ಸುಳ್ಳು. ನಿನ್ನೆ ಮಧ್ಯಾಹ್ನದಿಂದ ದರ್ಶನ್ ಅವರು ಊಟ ಮಾಡಿಲ್ಲವೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಊಟ ತಿನ್ನದ ಅವರು ನಿನ್ನೆ ಮಧ್ಯಾಹ್ನ ನಿಂಬೆಹಣ್ಣು ಜ್ಯೂಸ್ ಅನ್ನು ಕುಡಿದಿದ್ದರು. ಆವಾಗಿನಿಂದ ಅವರು ಊಟನೇ ಮಾಡಿಲ್ಲ. ರಾತ್ರಿ ಮಜ್ಜಿಗೆ ಕುಡಿದು ಬಿಸ್ಕೇಟ್ ತಿಂದಿದ್ದರು. ಆದರೆ ಆ ಬಿಸ್ಕೇಟ್ ಕೂಡ ಪೂರ್ತಿಯಾಗಿ ತಿನ್ನಲಿಲ್ಲ. ಹೀಗಾಗಿ ಎಲ್ಲಿ ಇದ್ದರೇ ನಟನಿಗೆ ಲೋಬಿಪಿ ಆಗುತ್ತದೆಂದು ಚಾಕೊಲೇಟ್ ತಿನ್ನಲು ಪೊಲೀಸರು ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ತಂದು ಕೊಟ್ಟಿದ್ದು ನಿಜಾನಾ? ರಾಜಾತಿಥ್ಯಕ್ಕೆ ಭಾರೀ ವಿರೋಧ!

https://newsfirstlive.com/wp-content/uploads/2024/06/dboss3.jpg

Load More