newsfirstkannada.com

ಮೃತದೇಹ ವಿಲೇವಾರಿಗೆ 30 ಲಕ್ಷ ರೂ ಡೀಲ್..? ರಾತ್ರಿ ಇಡೀ ದರ್ಶನ್​ಗೆ ಫೋನ್ ಕರೆ.. ನಟ ಸಿಕ್ಕಿಬಿದ್ದಿದ್ದು ಹೀಗೆ..!

Share :

Published June 12, 2024 at 1:58pm

    ಕೊಲೆ ಮಾಡಿದ ಬಳಿಕ ಶವ ವಿಲೇವಾರಿಗೆ ನಡೆದಿತ್ತು ಭರ್ಜರಿ ಪ್ಲಾನ್

    ಏನೂ ನಡೆದೇ ಇಲ್ಲ ಅನ್ನೋ ರೀತಿಯಲ್ಲಿ ಮುಚ್ಚಿಹಾಕಲು ಯೋಜನೆ

    ಶವ ಕಾಲುವಿಗೆ ಎಸೆದ ಮೇಲೆ ಶುರುವಾಗಿತ್ತು ಢವಢವ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸ್ತಿದ್ದಾರೆ. ವಿಚಾರಣೆ ವೇಳೆ ಕೆಲವು ಆರೋಪಿಗಳು ಸ್ಫೋಟಕ ಮಾಹಿತಿಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

ಜೂನ್ 7 ರಂದು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ ಬಳಿಕ ಬೆಂಗಳೂರಿನ ಆರ್​ಆರ್​ ನಗರದಲ್ಲಿರುವ ಶೆಡ್ ಒಂದರಲ್ಲಿ ಕೂಡಿಟ್ಟು ಹಲ್ಲೆ ಮಾಡಿ ಕ್ರೂರವಾಗಿ ಸಾಯಿಸಲಾಗಿದೆ ಎಂಬ ಆರೋಪ ಇದೆ. ಮಾರಣಾಂತಿಕ ಏಟಿಗೆ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ಬಳಿಕ ಆರೋಪಿಗಳ ಮಧ್ಯೆ ಏನೆಲ್ಲ ಪ್ಲಾನ್ ನಡೀತು ಅನ್ನೋ ವಿವರ ಸಿಕ್ಕಿದೆ.

ಇದನ್ನೂ ಓದಿ:ರೇಣುಕಾಸ್ವಾಮಿಯನ್ನು ಶೆಡ್​​ಗೇ ಯಾಕೆ ಕರ್ಕೊಂಡು ಬಂದಿದ್ರು..? ದರ್ಶನ್​​​​​​ ಈ ಸೂಚನೆ ನೀಡಲು ಇತ್ತು 6 ಕಾರಣ..!

ಮಾಹಿತಿಗಳ ಪ್ರಕಾರ.. ಕೊಲೆ ಮಾಡಿ ದರ್ಶನ್ ಅಂಡ್ ಗ್ಯಾಂಗ್ ತಗ್ಲಾಕೊಂಡಿದ್ದೇ ರೋಚಕವಾಗಿದೆ. ಶವ ವಿಲೇವಾರಿ ಮಾಡಲು ಬಂದ ಮೂವರು ದರ್ಶನ್ ಜೊತೆಗೆ 30 ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 30 ಲಕ್ಷ ರೂಪಾಯಿ ಹಣ ಪಡೆದ ಬಳಿಕ ಆರ್.ಆರ್.ನಗರದ ಪಟ್ಟಣಗೆರೆ ಶೆಡ್​ನಿಂದ ಮೃತದೇಹವನ್ನು ಸುಮ್ಮನಹಳ್ಳಿ ಬಳಿಯ ಸತ್ವಾ ಅಪಾರ್ಟ್ಮೆಂಟ್ ಮುಂಭಾಗದ ರಾಜಕಾಲುವೆಗೆ ಎಸೆದಿದ್ದರು.

ಶವ ವಿಲೇವಾರಿ ಬಳಿಕ ಮೂವರು ಆರೋಪಿಗಳಿಗೆ ಭಯ ಶುರುವಾಗಿತ್ತು. ಆಗ ಮೂವರ ಗ್ಯಾಂಗ್​ ರಾತ್ರಿಯಿಡೀ ದರ್ಶನ್​​ಗೆ ವಾಟ್ಸ್​ಆ್ಯಪ್​ ಮೂಲಕ ಕರೆ ಮಾಡಿ ಮಾತಾಡಿದ್ದಾರೆ. ಆಗ ಹಣಕಾಸು ವಿಚಾರಕ್ಕೆ ಗಲಾಟೆಯಾಗಿ ಕೊಲೆ ಮಾಡಿದ್ದೇವೆ ಎಂದು ಸರೆಂಡರ್ ಆಗುವಂತೆ ದರ್ಶನ್ ಕಡೆಯಿಂದ ಸೂಚನೆ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ:ಕಿವಿನಲ್ಲೇ ರಕ್ತ ಬರ್ತಿದೆ.. ಆ ಭಗವಂತ ದರ್ಶನ್​ ಸರ್​ನನ್ನು ಇದ್ರಿಂದ ಆಚೆಗೆ ಕರ್ಕೊಂಡು ಬನ್ನಿ -ಸಂಜನಾ ಕಣ್ಣೀರು

ಆರೋಪಿಗಳ ಬಂಧನ ಬಳಿಕ ದರ್ಶನ್ ಹೆಸರು ತಗ್ಲಾಕೊಂಡಿದ್ದು ಕೂಡ ಕುತೂಹಲಕಾರಿಯಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೂವರನ್ನೂ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಈ ವೇಳೆ ಒಬ್ಬೊಬ್ಬರಿಂದ ಒಂದೊಂದು ರೀತಿಯ ಆನ್ಸರ್ ಸಿಕ್ಕಿದೆ. ಕೊನೆಗೆ ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ದರ್ಶನ್​ಗೆ ರಾತ್ರಿ ಇಡೀ ಕರೆ ಮಾಡಿರೋ ದಾಖಲೆ ಸಿಕ್ಕಿದೆ. ಆರೋಪಿಗಳಿಗೆ ತಮ್ಮದೇ ರೀತಿಯಲ್ಲಿ ಪೊಲೀಸರು ಕೇಳಿದಾಗ ದರ್ಶನ್ ಹೆಸರು ಬಾಯಿಬಿಟ್ಟಿದ್ದಾರೆ. ಜೊತೆಗೆ 30 ಲಕ್ಷ ರೂಪಾಯಿಗೆ ಮೃತದೇಹ ವಿಲೇವಾರಿ ಮಾಡಲು ಒಪ್ಪಿಕೊಂಡಿರೋದಾಗಿ ಗ್ಯಾಂಗ್ ತನಿಖೆ ವೇಳೆ ಬಾಯಿಬಿಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ:ಹಲ್ಲೆ ಮಾಡಿ ಸ್ವಾಮಿಗೆ ಹಣ ಕೊಟ್ಟು ಹೋಗಿದ್ರಂತೆ ದರ್ಶನ್.. ಆಮೇಲೆ ನಡೆದಿದ್ದೇ ಬೇರೆ.. ಕೇಸ್​ಗೆ ಬಿಗ್​​ ಟ್ವಿಸ್ಟ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೃತದೇಹ ವಿಲೇವಾರಿಗೆ 30 ಲಕ್ಷ ರೂ ಡೀಲ್..? ರಾತ್ರಿ ಇಡೀ ದರ್ಶನ್​ಗೆ ಫೋನ್ ಕರೆ.. ನಟ ಸಿಕ್ಕಿಬಿದ್ದಿದ್ದು ಹೀಗೆ..!

https://newsfirstlive.com/wp-content/uploads/2024/06/DARSHAN-1-1.jpg

Load More