newsfirstkannada.com

ಸಿನಿಮಾ ಇಂಡಸ್ಟ್ರಿಯಿಂದ ಬ್ಯಾನ್​ ಆಗ್ತಾರಾ ದರ್ಶನ್.. ರಾಕ್​ಲೈನ್ ವೆಂಕಟೇಶ್ ಹೇಳುವುದು ಏನು?

Share :

Published June 13, 2024 at 6:57am

    ನಟ ದರ್ಶನ್​ನ ಬ್ಯಾನ್​ ಮಾಡುವಂತೆ ಫಿಲಂ ಚೇಂಬರ್‌ಗೆ ಮನವಿ

    ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ರಾಜ್ಯಾಧ್ಯಕ್ಷ ಆಗಿರೋ ಸುರೇಶ್

    ತನಿಖೆಯ ನಂತ್ರ ಪ್ರತಿಕ್ರಿಯೆ ಕೊಡ್ತೀನಿ ಅಂದ ರಾಕ್‌ಲೈನ್ ವೆಂಕಟೇಶ್

ಕೊಲೆ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿರೋ ನಟ ದರ್ಶನ್ ಸಿನಿಮಾ ಭವಿಷ್ಯ ಏನಾಗುತ್ತೆ? ಸದ್ಯ ಎಲ್ಲರಿಗೂ ಇದೊಂದು ಪ್ರಶ್ನೆ ಹೆಚ್ಚಾಗಿ ಕಾಡುತ್ತಿದೆ. ಸದ್ಯ ಪೊಲೀಸರ ಕಸ್ಟಡಿಯಲ್ಲಿರೋ ನಟ ದರ್ಶನ್​ ಜೈಲಿಗೆ ಹೋಗೋ ಸಾಧ್ಯತೆ ಇದೆ. ಹೀಗಿರುವಾಗ ಅವರ ಸಿನಿ ಜರ್ನಿಗೆ ಫುಲ್​ಸ್ಟಾಪ್​ ಬೀಳುತ್ತಾ ಅನ್ನೋ ಪ್ರಶ್ನೆ ಒಂದ್ಕಡೆಯಾದ್ರೆ, ಸದ್ಯ ಚಿತ್ರೀಕರಣ ನಡೆಯುತ್ತಿದ್ದ ಸಿನಿಮಾಗಳ ಗತಿಯೇನು ಅನ್ನೋ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

ಮೆಜೆಸ್ಟಿಕ್​ ಸಿನಿಮಾದಿಂದ ರಾಬರ್ಟ್​ ಸಿನಿಮಾದವರೆಗೂ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಖ್ಯಾತಿ ಗಳಿಸಿದ್ದ ದರ್ಶನ್​ ಕೋಟಿ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಕೋಟಿ ಕೋಟಿ ವೆಚ್ಚದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರೋ ದರ್ಶನ್​ ಸಿನಿ ಪಯಣ ಇಲ್ಲಿಗೇ ಅಂತ್ಯವಾಗುತ್ತಾ? ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗ್ತಾರಾ ಅನ್ನೋ ಚರ್ಚೆ ಹೆಚ್ಚಾಗಿದೆ.

ನಟ ದರ್ಶನ್​ನ ಬ್ಯಾನ್​ ಮಾಡ್ಬೇಕು ಅಂತ ಚಲನಚಿತ್ರ ವಾಣಿಜ್ಯಮಂಡಳಿಗೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ರಾಜ್ಯಾಧ್ಯಕ್ಷ ಕೆ.ಎನ್.ಪಿ ಸುರೇಶ್ ಲಿಖಿತ ದೂರು ನೀಡಿದ್ದಾರೆ. ದರ್ಶನ್ ಎಸಗಿರುವ ಕೃತ್ಯ ಕನ್ನಡ ಚಿತ್ರರಂಗಕ್ಕೆ ಕಪ್ಪುಚುಕ್ಕೆ ಆಗಬಾರದು. ಕೇಸ್ ಇತ್ಯರ್ಥವಾಗಿ ರೇಣುಕಾಸ್ವಾಮಿ ಕುಟುಂಬದವರಿಗೆ ನ್ಯಾಯ ದೊರಕುವವರೆಗೂ ನಟ ದರ್ಶನ್ ಅಭಿನಯದ ಚಲನಚಿತ್ರಗಳನ್ನು ಬಿಡುಗಡೆ ಮಾಡಬಾರದೆಂದು ದೂರು ನೀಡಲಾಗಿದೆ. ಮತ್ತೊಂದ್ಕಡೆ ಸರ್ವ ಸಂಘಟನೆಗಳ ಒಕ್ಕೂಟದಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ಮಾಡಿದ್ರು. ಬಳಿಕ ಒಕ್ಕೂಟದ ಅಧ್ಯಕ್ಷರು, ಫಿಲ್ಮ್​​ ಚೇಂಬರ್​ನ ಅಧ್ಯಕ್ಷರಿಗೆ ದೂರಿನ ಪ್ರತಿಯನ್ನ ನೀಡಿ ಕ್ರಮಕ್ಕೆ ಆಗ್ರಹಿಸಿದ್ರು.

ಮೊದಲಿಗೆ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರ ನೋವು ನಮಗೂ ಅರ್ಥವಾಗಿದೆ. ಬೇಡಿಕೆಗೆ ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯ. ಫಿಲಂ ಚೇಂಬರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಬೇಡಿ, ಅದನ್ನು ನಾನು ಒಪ್ಪಿಕೊಳ್ಳಲ್ಲ. ಕಾನೂನು ಪ್ರಕಾರ ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದು, ಸತ್ಯವನ್ನು ಹೊರಗೆ ತರಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ. ಕಾನೂನು ಪ್ರಕರ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ನಾವು ಕೂಡಾ ಹೇಳಿದ್ದೇವೆ. ನಮಗೂ ಕೆಲವು ದೂರುಗಳು ಬಂದಿವೆ. ಆದರೆ ‘ಕಲಾವಿದರ ಸಂಘ’ ಇದೆ. ಅದರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೇವೆ. ಅವರ ಜೊತೆಗೆ ಮಾತನಾಡದೆ ಏಕಪಕ್ಷೀಯವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದು. ಚರ್ಚೆ ನಡೆಸಲು ಸಭೆ ಕರೆಯಲಾಗುವುದು, ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಕ್ರಮ ಕೈಗೊಳ್ಳಲಾಗುವುದು.

ಶಿವಕುಮಾರ್, ಅಧ್ಯಕ್ಷ, ಸರ್ವ ಸಂಘಟನೆಗಳ ಒಕ್ಕೂಟ

ಮನವಿ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ NM ಸುರೇಶ್​ ಕಮಿಷನರ್ ಹೇಳಿದಂತೆ ತನಿಖೆ ನಡೆಯುತ್ತಿದೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಆರೋಪಿ ಯಾರು ಅಪರಾಧಿ ಯಾರು ಅನ್ನೋದು ಗೊತ್ತಾಗಲಿದೆ. ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಈ ಸಂಬಂಧ ಕಲಾವಿದರ ಸಂಘದ ಸಭೆ ಕರೆದು ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇನ್ನು, ದರ್ಶನ್ ಬ್ಯಾನ್​ ಆಗ್ತಾರಾ ಅನ್ನೋ ಸೋಶಿಯಲ್​ ಮೀಡಿಯಾ ಚರ್ಚೆ ವಿಚಾರವಾಗಿ ನ್ಯೂಸ್​ ಫಸ್ಟ್,​ ಕಲಾವಿದರ ಸಂಘದ ಕಾರ್ಯದರ್ಶಿ ಆಗಿರುವ ರಾಕ್ ಲೈನ್ ವೆಂಕಟೇಶ್ ಅವರನ್ನ ಸಂಪರ್ಕಿಸಿ ವಿಚಾರಿಸಿದ್ದು, ಸದ್ಯಕ್ಕೆ ಏನೂ ರಿಯಾಕ್ಟ್​ ಮಾಡುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೀಗೆಲ್ಲ ಅಪಪ್ರಚಾರ‌ ಮಾಡ್ತಿದ್ದಾರೆ. ಅದೆಲ್ಲವೂ ಸುಳ್ಳು. ತನಿಖೆಯ ನಂತರ ಪ್ರತಿಕ್ರಿಯೆ ಮಾಡ್ತೀನಿ ಅಂತ ಹೇಳಿದ್ದಾರೆ.

ಅದೇನೆ ಇರಲಿ ಕಾನೂನು ಕೈಗೆ ತಗೊಂಡು ಪಂಜರದ ಪಕ್ಷಿಯಾಗಿರೋ ದರ್ಶನ್​ ಸಿನಿ ಜರ್ನಿ ಇಲ್ಲಿಗೇ ಅಂತ್ಯವಾಗುತ್ತಾ? ಕಾಟೇರ ಸಕ್ಸಸ್​ ಬೆನ್ನಲ್ಲೇ ಸಾಕಷ್ಟು ಸಿನಿಮಾ ಆಫರ್​ಗಳು ಬಂದಿತ್ತು. ಸದ್ಯ ಡೆವಿಲ್​ ಸಿನಿಮಾದ ಶೂಟಿಂಗ್​ ಕೂಡಾ ನಡೆಯುತ್ತಿತ್ತು. ಕೆಲವಕ್ಕೆ ಅಡ್ವಾನ್ಸ್​ ಪಡ್ಕೊಂಡಿದ್ರು. ಆದ್ರೆ ಈಗ ಸಿನಿಮಾ ಮಾಡೋಕೆ ದರ್ಶನ್​ಗೆ ಮುಂದೆ ಹೀಗೆ ಅವಕಾಶಗಳು ಬರ್ತಾವಾ ಅನ್ನೋದೇ ಡೌಟು ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾ ಇಂಡಸ್ಟ್ರಿಯಿಂದ ಬ್ಯಾನ್​ ಆಗ್ತಾರಾ ದರ್ಶನ್.. ರಾಕ್​ಲೈನ್ ವೆಂಕಟೇಶ್ ಹೇಳುವುದು ಏನು?

https://newsfirstlive.com/wp-content/uploads/2024/06/DARSHAN_MURDER.jpg

Load More