T20 ವಿಶ್ವಕಪ್ನ 3 ಪಂದ್ಯಗಳಲ್ಲಿ ಕೊಹ್ಲಿ ಎಷ್ಟು ರನ್ ಗಳಿಸಿದ್ದಾರೆ?
ರೋಹಿತ್ ಶರ್ಮಾರನ್ನ ನಿರಾಸೆ ಮಾಡ್ತಿದೆಯಾ ಕೊಹ್ಲಿ ಬ್ಯಾಟಿಂಗ್
ಅಮೆರಿದಲ್ಲಿ ನಡೆಯದ ಕಿಂಗ್ ಕೊಹ್ಲಿ ದರ್ಬಾರ್, ಫ್ಯಾನ್ಸ್ಗೆ ನಿರಾಸೆ
ಒಂದೆಡೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ರಣರಂಗದಲ್ಲಿ ಗೆಲುವಿನ ಪತಾಕೆ ಹಾರಿಸ್ತಿದೆ. ಆದ್ರೆ, ಇನ್ನೊಂದೆಡೆ ಚಾಂಪಿಯನ್ ಪ್ಲೇಯರ್ ವಿರಾಟ್ ಕೊಹ್ಲಿ ರನ್ ಬರ ಎದುರಿಸ್ತಿದ್ದಾರೆ. ಬಿಗ್ ಟೂರ್ನಮೆಂಟ್ ಅಂತ ಬಂದ್ರೆ ಮುಂಚೂಣಿಯಲ್ಲಿದ್ದು, ಜೈಕಾರ ಹಾಕಿಸಿಕೊಳ್ತಿದ್ರು. ಆದ್ರೀಗ ತಲೆ ತಗ್ಗಿಸಿ ಪೆವಿಲಿಯನ್ನತ್ತ ಹೆಜ್ಜೆ ಹಾಕ್ತಾರೆ. ಕೊಹ್ಲಿ ಕೈ ಕೊಡ್ತಾ ಇರೋದು ಟೀಮ್ ಇಂಡಿಯಾಗೆ ನುಂಗಲಾರದ ತುತ್ತಾಗಿದೆ.
T20 ವಿಶ್ವಕಪ್ ರಣರಂಗದಲ್ಲಿ ‘ರಣಧೀರ’ ಸೈಲೆಂಟ್..!
ವಿಶ್ವ ಕ್ರಿಕೆಟ್ಗೆ ಒಬ್ಬನೇ ಡಾನ್, ಒಬ್ಬನೇ ಚಕ್ರಾಧಿಪತಿ ಅದು ಒನ್ ಆ್ಯಂಡ್ ಒನ್ಲಿ ಕಿಂಗ್ ಕೊಹ್ಲಿ. ಆದ್ರೀಗ ಇದೇ ರನ್ ಮಷೀನ್ T20 ವಿಶ್ವಕಪ್ ಅಖಾಡದಲ್ಲಿ ಸೈಲೆಂಟಾಗಿದ್ದಾರೆ. ಎದುರಾಳಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಎತ್ತಿ ಮೆರೆದಾಡಬೇಕಿದ್ದ ರಣಧೀರ ರನ್ ಬರ ಎದುರಿಸ್ತಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೊಹ್ಲಿ ನಿರಾಸೆ ಮೂಡಿಸಿರೋದು, ಅಭಿಮಾನಿಗಳ ಬೇಸರ ತರಿಸಿದೆ.
ಐರ್ಲೆಂಡ್ ವಿರುದ್ಧ 1 ರನ್ಗೆ ಸುಸ್ತಾದ ಕಿಂಗ್ ಕೊಹ್ಲಿ..!
ಐರ್ಲೆಂಡ್ ವಿರುದ್ಧ ಜಯಿಸಿ ಟೀಮ್ ಇಂಡಿಯಾ ಟೂರ್ನಮೆಂಟ್ನಲ್ಲಿ ಶುಭಾರಂಭ ಏನೋ ಮಾಡ್ತು. ಆದ್ರೆ ಆ ಪಂದ್ಯದಲ್ಲಿ ಭಾರತ ಗೆದ್ರೂ ಕಿಂಗ್ ಕೊಹ್ಲಿ ಸೋತಿದ್ರು. ಸೂಪರ್ ಸ್ಟಾರ್ ಬ್ಯಾಟಿಂಗ್ ನೋಡಲೆಂದೇ ಸಾವಿರಾರು ಜನ ಮೈದಾನಕ್ಕೆ ನುಗ್ಗಿ ಬಂದಿದ್ರು. ಆದ್ರೆ ಅವರ ಆಸೆಗೆ ಕೊಹ್ಲಿ ತಣ್ಣೀರೆರೆಚಿದ್ರು. ಬಲಾಢ್ಯವಲ್ಲದ ಐರ್ಲೆಂಡ್ ವಿರುದ್ಧ ಬರೀ 4 ರನ್ಗೆ ಆಟ ನಿಲ್ಲಿಸಿದ್ರು.
ಪಾಕ್ ಎದುರು 1 ಫೋರ್ಗೆ ವಿರಾಟ್ ಆಟ ಕ್ಲೋಸ್..!
ಐರ್ಲೆಂಡ್ ವಿರುದ್ಧ ಮುಗ್ಗರಿಸಿದ್ದ ಕಿಂಗ್ ಕೊಹ್ಲಿ ಬದ್ಧವೈರಿ ಪಾಕ್ ವಿರುದ್ಧನಾದ್ರು ಅಬ್ಬರಿಸ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಯಾಕಂದ್ರೆ, ಪಾಕಿಸ್ತಾನ ಎದುರು ಔಟ್ ಸ್ಟ್ಯಾಂಡಿಂಗ್ ರೆಕಾರ್ಡ್ ಹೊಂದಿದ್ರು. ಆದ್ರೆ ಆ ಭರವಸೆ ಹುಸಿಯಾಯ್ತು. ಪ್ರತಿ ಬಾರಿ ವೀರಾಸೇನಾನಿಯಂತೆ ಹೋರಾಡ್ತಿದ್ದ ಟ್ರೂ ಫೈಟರ್ ಕೇವಲ 4 ರನ್ಗೆ ಒಪ್ಪಿಸಿ ಅಭಿಮಾನಿಗಳನ್ನ ಬೇಸರದ ಕಡಲಲ್ಲಿ ಮುಳುಗುವಂತೆ ಮಾಡಿದ್ರು. ಇನ್ನು ಕ್ರಿಕೆಟ್ನ ಶಿಶು ಅಮೆರಿಕ ತಂಡದ ವಿರುದ್ಧ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿರುವುದು ಭಾರೀ ಆಘಾತ ನೀಡಿದೆ. ಏಕೆಂದರೆ ಈಗತಾನೆ ಕ್ರಿಕೆಟ್ ಕ್ಷೇತ್ರಕ್ಕೆ ಆಗಮಿಸಿರುವ ಅಮೆರಿಕ ತಂಡದ ವಿರುದ್ಧ ಕೊಹ್ಲಿ ಡಕೌಟ್ ಆಗಿದ್ದು ನಿರಾಸೆ ಭಾರೀ ಮೂಡಿಸಿದೆ. ಇದು ಕ್ಯಾಪ್ಟನ್ ರೋಹಿತ್ಗೂ ನುಂಗಲಾರದ ತುತ್ತಾಗಿದೆ.
ಕಿಂಗ್ ಕೊಹ್ಲಿ 2024ನೇ ಟಿ20 ವಿಶ್ವಕಪ್ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡ್ತಿಲ್ಲ. ಆರಂಭಿಕನಾಗಿ ಕಂಪ್ಲೀಟ್ ಫೇಲಾಗಿದ್ದಾರೆ. ಐರ್ಲೆಂಡ್ ಹಾಗೂ ಪಾಕ್ ಎದುರಿನ ಕಳಪೆ ಆಟ, ಅವರ ಫಾರ್ಮ್ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
2024ನೇ T20 ವಿಶ್ವಕಪ್ನಲ್ಲಿ ಕೊಹ್ಲಿ..!
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿ ಎರಡು 2 ಪಂದ್ಯವಾಡಿ ಜಸ್ಟ್ 5 ರನ್ನಷ್ಟೇ ಬಾರಿಸಿದ್ದಾರೆ. ಇದಕ್ಕಾಗಿ 8 ಎಸೆತ ತೆಗೆದುಕೊಂಡಿದ್ದು, 2.50 ಬ್ಯಾಟಿಂಗ್ ಎವರೇಜ್ ಆಗಿದೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ
ಕಿಂಗ್ ಕೊಹ್ಲಿ ಓರ್ವ ಅಪ್ರತಿಮ ಆಟಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೀಗ ಇಂತಹ ವಿರಾಟ್ ರನ್ಗಳಿಸಲು ತಡಬಡಾಸ್ತಿದ್ದಾರೆ. ನಿನ್ನೆ ಭಾರತ ತಂಡ ಅಮೆರಿಕಾವನ್ನ ಎದುರಿಸಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ರೋಹಿತ್ ಬಾಯ್ಸ್ ಹ್ಯಾಟ್ರಿಕ್ ಗೆಲುವು ಪಡೆದುಕೊಂಡಿದ್ದಾರೆ. ಬಿಗ್ ಸ್ಕೋರ್ ಗಳಿಸಲು ಪರದಾಡ್ತಿರೋ ಕಿಂಗ್ ಕೊಹ್ಲಿಗೆ ಅಮೆರಿಕ ವಿರುದ್ಧ ಡಕೌಟ್ ಆಗಿ ಮತ್ತೊಂದು ನಿರಾಸೆಗೆ ಕಾರಣರಾದರು. ಆದ್ರೀಗ ಕಮ್ಬ್ಯಾಕ್ ಅನಿವಾರ್ಯವಾಗಿದೆ. ಯಾಕಂದ್ರೆ ಕೊಹ್ಲಿ ಓರ್ವ ಮ್ಯಾಚ್ ವಿನ್ನರ್. ಫಾರ್ಮ್ಗೆ ಮರಳಿದ್ರೆ ತಂಡದ ಬ್ಯಾಟಿಂಗ್ ಬಲ ಇನ್ನಷ್ಟು ಹೆಚ್ಚಲಿದೆ.
ಇದನ್ನೂ ಓದಿ: ರಾಜ್ಯದ ಜಿಲ್ಲೆಗಳಲ್ಲಿ ವರುಣಾರ್ಭಟ.. ಮನೆ ಮೇಲೆ ಮರ ಬಿದ್ದು ಮಹಿಳೆ ಗಂಭೀರ; ಇಂದು ಮಳೆಯ ಎಚ್ಚರಿಕೆ?
ಐಪಿಎಲ್ನಲ್ಲಿ ಸಾಲಿಡ್ ಪ್ರದರ್ಶನ ನೀಡಿದ ಕೊಹ್ಲಿ, ಆ ಬಳಿಕ ಬ್ರೇಕ್ ತೆಗೆದುಕೊಂಡಿದ್ರು. ವಿಶ್ವಕಪ್ ಅಭ್ಯಾಸ ಪಂದ್ಯದಿಂದಲೂ ದೂರ ಉಳಿದಿದ್ರು. ಇದೀಗ ಆಡಿದ 2 ಪಂದ್ಯಗಳಲ್ಲೂ ಫೇಲ್ ಆಗಿದ್ದಾರೆ. ಅಮೆರಿಕ ಎದುರಿನ ಪಂದ್ಯದಲ್ಲಿ 2 ದಿನ ಗ್ಯಾಪ್ ತೆಗೆದುಕೊಂಡು ಆಡಿದರು ಫಲಿತಾಂಶ ಬರಲಿಲ್ಲ. ವೀಕ್ನೆಸ್ ಮೇಲೆ ವರ್ಕ್ ಮಾಡಿಕೊಂಡು, ಸ್ಟ್ರಾಂಗ್ ಮೈಂಡ್ಸೆಟ್ನೊಂದಿಗ ಕೊಹ್ಲಿ ಕಮ್ಬ್ಯಾಕ್ ಮಾಡಲಿ ಅನ್ನೋದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ