newsfirstkannada.com

ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?

Share :

Published June 14, 2024 at 6:43am

Update June 14, 2024 at 6:48am

    ಚಿತ್ರದುರ್ಗದಲ್ಲಿ ಮಹಜರ್, ದರ್ಶನ್​ ನೋಡಲು ಜನ ದೌಡು

    ಮೈಕಲ್ಲಿ ದರ್ಶನ್ ಬರ್ತಿಲ್ಲ ದಯವಿಟ್ಟು ಹೋಗಿ ಎಂದ ಪೊಲೀಸರು

    ಮೃತ ರೇಣುಕಾಸ್ವಾಮಿ ಮನೆಯಲ್ಲಿ ಸೂತಕ ಕಳೆಯುವ ಪೂಜೆ

ರೇಣುಕಾಸ್ವಾಮಿ ಹತ್ಯೆ ಕೇಸ್ ವಿಚಾರಣೆ ಬೆಂಗಳೂರಿನಿಂದ ಚಿತ್ರದುರ್ಗದವರೆ ಚಾಚಿಕೊಂಡಿದೆ. ಮೊನ್ನೆ ಬೆಂಗಳೂರಿನ ಶೆಡ್​ನಲ್ಲಿ ಸ್ಪಾಟ್ ಮಹಜರು ಮಾಡಲು ಅನ್ನಪೂರ್ಣೇಶ್ವರಿ ನಗರದ ಪೊಲೀಸರು, ಮಧ್ಯರಾತ್ರಿ ಚಿತ್ರದುರ್ಗಕ್ಕೆ ಆರೋಪಿಗಳನ್ನ ಕರೆದೊಯ್ದು ಸ್ಪಾಟ್​​ ವೆರಿಫಿಕೇಷನ್​ ಮಾಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕರೆತಂದು ಚಿತ್ರಹಿಂಸೆ ಕೊಟ್ಟು ದರ್ಶನ್ ಅಂಡ್ ಗ್ಯಾಂಗ್ ಕೊಂದು ಹಾಕಿದೆ ಎಂಬ ಆರೋಪ ಇದೆ. ಈ ಪ್ರಕರಣ ಚಿತ್ರದುರ್ಗದಿಂದ ಶುರುವಾಗಿದ್ದು, ಅಲ್ಲಿಗೆ ಆರೋಪಿಗಳನ್ನ ಕರೆದೊಯ್ದು ಪೊಲೀಸರು ಸ್ಪಾಟ್ ವೆರಿಫಿಕೇಷನ್ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ್ದ ರಾಘವೇಂದ್ರ, ಕಾರ್ತಿಕ್, ನಂದಿಶ್, ಪವನ್‌ನಿಂದ ಪೊಲೀಸರು ಸ್ಥಳ ಮಹಜರು ಮಾಡಿಸಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..!

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ.. ಪ್ರಕರಣದ ಇಂಚಿಂಚನ್ನೂ ಪೊಲೀಸರು ಜಾಲಾಡುತ್ತಿದ್ದಾರೆ. ಜೊತೆಗೆ ಆರೋಪಿಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ.. ಯಾವಾಗ ಕೊಲೆ ಆರೋಪಿಗಳು ಚಿತ್ರದುರ್ಗಕ್ಕೆ ಬರ್ತಿದ್ದಾರೆ ಅಂತ ಗೊತ್ತಾಯ್ತೋ ನಗರದ ಚಳ್ಳಕೆರೆ ಗೇಟ್​ನ ಬಾಲಾಜಿ ಬಾರ್ ಬಳಿ ಜನ ಕಿಕ್ಕಿರಿದು ಸೇರಿದ್ರು.. ಹೀಗಾಗಿ ಜನರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಟೈಗರ್​ ವಾಹನದ ಮೈಕ್​ನಲ್ಲಿ ದರ್ಶನ್ ಬರುತ್ತಿಲ್ಲ ದಯವಿಟ್ಟು ಜನರೆಲ್ಲಾ ಹೋಗಬಹುದು ಅಂತ ಪ್ರಕಟಣೆ ಕೂಡ ಮಾಡಿದ್ರು.

ಮೃತ ರೇಣುಕಾಸ್ಚಾಮಿ ಮನೆಯಲ್ಲಿ ಸೂತಕ ಕಳೆಯುವ ಪೂಜೆ
ಮಗನೇ ಒಮ್ಮೆ‌ಮತ್ತೆ ಹುಟ್ಟಿ ಬಾ, ಅಮ್ಮಾ ಅನ್ನೋ ಅಂತಾ ರೋಧಿಸುತ್ತಿರುವ ತಾಯಿ, ಇತ್ತ ಮನೆಯಲ್ಲಿ ಸ್ಮಶಾಸನ ನೀರವ ಮೌನ. ಭಾರವಾದ ಮನಸ್ಸಿನಿಂದ ಮಗನ ಸಮಾಧಿಗೆ ಪೂಜೆ ಸಲ್ಲಿಸುತ್ತಿರುವ ತಾಯಿ ಒಂದೆಡೆಯಾದ್ರೆ.. ನಮ್ಮ ಮಗನ ಸಾವಿಗೆ ನ್ಯಾಯ ಕೊಡ್ಸಿ ಅಂತಾ ಗೋಗರೆಯುತ್ತಿರುವ ತಂದೆ ಮತ್ತೊಂದೆಡೆ. ನಟ ದರ್ಶನ್ ದರ್ಪಕ್ಕೆ ಬಲಿಯಾದ ರೇಣುಕಾಸ್ವಾಮಿ ಕುಟುಂಬಸ್ಥರ ಕಣ್ಣೀರು ಎಲ್ಲರನ್ನೂ ದುಃಖಕ್ಕೆ ದೂಡಿತ್ತು.

ಮಗನನ್ನು ಕಳೆದುಕೊಂಡ ಕುಟುಂಬದ ಸದಸ್ಯರು ಭಾರದ ಮನಸ್ಸಿನಿಂದ ಮೂರನೇ ದಿನದ ಶಾಸ್ತ್ರ ನೆರವೇರಿಸಿದರು. ಸ್ಮಶಾನಕ್ಕೆ ತೆರಳಿ ಕುಟುಂಬಸ್ಥರು ರೇಣುಕಾಸ್ಚಾಮಿ ಸಮಾಧಿಗೆ ಹಾಲು ತುಪ್ಪ ಹಾಕಿ ಕ್ರಿಯಾವಿಧಿ ನಡೆಸಿದ್ರು. ಈ ವೇಳೆ ತಾಯಿಯ ರತ್ನಪ್ರಭಾ ಆಕ್ರಂದನ ಎಂಥವರ ಕಣ್ಣಾಲೆಗಳನ್ನೂ ಕೂಡ ತೇವ ಮಾಡುವಂತಿತ್ತು. ಇನ್ನು ಮಗನ ಸಾವಿನ ತನಿಖೆಯಲ್ಲಿ ರಾಜಕೀಯ ಕೈವಾಡ ಕುರಿತು ತಂದೆ ಅಸಮಾಧಾನ ಹೊರಹಾಕಿದ್ದು, ನಿಷ್ಪಕ್ಷಪಾತ ತನಿಖೆಗೆ ಒತ್ತಾಯ ಮಾಡಿದ್ರು.

ಇದನ್ನೂ ಓದಿ:ಮೃತದೇಹ ವಿಲೇವಾರಿಗೆ 30 ಲಕ್ಷ ರೂ ಡೀಲ್..? ರಾತ್ರಿ ಇಡೀ ದರ್ಶನ್​ಗೆ ಫೋನ್ ಕರೆ.. ನಟ ಸಿಕ್ಕಿಬಿದ್ದಿದ್ದು ಹೀಗೆ..!

ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ?
ರೇಣುಕಾಸ್ವಾಮಿ ಮರ್ಡರ್ ಕೇಸ್​ಗೆ ಮಧ್ಯಾಹ್ನದ ವೇಳೆಗೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದು ಆ ಒಂದು ಕರೆ. ಆ ಕರೆಯಲ್ಲಿ ರೇಣುಕಾಸ್ವಾಮಿ ಅಪೋಲೋ ಫಾರ್ಮಸಿ ಮುಂದೆ ಸುಮಾರು 24 ನಿಮಿಷಗಳ‌ ಕಾಲ ಮಾತನಾಡಿದ್ದ. ಮಾತನಾಡುತ್ತಲೇ ತುಂಬಾ ವಿಚಲಿತನಾಗಿದ್ದ. ಕಾಲ್ ಕಟ್ ಮಾಡುತ್ತಲೇ ರೇಣುಕಾಸ್ವಾಮಿ ಬೈಕ್ ಏರಿ ಹೊರಟು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಕಾಲ್ ನಂತರ ರೇಣುಕಾಸ್ವಾಮಿ ವಿಚಲಿತನಾಗಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಾಗಾದ್ರೆ ಆ ಕಾಲ್ ಮಾಡಿದ್ದಾದ್ರು ಯಾರಿಗೆ ಅನ್ನೋದರ ಬಗ್ಗೆ ಪೊಲೀಸರ ತನಿಖೆಯಲ್ಲಿ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?

https://newsfirstlive.com/wp-content/uploads/2024/06/darshan18.jpg

Load More