newsfirstkannada.com

‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

Share :

Published June 15, 2024 at 12:57pm

    ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಅರೆಸ್ಟ್

    ಪ್ರಕರಣದ ಮೂರನೇ ಆರೋಪಿ ಪವನ್ ಕೂಡ ಬಂಧನ

    ಬೆಂಗಳೂರು ಪೊಲೀಸರಿಂದ ಆರೋಪಿಗಳ ತೀವ್ರ ವಿಚಾರಣೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್​ ವಿರುದ್ಧದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಪ್ರಕರಣದ ಮೂರನೇ ಆರೋಪಿ ಪವನ್ ತಂದೆ ಕೆಂಪರಾಯ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿ.. ಅವನಿಗೆ ಯಾವುದೇ ತೊಂದರೆ ಇಲ್ಲ. ದರ್ಶನ್ ಜೊತೆಗೆ ಇದ್ದು 10 ರಿಂದ 12 ವರ್ಷಗಳಾಗಿವೆ. ನಾವು ಆಗಲೇ ಹೇಳಿದ್ವಿ, ಬಿಟ್ಟು ಬಂದುಬಿಡಪ್ಪ ಅಂತಾ. ಹೀಗಿದ್ದೂ ಅಲ್ಲಿಯೇ ಹೋಗಿ ಸೇರಿಕೊಂಡಿದ್ದಾನೆ. ಇದಕ್ಕೆ ನಾವು ಏನೂ ಹೇಳೋಕೆ ಆಗಲ್ಲ.

ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ರೋಚಕ.. ಸಿನಿಮಾವನ್ನೂ ಮೀರಿಸಿದ ‘ಆಪರೇಷನ್ ಡಿ’..!

ದರ್ಶನ್ ಮನೆಗೆ ಒಂದೇ ಒಂದು ದಿನ ನಾವು ಹೋಗಿಲ್ಲ. ಆತ ಏನು ಕೆಲಸ ಮಾಡ್ತಿದ್ದಾನೆ ಅಂತನೂ ನಮಗೆ ಗೊತ್ತಿಲ್ಲ. ಸಂಬಳ ಎಷ್ಟಿತ್ತೋ ಗೊತ್ತಿಲ್ಲ. 10 ರಿಂದ 15 ಹಸು ಕಟ್ಟಿಕೊಂಡು ನಾವಿಬ್ಬರು ಬಡಿದಾಡುತ್ತಿದ್ದೇವೆ. ಅದನ್ನೆಲ್ಲ ಕೇಳ್ಕೊಂಡು ನಮಗೆ ಏನಾಗಬೇಕು? ಅವರಣ್ಣ ಉಂಟು, ಅವನುಂಟು. ನಮ್ಮದು ಏನೂ ಇಲ್ಲ. ಅವನು ದರ್ಶನ್​ಗೆ ನಮ್ಮಣ್ಣ, ಪವಿತ್ರಗೆ ನಮ್ಮಕ್ಕ ಎಂದು ಹೇಳ್ತಾನೆ. ಪ್ರಕರಣ ಬಗ್ಗೆ ನಾವು ಏನೂ ಹೇಳೋಕೆ ಆಗಲ್ಲ. ಅವರು ಯಾವಾಗ ಮಗನ ಬಿಡಿಸಿಕೊಡ್ತಾರೆ. ಯಾವಾಗ ನಮ್ಮ ಮನೆಗೆ ಕಳುಹಿಸಿ ಕೊಡ್ತಾರೆ. ಅವತ್ತು ಬರಲಿ. ಇಲ್ಲದಿದ್ರೆ ಅಲ್ಲೇ ಇರಲಿ. ನಾವು ತಲೆನೇ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿರಲಿಲ್ಲ -ಪವನ್ ತಾಯಿ ಕಣ್ಣೀರು

ಆದರೆ ಪವನ್​​ ತಾಯಿ ಜಯಲಕ್ಷ್ಮಮ್ಮ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಕಣ್ಣೀರು ಇಟ್ಟಿದ್ದಾರೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನನ್ನು ಪಿತೂರಿ ಮಾಡಿ ಕೇಸ್​ನಲ್ಲಿ ಸಿಕ್ಕಿಸಿ ಹಾಕ್ತಿದ್ದಾರೆ. ನನ್ನ ಮಗ ತುಂಬಾ ಒಳ್ಳೆಯವನು. ನಾವು ಕೂಡ ಹಸುಗಳನ್ನು ಕಟ್ಟಿಕೊಂಡು ಸಂಸಾರ ಸಾಗಿಸುತ್ತಿದ್ದೇವೆ. ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಕಳೆದ 12 ವರ್ಷಗಳಿಂದ ದರ್ಶನ್ ಜೊತೆಯಲ್ಲಿದ್ದಾನೆ. ದರ್ಶನ್ ಅವರೇ ಅವನನ್ನು ಎಂಕಾಂ ಓದಿಸಿದ್ದಾರೆ. ನನ್ನ ಮಗ ತುಂಬಾ ಒಳ್ಳೆಯವನು. ನಾವು ಕೂಡ ಹಸುಗಳನ್ನು ಕಟ್ಟಿಕೊಂಡು ಸಂಸಾರ ಸಾಗಿಸುತ್ತಿದ್ದೇವೆ. ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಕಳೆದ 12 ವರ್ಷಗಳಿಂದ ದರ್ಶನ್ ಜೊತೆಯಲ್ಲಿದ್ದಾನೆ. ದರ್ಶನ್ ಅವರೇ ಅವನನ್ನು ಎಂಕಾಂ ಓದಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಅಲ್ಲಿ ಏನಾಗ್ತಿದೆ ಅನ್ನೋದು ನನಗೆ ಗೊತ್ತೇ ಇಲ್ಲ, ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಮತ್ತೊಂದು ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

https://newsfirstlive.com/wp-content/uploads/2024/06/DARSHAN-27.jpg

Load More