newsfirstkannada.com

ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!

Share :

Published June 15, 2024 at 1:26pm

    ಐಪಿಎಲ್​​ನ ಅಬ್ಬರ.. ಟಿ20 ವಿಶ್ವಕಪ್​ನಲ್ಲಿ ಮಾಯ..!

    ತಲೆಕೆಳಗಾಯ್ತು ಟೀಮ್ ಮ್ಯಾನೇಜ್​ಮೆಂಟ್ ಲೆಕ್ಕಾಚಾರ..!

    3 ಪಂದ್ಯ.. 5 ರನ್​.. 9 ಎಸೆತ.. ಕೊಹ್ಲಿ ಟ್ರ್ಯಾಕ್ ರೆಕಾರ್ಡ್​!

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್​​​ನ ರನ್ ಸಾಮ್ರಾಟ. ಕೊಹ್ಲಿ ಅಪ್ರತಿಮ ಬ್ಯಾಟಿಂಗ್​ಗೆ ಒಂದಿಲ್ಲೊಂದು ದಾಖಲೆ ಚಿಂದಿಯಾಗುತ್ತೆ. ವಿರಾಟ್​ ಕೊಹ್ಲಿಯ ಕ್ಲಾಸ್ ಆ್ಯಂಡ್​​ ಮಾಸ್ ಪರ್ಫಾಮೆನ್ಸ್​ಗೆ ವಿಲವಿಲ ಒದ್ದಾಡೋ ಬೌಲರ್​​ಗಳು, ವಿಕೆಟ್ ಪಡೆಯೋದಕ್ಕೆ ಪರದಾಡ್ತಾರೆ. ಇದೇ ದಿಗ್ಗಜ ರನ್ ಗಳಿಸೋಕೆ ಪರದಾಡ್ತಿದ್ದಾರೆ. ಇದು ಟೀಮ್ ಇಂಡಿಯಾಗೆ ಟೆನ್ಶನ್ ತಂದಿಟ್ಟಿದೆ.

ವಿರಾಟ್ ಕೊಹ್ಲಿ.. ಕ್ರೀಸ್​​ಗೆ ಇಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ವಿರಾಟ್​​ ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗ್ತಾರೆ. ಅಷ್ಟರಮಟ್ಟಿಗೆ ಆನ್​​​ಫೀಲ್ಡ್​ನಲ್ಲಿ ವಿರಾಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಸೃಷ್ಟಿಸ್ತಾರೆ. ಟಿ20 ವಿಶ್ವಕಪ್​ ಅಂದ್ರೆ, ತಾನೇ ಮ್ಯಾಚ್ ವಿನ್ನರ್, ತಂಡದ ಆಪ್ತ ರಕ್ಷಕನಾಗಿ ಇರ್ತಾರೆ. ಆದ್ರೀಗ ಇದೇ ವಿರಾಟ್ ತಲೆನೋವಾಗಿದ್ದಾರೆ.

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

ಟಿ20 ವಿಶ್ವಕಪ್​ನಲ್ಲಿ ಅಬ್ಬರಿಸಬೇಕಿದ್ದ ವಿರಾಟ್​​ ಕೊಹ್ಲಿ, ಮಂಕಾಗಿ ಹೋಗಿದ್ದಾರೆ. ರನ್​ ಶಿಖರ ಕಟ್ಟಬೇಕಿದ್ದ ರನ್ ಮಷಿನ್, ಆರಂಭಿಕನಾಗಿ ಫುಲ್ ಡಲ್ ಆಗಿದ್ದಾರೆ. ಇದು ಟೀಮ್ ಮ್ಯಾನೇಜ್​ಮೆಂಟ್​ಗೆ ಮಾತ್ರವಲ್ಲ.. ಫ್ಯಾನ್ಸ್​​ ಮನದಲ್ಲೂ ಆತಂಕ ಮೂಡಿಸಿದೆ. ಅಷ್ಟೇ ಅಲ್ಲ..! ವಿರಾಟ್​​​ ಕೊಹ್ಲಿಗೆ ಫೇವರಿಟ್​ ಸ್ಲಾಟ್​ ನೀಡುವಂತೆ ಕಿಡಿ ಕಾರುತ್ತಿದ್ದಾರೆ. ಹೀಗಾಗಿ ವಿರಾಟ್​ ಕೊಹ್ಲಿಯ ಸ್ಲಾಟ್​​ ಚೇಂಜಸ್​​ಗೆ ​​​​​​​​​​​​​​​​​​​​​​ ಟೀಮ್ ಮ್ಯಾನೇಜ್​ಮೆಂಟ್ ಮುಂದಾಗಿದೆ.

ಐಪಿಎಲ್​​ನಲ್ಲಿ ಅಬ್ಬರ.. T20 ವಿಶ್ವಕಪ್​ನಲ್ಲಿ ಮಾಯ..!
ಐಪಿಎಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್​ನಲ್ಲಿ ಫುಲ್​​ ಮಂಕಾಗಿದ್ದಾರೆ. ಇದಕ್ಕೆ ಸಾಕ್ಷಿ ಟಿ20 ವಿಶ್ವಕಪ್​ನಲ್ಲಿ ಮೊದಲ 3 ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ನೀಡಿರೋ ಹೀನಾಯ ಪರ್ಫಾಮೆನ್ಸ್. ಆರಂಭಿಕನಾಗಿ ಐಪಿಎಲ್​ನಲ್ಲಿ ಅಬ್ಬರಿಸಿದ್ದ ವಿರಾಟ್, ಟಿ20 ವಿಶ್ವಕಪ್​ನಲ್ಲಿ ಇನ್ನಿಂಗ್ಸ್​ ಆರಂಭಿಸಲಿ ಅನ್ನೋದು ಎಲ್ಲರ ಹೆಬ್ಬಯಕೆ ಆಗಿತ್ತು. ಐಪಿಎಲ್​ನಲ್ಲಿ ರನ್ ಫೆಸ್ಟ್​ ಮಾಡಿದ್ದ ವಿರಾಟ್, ಟಿ20 ವಿಶ್ವಕಪ್​ನಲ್ಲಿ ಎರಡಂಕಿ ಮೊತ್ತ ಕಲೆಹಾಲು ಹೆಣಗಾಡ್ತಿದ್ದಾರೆ. ಐರ್ಲೆಂಡ್​​ನಂತ ಸಣ್ಣ ದೇಶದ ಎದುರು ಕೇವಲ 1 ರನ್​​ಗೆ ಔಟಾಗಿದ್ದ ಕೊಹ್ಲಿ, ಪಾಕ್​​ ಎದುರು 4 ರನ್​ಗೆ ಆಟ ಮುಗಿಸಿದ್ರು. ಯುಎಸ್​ಎ ವಿರುದ್ಧವಂತೂ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಈ 3 ಪಂದ್ಯಗಳಿಂದ ಕೊಹ್ಲಿ ಎದುರಿಸಿದ ಎಸೆತ ಜಸ್ಟ್​ 9.. ಹೀಗೆ ಸುಲಭಕ್ಕೆ ವಿರಾಟ್​ ವಿಕೆಟ್ ಒಪ್ಪಿಸಿರುವುದು ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದೆ.

ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ರೋಚಕ.. ಸಿನಿಮಾವನ್ನೂ ಮೀರಿಸಿದ ‘ಆಪರೇಷನ್ ಡಿ’..!

ಸೂಪರ್​-8ನಲ್ಲಿ ವಿರಾಟ್ ಫಾರ್ಮ್​ ಅನಿವಾರ್ಯ..!
ಟೀಮ್ ಇಂಡಿಯಾ ಪಾಲಿಗೆ ಸೂಪರ್ 8 ಪಂದ್ಯಗಳು ನಿರ್ಣಾಯಕ. ಈ ವೇಳೆಗೆ ವಿರಾಟ್ ಕೊಹ್ಲಿ, ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾಗಿದೆ. ಯಾಕಂದ್ರೆ, ಇಲ್ಲಿನ ಪ್ರತಿ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಕ್ರೂಶಿಯಲ್ ಆಗಿರಲಿವೆ. ವಿರಾಟ್​ ಕೊಹ್ಲಿಯಂತಹ ಅನುಭವಿ ಆಟಗಾರನ ರೋಲ್ ಇಂಪಾರ್ಟೆಂಟ್ ಆಗಿರಲಿದೆ. ಹೀಗಾಗಿ ವಿರಾಟ್​​ ಕೊಹ್ಲಿ ಫಾರ್ಮ್ ಬಗ್ಗೆ ತಲೆ ಕೆಡಿಸಿಕೊಂಡಿರುವ ಟೀಮ್ ಮ್ಯಾನೇಜ್​ಮೆಂಟ್​, ಕೆನಡಾ ಎದುರಿನ ಪಂದ್ಯದಲ್ಲಿ ವಿರಾಟ್​​ ಕೊಹ್ಲಿಯನ್ನ ಮರಳಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿದರು ಅಚ್ಚರಿ ಇಲ್ಲ..

3ನೇ ಕ್ರಮಾಂಕಕ್ಕೆ​ ಕೊಹ್ಲಿ.. ಜೈಸ್ವಾಲ್ ಓಪನರ್..?
ಆರಂಭಿಕನಾಗಿ ವೈಫಲ್ಯ ಅನುಭವಿಸಿರುವ ವಿರಾಟ್​ ಕೊಹ್ಲಿ, ತನ್ನ ಫೇವರಿಟ್ 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್​ಗೆ ಇಳಿದ್ರೆ, ಸ್ಪೆಷಲಿಸ್ಟ್​ ಓಪನರ್​ ಮುಂಬೈಕರ್ ಜೈಸ್ವಾಲ್​​, ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್​ ಆರಂಭಿಸುವುದು ಗ್ಯಾರಂಟಿ. ಮುಂಬೈಕರ್​ಗಳು ಇನ್ನಿಂಗ್ಸ್​ ಆರಂಭಿಸುವುದು ಟೀಮ್ ಇಂಡಿಯಾ ಬಿಗ್ ಅಡ್ವಾಂಟೇಜ್ ಆಗಲಿದೆ. ಲೆಫ್ಟಿ ರೈಟಿ ಕಾಂಬಿನೇಷನ್​​ನಿಂದ ಎದುರಾಳಿ ಮೇಲೆಯೂ ಒತ್ತಡ ಹೇರಬಹುದಾಗಿದೆ.

ಟಿ20 ವಿಶ್ವಕಪ್​ ಇತಿಹಾಸದಲ್ಲಿ ಲೀಡಿಂಗ್ ರನ್ ಸ್ಕೋರರ್ ಆಗಿರೋ ವಿರಾಟ್​, ಎಂದಿನ 3ನೇ ಕ್ರಮಾಂಕದಲ್ಲೇ ಬ್ಯಾಟ್​ ಬೀಸೋದ್ರಿಂದ ಫಾರ್ಮ್​ ಕಂಡುಕೊಳ್ಳಲು ನೆರವಾಗುತ್ತೆ. ಇದೇ ಸ್ಲಾಟ್​​ನಲ್ಲಿ ಬ್ಯಾಟ್​ ಬೀಸಿಯೇ ವಿರಾಟ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ 3 ಸಾವಿರಕ್ಕೂ ಅಧಿಕ ರನ್ ಗಳಿಸಿರುವುದು. ಹೀಗಾಗಿ ಹಾಟ್​ ಫೇವರಿಟ್ ಸ್ಲಾಟ್​​ನಲ್ಲೇ ವಿರಾಟ್​, ಬ್ಯಾಟ್​ ಬೀಡೋದು ತಂಡಕ್ಕೆ ಉತ್ತಮ ಕೂಡ. ಯಶಸ್ವಿ ಎಂಟ್ರಿ ಯಾರ ಪಾಲಿಗೆ ಮುಳ್ಳಾಗುತ್ತೆ ಅನ್ನೋದು ಯಕ್ಷಪ್ರಶ್ನೆ.

ಇದನ್ನೂ ಓದಿ:ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್​ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!

ಒಟ್ನಲ್ಲಿ, ಐಪಿಎಲ್​ ಸಕ್ಸಸ್​ ಅನ್ನೇ ನಂಬಿಕೊಂಡು ಕಿಂಗ್​​ ಕೊಹ್ಲಿಯನ್ನ ಆರಂಭಿಕರನ್ನಾಗಿ ಟೀಮ್ ಮ್ಯಾನೇಜ್​ಮೆಂಟ್​ ಆಡಿಸಿ ಕೈಸುಟ್ಟುಕೊಂಡಿದೆ. ಹೀಗಾಗಿ ಮುಂದಿನ ಮಹತ್ವದ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲೇ ಆಡಿಸಿ ಸಕ್ಸಸ್​ ಕಾಣುವ ಲೆಕ್ಕಚಾರ ಮ್ಯಾನೇಜ್​ಮೆಂಟ್ ಮುಂದಿದ್ದು, ಕಾರ್ಯರೂಪಕ್ಕೆ ಇಳಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!

https://newsfirstlive.com/wp-content/uploads/2024/06/Kohli_Rohit-1.jpg

Load More