newsfirstkannada.com

ಪೆಟ್ರೋಲ್‌, ಡೀಸೆಲ್‌​ ಬೆಲೆ​ ಏರಿಕೆ ಶಾಕ್..ಸರ್ಕಾರದ ಬೊಕ್ಕಸಕ್ಕೆ 3 ಸಾವಿರ ಕೋಟಿ ರೂಪಾಯಿ ಆದಾಯ!

Share :

Published June 16, 2024 at 7:06am

Update June 16, 2024 at 7:46am

    ಸರ್ಕಾರದ ಬೊಕ್ಕಸಕ್ಕೆ 3 ಸಾವಿರ ಕೋಟಿ ರೂ ಆದಾಯ

    ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದ ಸಿದ್ದು

    ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಪನ್ಮೂಲ ಕ್ರೋಢೀಕರಣ

ರಾಜ್ಯದ ಜನತೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಶಾಕ್‌ ಎದುರಾಗಿದೆ. ರಾಜ್ಯ ಸರ್ಕಾರದ ಬೊಕ್ಕಸವನ್ನ ತುಂಬಿಸಲು ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇದೀಗ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಲಾಭದ ನಿರೀಕ್ಷೆ ಇದೆ. ಈ ಮಧ್ಯೆ ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸಿಡಿದೆದ್ದಿವೆ.

ಇದು ಗ್ಯಾರಂಟಿ ಸರ್ಕಾರದ ಉಡುಗೊರೆ.. ಪಂಚ ಗ್ಯಾರಂಟಿ ಕೊಟ್ಟ ಸರ್ಕಾರ, ದುಬಾರಿ ದುನಿಯಾದ ಹೊಸ ಗ್ಯಾರಂಟಿ ನೀಡಿದೆ.. ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಜನತೆಗೆ ಸರ್ಕಾರ ಕೊಟ್ಟ ಶಾಕ್​ಗೆ ಜೇಬು ಕತ್ತರಿಸಿ ಬೀಳುವಂತಿದೆ.. ಅಂದ್ಹಾಗೆ ರಾಜ್ಯದ ಜನತೆಯ ಹೊಟ್ಟೆ ಪಾಡಿನ ಮೇಲೆ ಪೆಟ್ರೋಲ್​​​ ಬಾಂಬ್​​​ ಹಾಕಿದೆ.

ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ಆಪರೇಷನ್ ಡಿ..! ದರ್ಶನ್ ಬಂಧನ ನೀವು ಅಂದುಕೊಂಡಷ್ಟು ಸುಲಭ ಇರಲಿಲ್ಲ..!

ರಾಜ್ಯದ ಜನತೆಗೆ ಪೆಟ್ರೋಲ್‌, ಡೀಸೆಲ್‌​​ ಏರಿಕೆ ಶಾಕ್‌!
ರಾಜ್ಯ ಸರ್ಕಾರ ಶೇಕಡಾ 4ರಷ್ಟು ಅಬಕಾರಿ ಸುಂಕ ಹೆಚ್ಚಿಸಿದೆ.. ಈ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್​​​ ದರ ಶತಕದ ಗಡಿದಾಟಿದ್ದು, 102 ರೂಪಾಯಿ 87 ಪೈಸೆ ತಲುಪಿದೆ. ಇನ್ನು, ಡೀಸೆಲ್‌​​​ನಲ್ಲಿ 88.95 ರೂಪಾಯಿಗೆ ಮುಟ್ಟಿದೆ.. ಸದ್ಯ ಗ್ಯಾರಂಟಿಗಳ ಹೊರೆ ಹೊತ್ತ ರಾಜ್ಯ ಸರ್ಕಾರ, ಈ ತೈಲ ತೆರಿಗೆಯಿಂದ ವರ್ಷದಲ್ಲಿ 3 ಸಾವಿರ ಕೋಟಿ ಆದಾಯದ ನಿರೀಕ್ಷೆ ಹೊಂದಿದೆ.

ಬೊಕ್ಕಸ ತುಂಬಿಸಲು ಬರೆೆ!

  • ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಿಎಂ
  • ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದ ಸಿದ್ದು
  • ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಪನ್ಮೂಲ ಕ್ರೋಢೀಕರಣ
  • ವಾರ್ಷಿಕ 1 ಲಕ್ಷ 10 ಸಾವಿರ ಕೋಟಿ ಆದಾಯ ಸಂಗ್ರಹದ ಟಾಸ್ಕ್
  • ಡೀಸೆಲ್‌ ಹಾಗೂ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ
  • ಪೆಟ್ರೋಲ್, ಡೀಸೆಲ್ ಸುಂಕ ಹೆಚ್ಚಳದಿಂದ ಆದಾಯ ನಿರೀಕ್ಷೆ
  • ಬೊಕ್ಕಸಕ್ಕೆ ₹2,500 ರಿಂದ 3000 ಸಾವಿರ ಕೋಟಿ ಸಂಗ್ರಹ ಗುರಿ

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆಯನ್ನ ವಿಪಕ್ಷಗಳ ನಾಯಕರು ಖಂಡಿಸಿದ್ದಾರೆ.. ಗ್ಯಾರಂಟಿ ಈಡೇರಿಸಲು ಸಾಧ್ಯವಾಗದೆ ಭಂಡ ಸರ್ಕಾರ ದರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಇತ್ತ ರಾಜ್ಯ ಸರ್ಕಾರ ಬಡವರ ಕಿಸೆಗೆ ಕೈ ಹಾಕಿ ಯಾವ ಯಾವ ಇಲಾಖೆಯಲ್ಲಿ ಎಷ್ಟು ದೋಚಿದ್ದಾರೋ ಅಂತ ಗುಡುಗಿದ್ದಾರೆ.

ಒಟ್ಟಾರೆ, ಡೀಸೆಲ್‌ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ.. ಹೀಗೆ ಬೆಲೆ ಮತ್ತೊಮ್ಮೆ ಗಗನಮುಖಿ ಆದ್ರೆ, ಜನಸಾಮಾನ್ಯರ ಗತಿಯೇನು ಅನ್ನೋದೆ ಸದ್ಯದ ಚಿಂತೆ.

ಇದನ್ನೂ ಓದಿ:ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೆಟ್ರೋಲ್‌, ಡೀಸೆಲ್‌​ ಬೆಲೆ​ ಏರಿಕೆ ಶಾಕ್..ಸರ್ಕಾರದ ಬೊಕ್ಕಸಕ್ಕೆ 3 ಸಾವಿರ ಕೋಟಿ ರೂಪಾಯಿ ಆದಾಯ!

https://newsfirstlive.com/wp-content/uploads/2023/09/Pakistan-Petrol.jpg

Load More