newsfirstkannada.com

ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್.. ಕ್ರಿಕೆಟ್​ ದುನಿಯಾದಲ್ಲಿ ಹೇಗೆ ನಡೀತಿದೆ ಬಾಜಿ?

Share :

Published June 16, 2024 at 3:50pm

    T20 ವರ್ಲ್ಡ್​​​ಕಪ್​ ಚಾಂಪಿಯನ್​ ಆಗೋ ರೇಸ್​ನಲ್ಲಿವೆ 10 ತಂಡಗಳು

    ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್ ಕಟ್ಟಲು ಕಾರಣ?

    ಟಿ20 ವಿಶ್ವಕಪ್​ ಗೆಲ್ಲೋದು ಯಾರು, ಯಾವ ಟೀಮ್​ಗಿದೆ ಆ ಅದೃಷ್ಟ.?

ಟಿ20 ವಿಶ್ವಕಪ್​ ದಿನೇ ದಿನೇ ರೋಚಕತೆ ಪಡೆದುಕೊಳ್ಳುತ್ತಿದೆ. ಲೀಗ್ ಮ್ಯಾಚ್​ಗಳು ಬಹುತೇಕ ಮುಗಿದ್ದಿದ್ದು, ಅರ್ಧಕ್ಕರ್ಧ ತಂಡಗಳು ಮನೆಗೆ ಹೊರಟಿವೆ. ಆದ್ರೆ, ಈ ನಡುವೆ ಟಿ20 ವಿಶ್ವಕಪ್​ ಗೆಲ್ಲೋದು ಯಾರು ಎಂಬ ಚರ್ಚೆ ಜೋರಾಗಿ ನಡೀತಿದ್ದು, ಟೀಮ್ ಇಂಡಿಯಾನೇ ಕಪ್​ ಗೆಲ್ಲೋ ಹಾಟ್​ ಫೇವರಿಟ್ಸ್​ ಆಗಿದೆ.

ಟಿ20 ವಿಶ್ವಕಪ್​ನಲ್ಲಿ ಯಾರ್ ಆಗ್ತಾರೆ ಚಾಂಪಿಯನ್.? ಇದು ಸದ್ಯ ವಿಶ್ವ ಕ್ರಿಕೆಟ್​ ಲೋಕದ ಹಾಟ್​ ಟಾಪಿಕ್. ಕ್ರಿಕೆಟ್​ ಪ್ರೇಮಿಗಳಿಂದ ಹಿಡಿದು ಕ್ರಿಕೆಟ್​ ದಿಗ್ಗಜರ ತನಕ ಚರ್ಚೆಯಾಗ್ತಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತ ತಲುಪಿದ್ದು, ಬಳಿಕ ಸೂಪರ್​-8 ಪಂದ್ಯಗಳ ಆರ್ಭಟ ಶುರುವಾಗಲಿದೆ. ಅದಕ್ಕೂ ಮುನ್ನ ಟಿ20 ಚಾಂಪಿಯನ್ ಯಾರ್ ಆಗ್ತಾರೆ ಅನ್ನೋ ಪ್ರಶ್ನೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇದಕ್ಕೆಲ್ಲ ಕಾರಣ ಪ್ರಸಕ್ತ ಆವೃತ್ತಿಯಲ್ಲಿ ಬಂದಿರೋ ಅನ್​ಪ್ರಡಿಕ್ಟಬಲ್​ ಫಲಿತಾಂಶ​.

ಈ ಅನ್​ಪ್ರಡಿಕ್ಟಬಲ್​ ಟೂರ್ನಿಯಲ್ಲಿ ಭಾಗಿಯಾಗಿದ್ದ 20 ತಂಡಗಳ ಪೈಕಿ, ಈಗಾಗಲೇ 10 ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಸದ್ಯ 10 ತಂಡಗಳು ಚಾಂಪಿಯನ್​ ಆಗೋ ರೇಸ್​ನಲ್ಲಿವೆ. ಆದ್ರೆ, ಈ 10ರ ಪೈಕಿ ಒಂದೇ ಒಂದು ತಂಡ ಮಾತ್ರ ಚಾಂಪಿಯನ್ ಆಗೋ ಹಾಟ್​ ಫೇವರಿಟ್ಸ್​ ಆಗಿ ಕಾಣಿಸಿಕೊಳ್ಳುತ್ತಿದೆ.

T20 ವಿಶ್ವಕಪ್​​ನ ಹಾಟ್​ ಫೇವರಿಟ್ಸ್​ ಟೀಮ್ ಇಂಡಿಯಾ..!

2007ರ ಚೊಚ್ಚಲ ಟಿ20 ವಿಶ್ವಕಪ್​ ಬಳಿಕ ಟೀಮ್ ಇಂಡಿಯಾ, ಚುಟುಕು ಕಿರೀಟಕ್ಕೆ ಮುತ್ತಿಟ್ಟಿದ್ದೇ ಇಲ್ಲ. ಪ್ರಸಕ್ತ ಟೂರ್ನಿಯಲ್ಲಿ ಟೀಮ್ ಇಂಡಿಯಾ ನೀಡಿದ ಪರ್ಫಾಮೆನ್ಸ್​ ನೋಡಿದ್ರೆ. ಈ ಸಲನೂ ಕಪ್​ ಗೆಲ್ಲುತ್ತಾ ಎಂಬ ಆತಂಕ ಫ್ಯಾನ್ಸ್ ಮನದಲ್ಲೂ ಇದೆ. ಆದ್ರೆ, ಬೆಟ್ಟಿಂಗ್ ದುನಿಯಾ ಮಾತ್ರ, ಈ 17 ವರ್ಷಗಳ ವನವಾಸಕ್ಕೆ ಟೀಮ್ ಇಂಡಿಯಾ, ಈ ಬಾರಿ ಬ್ರೇಕ್ ಹಾಕುವ ಭವಿಷ್ಯ ನುಡಿಯುತ್ತಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್ ಕಟ್ಟಲಾಗ್ತಿದೆ.

WC​ ಗೆಲ್ಲೋ ರೇಸ್​ನಲ್ಲಿ ರೋಹಿತ್ ಪಡೆಗೆ ಫಸ್ಟ್ ಪ್ಲೇಸ್​

ಟಿ20 ವಿಶ್ವಕಪ್ ಗೆಲುವಿನ​ ರೇಸ್​ನಲ್ಲಿ ಆಸ್ಟ್ರೇಲಿಯಾ, ಆತಿಥೇಯ ವೆಸ್ಟ್​ ಇಂಡೀಸ್, ಸೌತ್ ಆಫ್ರಿಕಾ, ಇಂಗ್ಲೆಂಡ್, ಆಫ್ಘನ್​ನಂತ ಬಲಿಷ್ಠ​​ ತಂಡಗಳಿವೆ. ಆದ್ರೆ, ಈ ಪೈಕಿ ಗೆಲ್ಲುವ ಮೊದಲ ಸ್ಥಾನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಇದೆ. ಇಂಟ್ರೆಸ್ಟಿಂಗ್ ಅಂದ್ರೆ, ಟೀಮ್ ಇಂಡಿಯಾ ಮೇಲೆ ಬಾಜಿ ಕಟ್ಟಿದ್ರೆ, ಸಾವಿರಕ್ಕೆ ಒಂದೂವರೆ ಸಾವಿರ ಹಣ ಸಿಗಲಿದೆ. ಉಳಿದ ತಂಡಗಳಿಗೆ ಹೋಲಿಸಿದ್ರೆ ಇದು ಕಡಿಮೆ ಮೊತ್ತ.

ಹಾಲಿ ಚಾಂಪಿಯನ್ಸ್​ ಆಸ್ಟ್ರೇಲಿಯಾ ಪರ ಬೆಟ್ ಮಾಡಿದ್ರೆ, ದುಪ್ಪಟ್ಟು ಹಣ ಸಿಗಲಿದೆ. ನಂತರದ ಸ್ಥಾನದಲ್ಲಿರುವ ವೆಸ್ಟ್​ ಇಂಡೀಸ್​​ಗೆ 5ರಷ್ಟು ಆಫರ್ ನಡೀತಿದ್ರೆ, ಸೌತ್ ಆಫ್ರಿಕಾ ಪರ ಬಾಜಿ ಕಟ್ಟಿವವರಿಗೆ 7 ಹಾಗೂ ಇಂಗ್ಲೆಂಡ್ ಪರ 1 ರೂಪಾಯಿ ಬೆಟ್ ಮಾಡಿದ್ರೆ, 13 ರೂಪಾಯಿ ಸಿಗಲಿದೆ. ಆಫ್ಘನ್​​​​​​ ತಂಡಗಳ ಪರ ಬೆಟ್ ಮಾಡಿದ್ರೆ, 21ರಷ್ಟು ಹೆಚ್ಚುವರಿ ಹಣ ಸಿಗಲಿದೆ.

ಇದನ್ನೂ ಓದಿ: ಶುಭ್​​ಮನ್​ ಗಿಲ್​ಗೆ ಟೀಮ್​ ಇಂಡಿಯಾದಿಂದ ಗೇಟ್​ಪಾಸ್.. ಕ್ಯಾಪ್ಟನ್ ರೋಹಿತ್ ಜೊತೆ ಜಗಳ ಮಾಡಿಕೊಂಡ್ರಾ?

ಟೀಮ್ ಇಂಡಿಯಾನೇ ಯಾಕೆ ಹಾಟ್ ಫೇವರಿಟ್ಸ್​..?

ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ಬ್ಯಾಟಿಂಗ್​ನಲ್ಲಿ ಕಂಪ್ಲೀಟ್​ ಫ್ಲಾಫ್ ಆಗಿದೆ. ಹೀಗಾದ್ರೂ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ ಗೆಲ್ಲೋ ಹಾಟ್ ಫೇವರಿಟ್ಸ್​ ಆಗಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾಲ್ಲಿನ ಬ್ಯಾಲೆನ್ಸ್​​.

ಇತರೆ ತಂಡಗಳ ದೌರ್ಬಲ್ಯವೇ ಭಾರತಕ್ಕೆ ಪ್ಲಸ್​ ಪಾಯಿಂಟ್​.​​​!

ಅಮೆರಿಕದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್​ನಲ್ಲಿ ಫೇಲ್ಯೂರ್ ಕಂಡಿರಬಹುದು. ಆದ್ರೆ, ವೆಸ್ಟ್ ಇಂಡೀಸ್ ಕಂಡೀಷನ್ಸ್​ನಲ್ಲಿ ನೆಕ್ಸ್ಟ್​ ಲೆವೆಲ್ ಬ್ಯಾಟಿಂಗ್, ನಡೆಸಬಲ್ಲ ಸಾಮರ್ಥ್ಯ ಟೀಮ್ ಇಂಡಿಯಾಗಿದೆ. ಬ್ಯಾಟಿಂಗ್ ಡೆಪ್ತ್ ಜೊತೆಗೆ ಪರ್ಫೆಕ್ಟ್​ ಆಲ್​ರೌಂಡರ್​ಗಳಿದ್ದಾರೆ. ಕ್ವಾಲಿಟಿ ಸ್ಪಿನ್ನರ್​ಗಳ ಬಲ ಇದೆ. ಟೀಮ್ ಇಂಡಿಯಾಗೆ ಹೋಲಿಸಿದ್ರೆ, ನಾಕೌಟ್​ಗೆ ಎಂಟ್ರಿ ನೀಡಿರುವ ಉಳಿದ ತಂಡಗಳ ಶಕ್ತಿ ನಿಜಕ್ಕೂ ಕ್ಷೀಣ. ಸ್ಪಿನ್ ಕಂಡೀಷನ್ಸ್​ ದೌರ್ಬಲ್ಯ ಎಲ್ಲರನ್ನ ಕಾಡ್ತಿದೆ. ಹೀಗಾಗಿ ಟೀಮ್ ಇಂಡಿಯಾನೇ ಟಿ20 ವಿಶ್ವಕಪ್​​ ಗೆಲ್ಲೋ ಹಾಟ್​ ಫೇವರಿಟ್ಸ್​ ಅನ್ನೋದು ಎಲ್ಲರ ಲೆಕ್ಕಾಚಾರವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್.. ಕ್ರಿಕೆಟ್​ ದುನಿಯಾದಲ್ಲಿ ಹೇಗೆ ನಡೀತಿದೆ ಬಾಜಿ?

https://newsfirstlive.com/wp-content/uploads/2024/06/ROHIT_SHARMA-5.jpg

Load More