newsfirstkannada.com

ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

Share :

Published June 16, 2024 at 4:25pm

    ಕಳೆದ ವರ್ಷ ನಾಯಿಗಳ ಜೊತೆ ಹುಟ್ಟುಹಬ್ಬ ಆಚರಿಸಿದ್ದ ಧೋನಿ

    ಎಂ ಎಸ್​ ಧೋನಿ ಬಳಿ ಯಾವ್ಯಾವ ಬ್ರೀಡ್​ನ ನಾಯಿಗಳು ಇವೆ.?

    ಟ್ರಿಪ್ ಮುಗಿದ ಬೆನ್ನಲ್ಲೇ ಫಾರ್ಮ್​ಹೌಸ್​ಗೆ ಭೇಡಿ ನೀಡಿದ ಧೋನಿ

ಪ್ಯಾರಿಸ್ ಪ್ರವಾಸದಲ್ಲಿದ್ದ ಟೀಮ್ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್​ ಎಂ.ಎಸ್​ ಧೋನಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಒಂದು ತಿಂಗಳ ಕಾಲ ಐಪಿಎಲ್​ ಟೂರ್ನಿಯಲ್ಲಿ ಫುಲ್ ಬ್ಯುಸಿ ಇದ್ದ ಧೋನಿಯವರಿಗೆ ಕುಟುಂಬಕ್ಕೆ ಸಮಯ ಕೊಡಲು ಆಗಿರಲಿಲ್ಲ. ಹೀಗಾಗಿ ಪತ್ನಿ, ಮಗಳ ಜೊತೆ ಪ್ಯಾರಿಸ್​ ಅನ್ನು ಒಂದು ರೌಂಡ್ ಹಾಕಿದ್ದರು. ಸದ್ಯ ರಾಂಚಿಯಲ್ಲಿರುವ ತಲಾ ತಮ್ಮ ನೆಚ್ಚಿನ ನಾಯಿಗಳ ಜೊತೆ ಸಮಯ ಕಳೆದಿದ್ದಾರೆ.

ಎಂಎಸ್​ ಧೋನಿ ವಿದೇಶ ಪ್ರವಾಸಕ್ಕೆ ಹೋಗಿದ್ದರಿಂದ ತಮ್ಮ ಮುದ್ದಿನ ನಾಯಿಗಳನ್ನು ಮಿಸ್ ಮಾಡಿಕೊಂಡಿದ್ದರು. ಅದರಲ್ಲಿ ಕೂಲ್ ಕ್ಯಾಪ್ಟನ್​ಗೆ ನಾಯಿಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಅವರ ಫಾರ್ಮ್​ಹೌಸ್​ನಲ್ಲಿ ಉತ್ತಮ ಬ್ರೀಡ್​ ನಾಯಿಗಳನ್ನು ಸಾಕಿಕೊಂಡಿದ್ದಾರೆ. ಇವುಗಳಲ್ಲಿ ಹಸ್ಕಿ, ಜರ್ಮನ್ ಶೆಫರ್ಡ್, ಡಾಬರ್​​ಮ್ಯಾನ್ ಹಾಗೂ ಬ್ಲಾಕ್ ಇಂಡೀ ಡಾಗ್ ಸೇರಿದಂತೆ ಇನ್ನು ಬೇರೆ ಬೇರೆ ತಳಿಯ ನಾಯಿಗಳಿವೆ. ವಿದೇಶ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಧೋನಿ ತಮ್ಮ ಮಗಳು ಝೀವಾಳನ್ನು ಕರೆದುಕೊಂಡು ನೇರ ಫಾರ್ಮ್​​ಹೌಸ್​ಗೆ ಭೇಟಿ ನೀಡಿ ನಾಯಿಗಳ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್.. ಕ್ರಿಕೆಟ್​ ದುನಿಯಾದಲ್ಲಿ ಹೇಗೆ ನಡೀತಿದೆ ಬಾಜಿ?

ತಲಾ ಬರ್ತ್​ಡೇ ಕೂಡ ಬಂದಿದ್ದು ಮುಂದಿನ ತಿಂಗಳು ಅಂದರೆ ಜುಲೈ 7 ರಂದು 43ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರ ಹುಟ್ಟುಹಬ್ಬದ ಆಚರಣೆಗಾಗಿ ಫ್ಯಾನ್ಸ್​ ಎಲ್ಲ ಕಾತುರದಿಂದ ಇದ್ದಾರೆ. ಕಳೆದ ವರ್ಷ ಶ್ವಾನಗಳ ಜೊತೆ ತಲಾ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಆದರೆ ಈ ಬಾರಿ ಯಾವ ರೀತಿ ತಮ್ಮ ಬರ್ತ್​ಡೇ ಸೆಲೆಬ್ರೆಷನ್ ಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿದೆ. ಏನೇ ಆಗಲಿ ಸದ್ಯ ಝೀವಾ, ಧೋನಿ ಶ್ವಾನಗಳ ಜೊತೆ ಇರೋ ಫೋಟೋ, ವಿಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗ್ತಿವೆ.

ಇದನ್ನೂ ಓದಿ: ಶುಭ್​​ಮನ್​ ಗಿಲ್​ಗೆ ಟೀಮ್​ ಇಂಡಿಯಾದಿಂದ ಗೇಟ್​ಪಾಸ್.. ಕ್ಯಾಪ್ಟನ್ ರೋಹಿತ್ ಜೊತೆ ಜಗಳ ಮಾಡಿಕೊಂಡ್ರಾ?

ಧೋನಿ ಏನೋ ಪತ್ನಿ ಸಾಕ್ಷಿ ಹಾಗೂ ಮಗಳು ಜೀವಾ ಜೊತೆ ಪ್ಯಾರಿಸ್​ಗೆ ಪ್ರವಾಸಕ್ಕೆ ಹೋಗಿ ಸಖತ್ ಎಂಜಾಯ್ ಮಾಡಿದ್ದರು. ಆದ್ರೆ, ಈ ಫ್ಯಾಮಿಲಿ ವಿದೇಶಕ್ಕೂ ಹೋಗಿದ್ದ ವೇಳೆಯು ಧೋನಿಗೆ ಅಭಿಮಾನಿಗಳ ಕಾಟ ತಪ್ಪಲಿಲ್ಲ. ಮಿಸ್ಟರ್​ ಕೂಲ್​​​ ಜೊತೆ ಸೆಲ್ಫಿಗಾಗಿ ಮುಗಿಬೀಳ್ತಿರುವ ಫ್ಯಾನ್ಸ್​, ಧೋನಿಯ ಆಶೀರ್ವಾದ ಕೂಡ ಪಡೆದಿದ್ದಾರೆ. ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ರಾಂಚಿಯಲ್ಲಿ ಧೋನಿ ನಾಯಿಗಳ ಜೊತೆ ಕಳೆದಿರುವ ಫೋಟೋಗಳು ಕೂಡ ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

https://newsfirstlive.com/wp-content/uploads/2024/06/DHONI_DOGS.jpg

Load More