ಇಸ್ರೋದ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಚಂದ್ರಯಾನ-3
ಬರೋಬ್ಬರಿ 600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ
ಬಾಹ್ಯಾಕಾಶ ನೌಕೆಯು ಲ್ಯಾಂಡ್, ರೋವರ್ ಕೊಂಡೊಯ್ಯಲಿದೆ
ಇಂಡಿಯನ್ ಸ್ಪೇಸ್ ರಿಸರ್ಜ್ ಆರ್ಗನೈಜೇಷನ್ (ಇಸ್ರೋ) ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ನಿಂದ, ಚಂದ್ರನಿದ್ದಲ್ಲಿಗೆ ಚಂದ್ರಯಾನ-3 ಮಷಿನ್ ಕಳುಹಿಸಲಿದೆ.
LVM-III (Launch Vehicle Mark-III) ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್, ಚಂದ್ರಯಾನದ ಮಷಿನ್ಗಳನ್ನು ಹೊತ್ತು ಶುಕ್ರವಾರ ಮಧ್ಯಾಹ್ನ 2.35ಕ್ಕೆ ನಭದತ್ತ ಚಿಮ್ಮಲಿದೆ. ಈ ಮೂಲಕ ನಮ್ಮ ಹೆಮ್ಮೆಯ ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಊರಲಿದೆ.
2019ರಲ್ಲಿ ಇಸ್ರೋ ಚಂದ್ರಯಾನ-2 ಉಡ್ಡಯನ ಮಾಡಿತ್ತು. ಚಂದ್ರನ ಅಂಗಳ ತಲುಪುವಲ್ಲಿ ಈ ಯೋಜನೆ ಯಶಸ್ವಿಯಾಗಿತ್ತು. ಆದರೆ ಚಂದ್ರನ ಸ್ಪರ್ಷ ಮಾಡುವ ಸಂದರ್ಭದಲ್ಲಿ ಸಾಫ್ಟ್ ಲ್ಯಾಂಡ್ ಆಗದ ಹಿನ್ನೆಲೆಯಲ್ಲಿ, ಭಾರತದ ಮಹತ್ವಕಾಂಕ್ಷೆಯ Chandrayaan-2 ಫೇಲ್ಯೂರ್ ಆಗಿತ್ತು. ಹಳೆಯ ತಪ್ಪುಗಳನ್ನು ತಿದ್ದುಕೊಂಡಿರುವ ಇಸ್ರೋ ವಿಜ್ಞಾನಿಗಳು ಈ ಬಾರಿ ಸಾಫ್ಟ್ ಲ್ಯಾಂಡಿಂಗ್ಗೆ ಹೆಚ್ಚು ಒತ್ತು ನೀಡಿದ್ದಾರೆ.
ಚಂದ್ರನಿದ್ದಲ್ಲಿ ಹೋಗಲು ಎಷ್ಟು ದಿನ ಬೇಕು..?
2019ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ-2 ಮಷಿನ್, ಚಂದ್ರನಿದ್ದಲ್ಲಿಗೆ ತಲುಪಲು ಬರೋಬ್ಬರಿ 48 ದಿನಗಳನ್ನು ತೆಗೆದುಕೊಂಡಿತ್ತು. ಅಂದರೆ ಜುಲೈ 22, 2019ರಂದು ಶ್ರೀಹರಿಕೋಟಾದಿಂದ ರಾಕೆಟ್ ಉಡಾಯಿಸಲಾಗಿತ್ತು. ಇದು ಅಗಸ್ಟ್ 20, 2019 ರಂದು ಚಂದ್ರನ ಕಕ್ಷೆಯನ್ನು ತಲುಪಿತ್ತು. ಚಂದ್ರ ಮತ್ತು ಭೂಮಿಗೆ ಬರೋಬ್ಬರಿ 384400 ಕಿಲೋ ಮೀಟರ್ ದೂರ ಇರೋದ್ರಿಂದ ಇಷ್ಟೊಂದು ಸಮಯ ತೆಗೆದುಕೊಂಡಿತ್ತು.
ಅದರಂತೆ ಈ ಬಾರಿಯೂ ಕೂಡ ಚಂದ್ರನ ತಲುಪಲು ದೀರ್ಘ ಕಾಲ ತೆಗೆದುಕೊಳ್ಳಲಿದೆ. ಈ ಬಾರಿಯ ಚಂದ್ರಯಾನ-3 ಜರ್ನಿಯು ಜುಲೈ 14 ರಿಂದ ಆರಂಭಗೊಳ್ಳಲಿದೆ. ಈ ಬಾರಿಯೂ ಕೂಡ ಚಂದ್ರಯಾನ-3 ಮಷಿನ್ ಚಂದ್ರನ ತಲುಪಲು 45 ರಿಂದ 48 ದಿನಗಳ ಕಾಲ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇಸ್ರೋದ ವಿಜ್ಞಾನಿಗಳ ಪ್ರಕಾರ, ಆಗಸ್ಟ್ 23 ಅಥವಾ 24 ರಂದು ಲ್ಯಾಂಡ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!
ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!
ಇದನ್ನೂ ಓದಿ: Chandrayaan-3 : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಭಾರತ -ಚಂದ್ರಯಾನ-3 ಉಡಾವಣೆಗೆ ಡೇಟ್ ಫಿಕ್ಸ್..!
ಇದನ್ನೂ ಓದಿ: Breaking News: ಮುಂದಿನ ತಿಂಗಳೇ ನಡೆಯಲಿಕ್ಕಿದೆ ಚಂದ್ರಯಾನ-3 ಉಡಾವಣೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ