ರಾಬರ್ಟ್ ನಿರ್ಮಾಪಕರ ಜೊತೆಗೆ ದರ್ಶನ್ ಗಲಾಟೆ
ಉಮಾಪತಿಗೆ ಸಿಟ್ಟಿನಲ್ಲಿ ತಗಡು ಎಂದಿದ್ದ ನಟ ದರ್ಶನ್
ಇಂದು ತಗಡಾಗಿರುವವನು ಮುಂದೊಂದು ದಿನ ಚಿನ್ನದ ತಗಡಾಗಬಹುದು
ರಾಬರ್ಟ್ ಸಿನಿಮಾ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಘರ್ಷಣೆ ಉಂಟಾಗಿತ್ತು. ದರ್ಶನ್ ಮಾಧ್ಯಮ ಮುಂದೆ ಪ್ರತಿಕ್ರಿಯಿಸುವಾಗ ಉಮಾಪತಿ ಗೌಡಗೆ ತಗಡು ಎಂದು ಹೇಳಿದ್ದರು. ಅದಕ್ಕೆ ಉಮಾಪತಿ ಗೌಡ ಇಂದು ತಗಡಾಗಿರುವವನು ಮುಂದೊಂದು ದಿನ ಚಿನ್ನದ ತಗಡಾಗಬಹುದು ಎಂದು ಪ್ರತ್ಯುತ್ತರ ನೀಡಿದ್ದರು. ಇದೀಗ ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಗೌಡರವರು ದರ್ಶನ್ಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ಸಂಕಷ್ಟ? ನೋಟಿಸ್ ಕಳುಹಿಸಿ ತನಿಖೆಗೆ ಹಾಜರಾಗಿ ಎಂದ ಪೊಲೀಸರು!
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಉಮಾಪತಿ ಗೌಡ “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಗಡು ಯಾರು ಗೊತೈತಾ, ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಸುದೀಪ್ ಬೆನ್ನಲ್ಲೇ ದರ್ಶನ್ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್ ಸ್ಟಾರ್! ಏನಂದ್ರು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಅವರ ಹಳೆಯ ಹೇಳಿಕೆಗಳು, ಡೈಲಾಗ್ಗಳು ಟ್ರೋಲ್ ಆಗುತ್ತಿದೆ. ಜೊತೆಗೆ ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ. ಸದ್ಯ ಮೀಮ್ಸ್ ಗಳನ್ನು ಉಮಾಪತಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ