newsfirstkannada.com

ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!

Share :

Published June 18, 2024 at 8:22am

    ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಅರೆಸ್ಟ್

    ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಆರೋಪಿಗಳ ವಿಚಾರಣೆ

    ಪೊಲೀಸ್ ಕಸ್ಟಡಿಗೆ ಒಂದೇ ದಿನ ಭಾಕಿ, ತನಿಖೆ ತೀವ್ರ

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್​ ಅವರನ್ನು ಇಂದು ತನಿಖಾಧಿಕಾರಿಗಳು ಮೈಸೂರಿಗೆ ಕರೆದುಕೊಂಡು ಹೋಗಲಿದ್ದಾರೆ. ಮೈಸೂರಿಗೆ ಹೋಗಿ ಸ್ಥಳ‌ ಮಹಜರು ಮಾಡಲಿದ್ದಾರೆ.

ಅಂತೆಯೇ ಇವತ್ತು ಬೆಂಗಳೂರಿನಿಂದ ದರ್ಶನ್ ಅವರನ್ನು ಕರೆದುಕೊಂಡು ಪೊಲೀಸರು ಹೊರಡಲಿದ್ದಾರೆ. ದರ್ಶನ್ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ದರ್ಶನ್ ವಾಸ್ತವ್ಯ ಹೂಡಿದ್ದರು. ದರ್ಶನ್ ವರ್ಕೌಟ್ ಮಾಡ್ತಿದ್ದ ಗೋಲ್ಡ್ ಜಿಮ್, ಡೆವಿಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಲಲಿತಮಹಲ್ ಪ್ಯಾಲೇಸ್, ಕೊಲೆ ಬಳಿಕ ದರ್ಶನ್ ವಾಸ್ತವ್ಯ, ಓಡಾಡಿದ್ದ ಸ್ಥಳಗಳಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಮಿಷನ್ ಅನ್​ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!

ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್, ಕೇಶವ್, ಕಾರ್ತಿಕ್, ನಿಖಿಲ್​ರನ್ನೂ ಕರೆದೊಯ್ದುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ನಂತರ‌ ಮೈಸೂರಿಗೆ ದರ್ಶನ್ ಬಂದಿದ್ದರು. ಅಲ್ಲಿ ಕೇಶವ್ ಕಾರ್ತಿಕ್, ನಿಖಿಲ್ ನಾಯಕ್​ರನ್ನು ಭೇಟಿಯಾಗಿದ್ದರು. ದರ್ಶನ್ ಭೇಟಿಯಾದ ನಂತರ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಸರೆಂಡರ್ ಆಗಿದ್ದರು. ದರ್ಶನ್ ಭೇಟಿ ನಂತರ ದೀಪಕ್​ನಿಂದ ತಲಾ ಐದು ಲಕ್ಷ ಹಣ ಪಡೆದು ಪೊಲೀಸರ ಮುಂದೆ ಶರಣಾಗಿದ್ದರು. ಪೊಲೀಸ್ ಕಸ್ಟಡಿ ಅಂತ್ಯಕ್ಕೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ.

ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!

https://newsfirstlive.com/wp-content/uploads/2024/06/darshan-3-2.jpg

Load More