newsfirstkannada.com

ಸೂಪರ್ 8ರಲ್ಲಿ ಮೂವರು ಫಿಕ್ಸ್​.. ಭಾರತದ ಗೆಲುವಿಗೆ ಬೇಕೇಬೇಕು ಈ ಸ್ಪಿನ್ ಟ್ವಿನ್ಸ್ ಜೋಡಿ.. ರೋಹಿತ್ ಆಯ್ಕೆ ಏನು?

Share :

Published June 19, 2024 at 9:18am

    ಸ್ಪಿನ್ ಟ್ವಿನ್ಸ್​ ಮೊರೆ ಹೋಗುತ್ತಾ ಭಾರತ..?

    ಭಾರತದ ಗೆಲುವಿಗೆ ಕುಲ್ಚಾ ಜೋಡಿ ಅನಿವಾರ್ಯನಾ..?

    ಆಲ್​ರೌಂಡರ್​ ಜಡೇಜಾ-ಆಕ್ಷರ್​ ಕಥೆ ಏನು..?

ಅಮೆರಿಕ ಆಯ್ತು. ಈಗ ಟೀಮ್ ಇಂಡಿಯಾ ಕೆರಿಬಿಯನ್ ನಾಡಿಗೆ ಶಿಫ್ಟ್ ಆಗಿದೆ. ಸೂಪರ್-8 ಕದನಕ್ಕೆ ಸಜ್ಜಾಗ್ತಿರುವ ರೋಹಿತ್ ಪಡೆ, ಗೆಲುವಿನ ಯಾನ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಆದ್ರೆ ಗೆಲುವಿನ ಓಟ ಮುಂದುವರೆಸಬೇಕಂದ್ರೆ, ಟೀಮ್ ಇಂಡಿಯಾ ಕುಲ್ಚಾ ಜೋಡಿಯ ಮೋರೆ ಹೋಗಬೇಕಿದೆ.

ಟಿ20 ವಿಶ್ವಕಪ್​ ಮಹಾ ಸಂಗ್ರಾಮದ ಕಾವೇರುತ್ತಿದೆ. ಗ್ರೂಪ್​ ಸ್ಟೇಜ್​ನಲ್ಲಿ ಅಬ್ಬರದ ಪರ್ಫಾಮೆನ್ಸ್​ ನೀಡಿರುವ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್​​ಗೆ ಕಾಲಿಟ್ಟಿದೆ. ಅಮೆರಿಕಾದಿಂದ ವೆಸ್ಟ್ ಇಂಡೀಸ್​ಗೆ ಶಿಫ್ಟ್​ ಆಗ್ತಿದ್ದಂತೆ ಪ್ಲೇಯಿಂಗ್​ ಕಂಡೀಷನ್ಸ್​ ಬದಲಾಗಿದ್ದು, ಸ್ಪಿನ್ ಫೇವರ್ ಪಿಚ್​ನಲ್ಲಿ ಗೆಲ್ಲೋ ಸವಾಲಿದೆ. ಹೀಗಾಗಿ ಗೆಲುವಿನ ಯಾನ ಮುಂದುವರಿಯಬೇಕಾದ್ರೆ ತಂಡ ಸ್ಪಿನ್ ಟ್ವಿನ್ಸ್​ ಕುಲ್ಚಾ ಮೊರೆ ಹೋಗಬೇಕಿದೆ.

ಇದನ್ನೂ ಓದಿ:RCBಗೆ ದುಬಾರಿ ಆಟಗಾರ.. ವಿಶ್ವಕಪ್​​ನಲ್ಲಿ 4 ಮೇಡಿನ್ ಓವರ್​ ಮಾಡಿದ ಸ್ಟಾರ್..!

ಸೂಪರ್​-8ನಲ್ಲಿ ಸ್ಪಿನ್ ಟ್ವಿನ್ಸ್​ ಕುಲ್ಚಾ ಜೋಡಿ ಕಣಕ್ಕೆ..?
ಲೀಗ್ ಸ್ಟೇಜ್​ ಮ್ಯಾಚ್​ಗಳಿಗೆ ಹೋಲಿಸಿದ್ರೆ, ಈಗ ಟೀಮ್ ಇಂಡಿಯಾ ಇನ್ಮುಂದೆ ಆಡಲಿರುವ ಕಂಡೀಷನ್ಸ್ ಕಂಪ್ಲೀಟ್ ಚೇಂಜ್ ಆಗಿದೆ. ನ್ಯೂಯಾರ್ಕ್​ ಪಿಚ್ ಕಂಪ್ಲೀಟ್ ಪೇಸ್ ಆ್ಯಂಡ್ ಬೌನ್ಸ್​ನಿಂದ ಕೂಡಿತ್ತು. ಹೀಗಾಗಿ ಸ್ಪೆಷಲಿಸ್ಟ್​ ಸ್ಪಿನ್ನರ್​ಗಳ ಅವಶ್ಯಕತೆ ಟೀಮ್ ಇಂಡಿಯಾಗೆ ಬರಲಿಲ್ಲ. ಆದ್ರೀಗ ವೆಸ್ಟ್​ ಇಂಡೀಸ್ ಸ್ಲೋ ಟ್ರ್ಯಾಕ್​ಗಳಾಗಿದ್ದು, ಸ್ಪಿನ್ನರ್​​ಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡ್ತಾರೆ. ಹೀಗಾಗಿ ಟೀಮ್ ಇಂಡಿಯಾ ಚೈನಾಮನ್ ಕುಲ್​ದೀಪ್ ಯಾದವ್ & ಯಜುವೇಂದ್ರ ಚಹಲ್​​ಗೆ ಮಣೆ ಹಾಕಬೇಕಿದೆ.

ಕೆರಿಬಿಯನ್ ನಾಡಲ್ಲಿ ಕುಲ್ಚಾ ಜೋಡಿ ಕಮಾಲ್​..!
ವೆಸ್ಟ್​ ಇಂಡೀಸ್​ನಲ್ಲಿ ಚೈನಾಮನ್​ ಕುಲ್​ದೀಪ್ ಯಾದವ್, ಯಜುವೇಂದ್ರ ಚಹಲ್​ ಜೋಡಿ ಕಮಾಲ್ ಮಾಡಿದ್ದಾರೆ. ಹಿಂದೆ ಕೆರಿಬಿಯನ್ನರ ನಾಡಲ್ಲಿ ಆಡಿರುವ ಅನುಭವ, ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ನೀಡಿರುವ ಇಂಪ್ರೆಸ್ಸೀವ್​​ ಪರ್ಫಾಮೆನ್ಸ್ ತಂಡಕ್ಕೆ ನೆರವಾಗಲಿದೆ.

ಇದನ್ನೂ ಓದಿ:CM ಕನಸು ನನಸಿಗೆ ಡಿಕೆಶಿ​​ ನಡೆ ತೀವ್ರ ಕುತೂಹಲ.. ಚೆನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!

ವಿಂಡೀಸ್​ನಲ್ಲಿ ವೈಟ್​​ಬಾಲ್ ಫಾರ್ಮೆಟ್​​ನಲ್ಲಿ ಪ್ರದರ್ಶನ
ಏಕದಿನ ಹಾಗೂ ಟಿ20 ಮಾದರಿಯಿಂದ ವೆಸ್ಟ್​ ಇಂಡೀಸ್​ನಲ್ಲಿ ಒಟ್ಟು 13 ಪಂದ್ಯಗಳನ್ನಾಡಿರುವ ಕುಲ್​ದೀಪ್, 23 ವಿಕೆಟ್ ಉರುಳಿಸಿದ್ದಾರೆ. ಒಟ್ಟು 7 ಪಂದ್ಯಗಳನ್ನಾಡಿರುವ ಯಜುವೇಂದ್ರ ಚಹಲ್ 12 ವಿಕೆಟ್ ಉರುಳಿಸಿದ್ದಾರೆ. ಈ ಅಂಕಿಅಂಶಗಳು ವೆಸ್ಟ್ ಇಂಡೀಸ್ ಕಂಡೀಷನ್ಸ್​ಗೆ ಕುಲ್ಚಾ ಜೋಡಿ ಅವಶ್ಯಕತೆ ಎಷ್ಟಿದೆ ಅನ್ನೋದನ್ನ ತೋರಿಸ್ತಿವೆ. ವಿಕೆಟ್ ಟೇಕಿಂಗ್ ಎಬಿಲಿಟಿ ಜೊತೆಗೆ ರನ್​ ಗಳಿಕೆಗೆ ಕಡಿವಾಣಕ್ಕೆ ಹಾಕಿದ್ದಾರೆ. ಹೀಗಾಗಿ ಇವರಿಬ್ಬರ ಅವಶ್ಯಕತೆ ತಂಡಕ್ಕಿದೆ. ಐಪಿಎಲ್​ನಲ್ಲೂ ಉತ್ತಮ ಲಯದಲ್ಲಿ ಪರ್ಫಾಮ್​ ಮಾಡಿರೋ ಇವರು, ಬಿಗ್ ಮ್ಯಾಚ್ ವಿನ್ನರ್​​​ಗಳು ಕೂಡ ಹೌದು.

ಸೀಸನ್-7ರ ಐಪಿಎಲ್​ ಪ್ರದರ್ಶನ
ವಿಶ್ವಕಪ್​ಗೂ ಮುನ್ನ ನಡೆದ ಸೀಸನ್-17ರ ಐಪಿಎಲ್​ನಲ್ಲಿ 11 ಪಂದ್ಯಗಳಿಂದ ಕುಲ್​​ದೀಪ್ 16 ವಿಕೆಟ್ ಉರುಳಿಸಿದ್ದು, 8.69ರ ಏಕನಾಮಿಯಲ್ಲಿ ರನ್ ನೀಡಿದ್ದಾರೆ. ಈ ಪೈಕಿ 55 ರನ್ ನೀಡಿ 4 ವಿಕೆಟ್ ಉರುಳಿಸಿರುವುದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ. ಯುಜುವೇಂದ್ರ ಚಹಲ್ ಆಡಿರುವ 15 ಪಂದ್ಯಗಳಿಂದ 18 ವಿಕೆಟ್ ಬೇಟೆಯಾಡಿದ್ದಾರೆ. 11 ರನ್ ನೀಡಿ 3 ವಿಕೆಟ್ ಕಬಳಿಸಿರೋದು ಬೆಸ್ಟ್ ಪರ್ಫಾಮೆನ್ಸ್ ಆಗಿದ್ರೆ. 9.41ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ದರ್ಶನ್‌ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?

ಆಲ್​ರೌಂಡರ್​ ಜಡೇಜಾ-ಆಕ್ಷರ್​ ಕಥೆ ಏನು..?
ನಾಯಕನಾಗಿ ರೋಹಿತ್, ಗ್ರೂಪ್ ಸ್ಟೇಜ್​ನಲ್ಲಿ ಜಡೇಜಾ ಹಾಗೂ ಆಕ್ಷರ್​ ಪಟೇಲ್​ನ ಅದ್ಬುತವಾಗೇ ಬಳಿಸಿಕೊಂಡಿದ್ದಾರೆ. ಈ ಪೈಕಿ ಜಡೇಜಾ ಕಳೆಪೆ ಪ್ರದರ್ಶನ ನೀಡಿದ್ದಾರೆ. ಆದ್ರೀಗ ಕಂಡೀಷನ್ಸ್​ ಸಂಪೂರ್ಣ ಸ್ಪಿನ್ ಫ್ರೆಂಡ್ಲಿ. ಕುಲ್​ದೀಪ್ ಯಾದವ್ ಹಾಗೂ ಚಹಲ್ ತಂಡದಲ್ಲಿದ್ದರೆ ಪ್ರಬಲ ಅಸ್ತ್ರವಾಗಬಲ್ಲರು. ಅಕ್ಷರ್​ – ಜಡೇಜಾ ಆಟ ಇಲ್ಲಿ ವರ್ಕೌಟ್​ ಆಗಲ್ಲ.

ವೆಸ್ಟ್ ಇಂಡೀಸ್​ನಲ್ಲಿ ಪ್ರದರ್ಶನ
ವೆಸ್ಟ್​ ಇಂಡೀಸ್​ನಲ್ಲಿ ಏಕದಿನ ಹಾಗೂ ಟಿ20 ಸೇರಿ 27 ಪಂದ್ಯಗಳನ್ನಾಡಿರುವ ಜಡೇಜಾ, 33 ವಿಕೆಟ್ ಉರುಳಿಸಿದ್ದಾರೆ. ಅಕ್ಷರ್ ಪಟೇಲ್ 7 ಪಂದ್ಯಗಳಿಂದ ಒಟ್ಟು 4 ವಿಕೆಟ್ ಉರುಳಿಸಿದ್ದಾರೆ. ಚಹಲ್​, ಕುಲ್​ದೀಪ್​ಗೆ ಹೋಲಿಸಿದ್ರೆ, ಇಬ್ಬರೂ ಕೂಡ ಸಪ್ಪೆಯಾಗಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ವೆಸ್ಟ್ ಇಂಡೀಸ್ ಕಂಡೀಷನ್ಸ್​ಗೆ ಸ್ಪೆಷಲಿಸ್ಟ್ ಸ್ಪಿನ್ನರ್​​ನ ಅಗತ್ಯತೆ ಟೀಮ್ ಇಂಡಿಯಾಗಿದೆ. ಈ ನಿಟ್ಟಿನಲ್ಲಿ ರೋಹಿತ್, ಆಲ್ರೌಂಡರ್​ಗಳಾದ ಆಕ್ಷರ್ ಪಟೇಲ್, ರವೀಂದ್ರ ಜಡೇಜಾ ಜೊತೆಗೆ ಕುಲ್​ದೀಪ್​​ಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಕಲ್ಪಿಸೋದು ಬೆಸ್ಟ್​.! ಬ್ಯಾಟಿಂಗ್​ ಡೆಪ್ತ್​ನ ಜೊತೆ ಬೌಲಿಂಗ್​ ಬಲವೂ ಹೆಚ್ಚಲಿದೆ. ಯುಜುವೇಂದ್ರ ಚಹಲ್​ಗೆ ಚಾನ್ಸ್​ ನೀಡಿದ್ರೆ, ಬೌಲಿಂಗ್​ ಅತ್ಯಂತ ಬಲಿಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಯಾರನ್ನ ಡ್ರಾಪ್​ ಮಾಡ್ತಾರೆ ಪ್ರಶ್ನೆ ಸಹಜವಾಗೇ ಹುಟ್ಟಲಿದೆ. ಹೀಗಾಗಿ ಕ್ಯಾಪ್ಟನ್ ರೋಹಿತ್, ನಿರ್ಣಯ ಏನಾಗಿರುತ್ತೆ ಅನ್ನೋದು ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೂಪರ್ 8ರಲ್ಲಿ ಮೂವರು ಫಿಕ್ಸ್​.. ಭಾರತದ ಗೆಲುವಿಗೆ ಬೇಕೇಬೇಕು ಈ ಸ್ಪಿನ್ ಟ್ವಿನ್ಸ್ ಜೋಡಿ.. ರೋಹಿತ್ ಆಯ್ಕೆ ಏನು?

https://newsfirstlive.com/wp-content/uploads/2024/06/Team-india-4.jpg

Load More