newsfirstkannada.com

ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

Share :

Published June 21, 2024 at 6:43am

    9ನೇ ಆರೋಪಿ ಧನರಾಜ್ ಟಾರ್ಚ್ ಅ​ನ್ನು ಎಲ್ಲಿಂದ ಖರೀದಿಸಿದ್ದ?

    ಡಿ ಗ್ಯಾಂಗ್​ ಹೊಡೆತಕ್ಕೆ ರೇಣುಕಾಸ್ವಾಮಿಯ ಮೂಗಿನ ಮೂಳೆ ಮುರಿದಿತ್ತು

    ದರ್ಶನ್ ಮತ್ತು 17 ಮಂದಿ ಆರೋಪಿಗಳ ಕ್ರೌರ್ಯ, ಅಟ್ಟಹಾಸ

ಇನ್ನು ದರ್ಶನ್ ಌಂಡ್​ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಅನುಭವಿಸಿದ್ದು ಅಕ್ಷರಶಃ ರೌರವ ನರಕ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರೇಣುಕಾಸ್ವಾಮಿ ಮೇಲೆ ಡೆವಿಲ್ ಗ್ಯಾಂಗ್​ ನಡೆಸಿರೋ ಕ್ರೌರ್ಯ ಉಹಿಸೋಕು ಅಸಾಧ್ಯ. ಅದರಲ್ಲೂ ಕರೆಂಟ್ ಶಾಕ್​ ಕೊಟ್ಟು ಆರೋಪಿಗಳು ಅಟ್ಟಹಾಸ ಮೆರೆದಿದ್ದಾರೆ.

ಮೃತ ರೇಣುಕಾಸ್ವಾಮಿ ಮೈ ಮೇಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 39 ರಕ್ತಸಿಕ್ತ ಗಾಯಗಳು. ಪೋಸ್ಟ್​ ಮಾರ್ಟಮ್​ ರಿಪೋರ್ಟ್​ನಲ್ಲಿ ಇವೆಲ್ಲ ಉಲ್ಲೇಖವಾಗಿವೆ. ಡಿ- ಗ್ಯಾಂಗ್​ ಮಾಡಿರೋ ಭಯಾನಕ ಹಲ್ಲೆಗೆ ದೇಹದ 7 ಕಡೆ ಮೂಳೆಗಳು ಮುರಿದು ಹೋಗಿದ್ರೆ, 13 ಕಡೆ ಮೂಳೆ ಏರ್​ ಕ್ರಾಕ್​ ಅಗಿರುವುದು ಪತ್ತೆಯಾಗಿದೆ. ಇನ್ನೂ ರೇಣುಕಾಸ್ವಾಮಿಗೆ ಕಬ್ಬಿಣ, ಮರದ ವಸ್ತುಗಳಿಂದ ಹಲ್ಲೆ ಮಾಡಿರೋದು ಬಯಲಾಗಿದೆ. ಡಿ ಗ್ಯಾಂಗ್​ನ ಹೊಡೆತಕ್ಕೆ ರೇಣುಕಾಸ್ವಾಮಿ ಮೂಗಿನ ಮೂಳೆಯೇ ಮುರಿದುಹೋಗಿದೆ. ಈ ದರ್ಶನ್ ಮತ್ತು 17 ಮಂದಿ ನರರೂಪಿ ರಾಕ್ಷಸರ ಅಟ್ಟಹಾಸಕ್ಕೆ ಆ ಬಡಪಾಯಿ ರೇಣುಕಾಸ್ವಾಮಿ ನರಳಿದ್ದೇಷ್ಟೋ? ಅಬ್ಬಬ್ಬಾ ಬೆನ್ನ ಹುರಿಯಲ್ಲಿ ಮಿಂಚು ಹರಿದಂಗಾಗುತ್ತದೆ.

ದೇಹದ 8 ಕಡೆ ಎಲೆಕ್ಟ್ರಿಕ್​ ಶಾಕ್​.. 30 ಪರ್ಸೆಂಟ್ ಸುಟ್ಟ ಮಾಂಸ ಖಂಡ

ಎಲೆಕ್ಟ್ರಿಕ್ ಶಾಕ್​​ ಟಾರ್ಚ್​ ಬಳಸಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ -ಎದೆ ಸೇರಿ ದೇಹದ 8 ಕಡೆ ಶಾಕ್ ಕೊಟ್ಟಿದ್ದರಿಂದ ಸುಟ್ಟು ಹೋದ 30 ಶೇಕಡಾ ಮಾಂಸ ಖಂಡ- ವಿಚಾರಣೆಯಲ್ಲಿ 9ನೇ ಆರೋಪಿ ಧನರಾಜ ಟಾರ್ಚ್​ನ್ನು ಎಲ್ಲಿಂದ ಖರೀದಿಸಿದ್ದು ಅಂತ ಬಾಯ್ಬಿಡದ ಕಾರಣ ಮತ್ತೆ ಕಸ್ಟಡಿಗೆ ನೀಡಲಾಗಿದೆ.

ಬೆನ್ನಿನ ಮೇಲೆ ಬಾಸುಂಡೆಗಳು. ಎದೆ ಮೇಲೆ ಗಾಯಗಳು. ಕಾಲಲ್ಲಿ ಗಾಯಗಳು. ಕೈಗೆ ಕರೆಂಟ್​ ಶಾಕ್​ ಕೊಟ್ಟಿರೋ ಗುರುತು. ದೇಹದ 8 ಕಡೆ ಎಲೆಕ್ಟ್ರಿಕ್​ ಶಾಕ್​ ನೀಡಲಾಗಿದ್ದು, ಅದರ ತೀವ್ರತೆಗೆ ಮಾಂಸ ಖಂಡ 30 ಪರ್ಸೆಂಟ್ ಸುಟ್ಟು ಹೋಗಿದೆ. ಎಡಗೈಗೆ ಕರೆಂಟ್ ಶಾಕ್ ಕೊಟ್ಟಿದ್ದು ಮಾತ್ರವಲ್ಲದೆ ಎದೆಗೂ ಶಾಕ್ ಕೊಟ್ಟಿರೋದು ಪತ್ತೆಯಾಗಿದೆ. ಇದರಿಂದ ರೇಣುಕಾಸ್ವಾಮಿಯ ಶೇಕಡಾ 30 ರಷ್ಟು ಮಾಂಸಖಂಡ ಸುಟ್ಟು ಹೋಗಿದೆ.

ಎಲೆಕ್ಟ್ರಿಕ್ ಶಾಕ್​​ ಟಾರ್ಚ್ ತಂದಿದ್ದು 9ನೇ ಆರೋಪಿ ಧನರಾಜು

ಅಂದಾಗೆ ಶಾಕ್ ಕೊಡಲು ಈ ಎಲೆಕ್ಟ್ರಿಕ್ ಶಾಕ್​​ ಟಾರ್ಚ್​ ತಂದಿದ್ದು 9ನೇ ಆರೋಪಿ ಪಾಪಿ ಧನರಾಜು. ತನಿಖೆಗೆ ಸರಿಯಾಗಿ ಸ್ಪಂದಿಸದಿರುವದರ ಕಾರಣ ಈತನನ್ನ ಮತ್ತೆ ಪೊಲೀಸರ ಕಸ್ಟಡಿಗೆ ಪಡೆಯಲಾಗಿದೆ. ರಾಜು ತಂದ ಎಲೆಕ್ಟ್ರಿಕ್ ಶಾಕ್​​ ಟಾರ್ಚ್​ ಇದರಿಂದಲೇ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದಾರೆ. ಆದ್ರೆ ವಿಚಾರಣೆಯಲ್ಲಿ ರಾಜು ಇದನ್ನು ಎಲ್ಲಿಂದ ಖರೀದಿ ಮಾಡಿ ತಂದಿದ್ದು ಅಂತ ಸರಿಯಾಗಿ ಬಾಯ್ಬಿಟ್ಟಿಲ್ಲ. ಕೆಲ ವಿಚಾರಗಳನ್ನು ಮರೆಮಾಚುತ್ತಿರುವುದರಿಂದ ಆತನನ್ನು ವಿಚಾರಣೆಗೊಳಪಡಿಸಿ ಮಾಹಿತಿ ಹೊರಗೆಡವಬೇಕಿದೆ. ಅಲ್ಲದೆ ಆರೋಪಿ ಕೃತ್ಯ ನಡೆದ ಸ್ಥಳಕ್ಕೆ ಬೇರೆಯವರ ಜೊತೆ ಬಂದು ಹೋದ ಬಗ್ಗೆ ವಿಚಾರಣೆ ನಡೆಸಬೇಕಾಗಿದೆ. ಇದೆಲ್ಲ ಕಾರಣಗಳಿಂದಾಗಿ ರಾಜುನನ್ನು ಮತ್ತೆ ಕಸ್ಟಡಿಗೆ ಪಡೆಯಲಾಗಿದೆ.

ಇದನ್ನೂ ಓದಿ: ರಾಮ್​ ಚರಣ್​ ದಂಪತಿಗೆ ವಿಶೇಷ ದಿನ; ಮಗಳ ಬಗ್ಗೆ ಉಪಾಸನ ಭಾವುಕ ಪೋಸ್ಟ್.. ಏನದು?

ಕೊಲೆಗೆ ಪವಿತ್ರಾ ಗೌಡಳೇ ಕಾರಣಕರ್ತೆ.. ಪ್ರಚೋದನೆ

ಇನ್ನು ರೇಣುಕಾಸ್ವಾಮಿ ಕೊಲೆಗೆ ಎ1 ಪವಿತ್ರಾ ಗೌಡಳೇ ಪ್ರಮುಖ ಕಾರಣಕರ್ತೆ ಆಗಿದ್ದಾಳೆ. ಪವಿತ್ರಾ ರೇಣುಕಾಸ್ವಾಮಿಗೆ ಹೊಡೆದ ಚಪ್ಪಲಿಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈಕೆ ಪ್ರಚೋದನೆ ನೀಡಿ ಇತರೆ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಒಳಚಂಚು ರೂಪಿಸಿದ್ದು ಮತ್ತು ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ. ಹೀಗಾಗಿ ಪವಿತ್ರಾ ಗೌಡಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ದರ್ಶನ್ ಌಂಡ್ ಗ್ಯಾಂಗ್ ದುಷ್ಟ ದುರುಳರು ರಾಕ್ಷಸರಿಗಿಂತಲೂ ಕಡೆಯಾಗಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ. ಇವರ ಮನಸ್ಥಿತಿ ಅದೆಷ್ಟರ ಮಟ್ಟಿಗೆ ಇರಬಹುದು?. ಆದ್ರೆ ದೇಹದ 30 ಶೇಕಡಾ ಮಾಂಸಖಂಡವನ್ನು ಎಲೆಕ್ಟ್ರಿಕ್ ಶಾಕ್​ ಟಾರ್ಚ್​ನಿಂದ ಶಾಕ್ ಕೊಟ್ಟು ಸಾಯಿಸಿದ್ದು ಇನ್ಯಾವ ಮನುಷ್ಯತ್ವ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

https://newsfirstlive.com/wp-content/uploads/2024/06/DARSHAN_CURRENT_SHOCK.jpg

Load More