newsfirstkannada.com

ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ

Share :

Published June 21, 2024 at 8:43am

Update June 21, 2024 at 9:24am

    ಒಂದಲ್ಲಾ.. ಎರಡಲ್ಲಾ.. 3ನೇ ಮದುವೆಯಾದ ತಾಯಿ

    ಮಗುವಿಗೆ ಸಿಗರೇಟ್ ನಿಂದ ಸುಟ್ಟು ಕ್ರೌರ್ಯ ಮೆರೆದ ಮಲತಂದೆ

    2ನೇ ಪತಿಗೆ ಹುಟ್ಟಿದ ಮಗುವಿಗೆ ಚಿತ್ರಹಿಂಸೆ ಕೊಟ್ಟ ಮಲತಂದೆ

ಬೆಂಗಳೂರು: ಮಗುವಿನ ಮೇಲೆ ಮಲತಂದೆ ಮೃಗೀಯ ರೀತಿಯ ವರ್ತನೆಗೈದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. 3 ವರ್ಷದ ಮಗುವಿಗೆ ಸಿಗರೇಟ್ ನಿಂದ ಸುಟ್ಟು ಕ್ರೌರ್ಯ ಮೆರೆದಿದ್ದಾನೆ.

ಮಲ ತಂದೆ ಅಜ್ಮಂತ್ ಎಂಬಾತ ಮಗುವಿನ ಮೇಲೆ ಕೃತ್ಯವೆಸಗಿದ್ದಾನೆ. ಮಗುವಿನ ತಾಯಿ ಜರೀನಾ ತಾಜ್ ಮೇಲೆಯೂ ಚಿತ್ರಹಿಂಸೆ ಕೊಟ್ಟಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: 10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್​ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ

ಮಲತಂದೆ ಅಜ್ಮಂತ್ ಕೌರ್ಯದ ಪರಿಣಾಮ ಮಗುವಿನ ಮುಖ, ಕತ್ತು, ತಲೆ ಭಾಗ ಸುಟ್ಟು ಹೋಗಿದೆ. ಕೈ ಕಾಲುಗಳ ಮೇಲೆ ಚಿತ್ರ ಹಿಂಸೆ ನೀಡಿದ್ದಲ್ಲದೆ, ಕಾಲು ಕತ್ತರಿಸಿಹೋಗಿದೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

3ನೇ ಪತಿಯಿಂದ ಈ ಕ್ರೌರ್ಯ

ತಾಯಿ ಜರೀನಾ ತಾಜ್ ಈಗಾಗಲೇ 3 ಮದುವೆಯಾಗಿದ್ರಂತೆ. ಮೊದಲ ಪತಿಯಿಂದ ಎರಡು ಹೆಣ್ಣು ಮಕ್ಕಳು ಪಡೆದಿದ್ದರು. ಎರಡನೇ ಪತಿಯಿಂದ ಸಹ ಒಂದು ಹೆಣ್ಣು ಮಗು ಪಡೆದಿದ್ದರು. ಆ ಬಳಿಕ ಜರೀನಾ ಅಜ್ಮಂತ್ ಜೊತೆ 3ನೇ ಮದ್ವೆಯಾಗಿದ್ದಾರೆ.

ಇದನ್ನೂ ಓದಿ: 3ನೇ ಬಾರಿಗೆ ದರ್ಶನ್ ಪೊಲೀಸ್​​​ ಕಸ್ಟಡಿಗೆ.. ಈ ಆ್ಯಂಗಲ್​ನಲ್ಲಿ ನಡಿಯಲಿದೆ ತನಿಖೆ

ಇದೀಗ 3ನೇ ಗಂಡನ ಜೊತೆ 2ನೇ ಪತಿಯ ಮಗುವಿಗೆ ಚಿತ್ರ ಹಿಂಸೆ ನೀಡಿರುವ ಆರೋಪ ಅಜ್ಮಂತ್  ಮೇಲೆ ಕೇಳಿಬಂದಿದೆ. ಸದ್ಯ 3 ವರ್ಷದ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ

https://newsfirstlive.com/wp-content/uploads/2024/06/Ajmant-1.jpg

Load More