newsfirstkannada.com

ಕೊನೆಯ 10 ಓವರ್​ಗಳಲ್ಲಿ ರನ್​ ಹೊಳೆ.. ಬೂಮ್ ಬೂಮ್ ಬಿರುಗಾಳಿ ಹೆಂಗಿತ್ತು ಗೊತ್ತಾ..

Share :

Published June 21, 2024 at 10:26am

    ಸೂಪರ್​​​-8ನಲ್ಲಿ ಭಾರತ ತಂಡ ಶುಭಾರಂಭ..!

    ರೋಹಿತ್​ ಪಡೆಗೆ ಸುಲಭ ತುತ್ತಾದ ಅಫ್ಘನ್​

    ಟೀಮ್ ಇಂಡಿಯಾ 47 ರನ್​ಗಳಿಂದ ಜಯಭೇರಿ

ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಗ್ರೂಪ್​​​ ಸ್ಟೇಜ್​​ನಲ್ಲಿ ಹ್ಯಾಟ್ರಿಕ್​ ಜಯ ಸಾಧಿಸಿದ್ದ ತಂಡ, ಸೂಪರ್​ 8 ಹಂತದಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಅಫ್ಘಾನಿಸ್ತಾನ​ ಎದುರು ಬಾರ್ಬಡೋಸ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ಚುಟುಕು ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಜಯದ ಯಾತ್ರೆ ಮುಂದುವರೆದಿದೆ. ಸೂರ್ಯಕುಮಾರ್​ ಸ್ಫೋಟ, ಬೂಮ್ರಾ ಬಿರುಗಾಳಿಗೆ ಬಾರ್ಬಡೋಸ್​ನಲ್ಲಿ ಅಫ್ಘಾನಿಸ್ತಾನ ಪಡೆ ತತ್ತರಿಸಿಹೋಯ್ತು. ಬಾರ್ಬಡೋಸ್​​ನಲ್ಲಿ ಅಫ್ಘನ್​ ಪಡೆ ಅಬ್ಬರಕ್ಕೆ ಬ್ರೇಕ್​ ಹಾಕಿದ ಟೀಮ್​ ಇಂಡಿಯಾ ಸೂಪರ್​ 8 ಹಂತದಲ್ಲಿ ಶುಭಾರಂಭ ಮಾಡಿದೆ.

ಇದನ್ನೂ ಓದಿ:ನಟ ದರ್ಶನ್​ಗೆ ಆ 2 ಪ್ರತ್ಯಕ್ಷ ಸಾಕ್ಷಿಗಳ ಕಂಟಕ..! ಐ ವಿಟ್ನೆಸ್​​ಗೆ ಭಾರೀ ಹಣದ ಆಮೀಷ..!

ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ರು. ಒತ್ತಡಕ್ಕೆ ಒಳಗಾಗಿ ಬಿಗ್​ಶಾಟ್​ ಹೊಡೆಯೋ ಭರದಲ್ಲಿ ರೋಹಿತ್ ಶರ್ಮಾ ವಿಕೆಟ್​ ಕೈಚೆಲ್ಲಿದ್ರು.

ಕೊಹ್ಲಿ, ಪಂತ್​ ಆಟಕ್ಕೆ ಬ್ರೇಕ್​ ಹಾಕಿದ ರಶೀದ್
ಬಳಿಕ ಕ್ರಿಸ್​ನಲ್ಲಿ ಜೊತೆಯಾದ ವಿರಾಟ್​ ಕೊಹ್ಲಿ- ರಿಷಭ್​ ಪಂತ್​ ತಂಡಕ್ಕೆ ಚೇತರಿಕೆ ನೀಡೋ ಪ್ರಯತ್ನ ಮಾಡಿದ್ರು. ಆದ್ರೆ, ಅಫ್ಘನ್​ ನಾಯಕ ರಶೀದ್​ ಖಾನ್​ ಇದಕ್ಕೆ ಅವಕಾಶ ನೀಡಲಿಲ್ಲ. ಕೊಹ್ಲಿ, ಪಂತ್​ ಇಬ್ಬರೂ ರಶೀದ್​ ಸ್ಪಿನ್​ ಬಲೆಗೆ ಬಿದ್ರು. ಬಳಿಕ ಕಣಕ್ಕಿಳಿದ ಶಿವಂ ದುಬೆಯದ್ದು ಅದೇ ರಾಗ ಅದೇ ಹಾಡು. 10 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು.

ಇದನ್ನೂ ಓದಿ:ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..

ಹಾರ್ದಿಕ್​-ಸೂರ್ಯ ಸೂಪರ್ ಜೊತೆಯಾಟ
5ನೇ ವಿಕೆಟ್​ಗೆ ಜೊತೆಯಾದ ಹಾರ್ದಿಕ್​ ಪಾಂಡ್ಯ-ಸೂರ್ಯಕುಮಾರ್​ ಯಾದವ್​ ಸೂಪರ್​ ಜೊತೆಯಾಟವಾಡಿದ್ರು. 90 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡ ತಂಡಕ್ಕೆ ನೆರವಾದ ಈ ಜೋಡಿ 60 ರನ್​ಗಳ ಕಾಣಿಕೆ ನೀಡಿತು. ಸೂರ್ಯಕುಮಾರ್ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ರು.

ಅರ್ಧಶತಕದ ಬೆನ್ನಲ್ಲೇ ಸೂರ್ಯ ಔಟಾದ್ರೆ, ಹಾರ್ದಿಕ್​ ಪಾಂಡ್ಯ 32 ರನ್​ಗಳಿಸಿ ನಿರ್ಗಮಿಸಿದ್ರು. ಆಲ್​ರೌಂಡರ್​ ಜಡೇಜಾ ಮತ್ತೆ ವೈಫಲ್ಯ ಅನುಭವಿಸಿದ್ರು. ಅಂತಿಮವಾಗಿ 2 ಬೌಂಡರಿ ಸಿಡಿಸಿದ ಅಕ್ಷರ್​ ಪಟೇಲ್​, ತಂಡದ ಮೊತ್ತವನ್ನ ಹೆಚ್ಚಿಸಿದ್ರು. ಕೊನೆಯ 10 ಓವರ್​ಗಳಲ್ಲಿ 102 ರನ್​ಗಳಿಸಿದ ಟೀಮ್​ ಇಂಡಿಯಾ, 181 ರನ್​ಗಳ ಬಿಗ್​ ಸ್ಕೋರ್​ ಕಲೆಹಾಕಿತು.

ಇದನ್ನೂ ಓದಿ:ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್​​ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..

ಬಾರ್ಬಡೋಸ್​ನಲ್ಲಿ ‘ಬಾದ್​ ಷಾ’ ಬೂಮ್ರಾ ಬಿರುಗಾಳಿ
182 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಅಫ್ಘನ್​ ತಂಡಕ್ಕೆ ಬಾದ್​ ಷಾ ಬೂಮ್ರಾ ಶಾಕ್​ ನೀಡಿದ್ರು. ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್​, ಹಝರತ್ತುಲ್ಲಾ ಝಝೈಗೆ ಗೇಟ್​ಪಾಸ್​ ನೀಡಿದ್ರು. ಇದ್ರ ಬೆನ್ನಲ್ಲೇ ಅಕ್ಷರ್​ ಪಟೇಲ್​ ಸ್ಪಿನ್​ ಮೋಡಿಗೆ ಇಬ್ರಾಹಿಂ ಝರ್ದಾನ್​ ಪೆವಿಲಿಯನ್​ ಸೇರಿದ್ರು. 23 ರನ್​ಗಳಿಸುವಷ್ಟರಲ್ಲೇ ಅಫ್ಘನ್​ ತಂಡ 3 ವಿಕೆಟ್​ ಕಳೆದುಕೊಳ್ತು.

ಆರಂಭಿಕ ಆಘಾತ ಕಂಡ ತಂಡಕ್ಕೆ ಗುಲ್ಬದ್ದೀನ್​ ನೈಬ್​, ಅಝಮತ್ತುಲ್ಲಾ ಒಮರ್​ಝೈ ಕೆಲ ಕಾಲ ನೆರವಾದ್ರು. ಹೆಚ್ಚು ಹೊತ್ತು ಕ್ರಿಸ್​ನಲ್ಲಿರಲು ಭಾರತದ ಸ್ಪಿನ್​ ಟ್ವಿನ್ಸ್​ ​ಬಿಡಲಿಲ್ಲ. ಗುಲ್ಭದ್ದೀನ್ ಆಟಕ್ಕೆ ಕುಲ್​ದೀಪ್​, ಒಮರ್​ಝೈ ಓಟಕ್ಕೆ ಜಡೇಜಾ ಬ್ರೇಕ್​ ಹಾಕಿದ್ರು. ನಂತರ ಕಣಕ್ಕಿಳಿದ ನಜೀಬುಲ್ಲಾ ಝರ್ದಾನ್​​ ಬೂಮ್ರಾ ಬಿರುಗಾಳಿ ತತ್ತರಿಸಿ ಹೋದ್ರು. ಮೊಹಮ್ಮದ್​ ನಬಿ 14 ರನ್​ಗಳಿಸಿ ಆಟ ಅಂತ್ಯಗೊಳಿಸಿದ್ರು.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

134 ರನ್​​​ಗೆ ಅಫ್ಘನ್ ಆಟ ಕ್ಲೋಸ್​​​​​..!
ಮೊಹಮ್ಮದ್​ ನಬಿ ಬಳಿಕ ಬಂದ ಬಾಲಂಗೋಚಿಗಳು ಕಮಾಲ್ ಮಾಡ್ಲಿಲ್ಲ. ಪರಿಣಾಮ ರಶೀದ್ ಖಾನ್ ಪಡೆ 134 ರನ್​ಗಳಿಗೆ ಸರ್ವಪತನ ಕಾಣ್ತು. ರೋಹಿತ್​​​​ ಶರ್ಮಾ ಬಳಗ ಭರ್ಜರಿ 47 ರನ್​ಗಳಿಂದ ಗೆದ್ದು ಬೀಗಿತು. ನಾಳೆ ನಡೆಯುವ ಸೂಪರ್​​​​​-8 ಮ್ಯಾಚ್​​ನಲ್ಲಿ ಬಾಂಗ್ಲಾದೇಶವನ್ನ ಎದುರಿಸಲಿದೆ.

ಇದನ್ನೂ ಓದಿ:ಅಂದು ಭಾರತ ತಂಡದಲ್ಲಿ 7 ಮಂದಿ ಕರ್ನಾಟಕದವರು.. ಕನ್ನಡಿಗ ಜಾನ್ಸನ್ ಅವ್ರ ಕ್ರಿಕೆಟ್ ಬದುಕಿಗೆ ಮುಳುವಾಗಿದ್ದೇ ಅಲ್ಲಿ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊನೆಯ 10 ಓವರ್​ಗಳಲ್ಲಿ ರನ್​ ಹೊಳೆ.. ಬೂಮ್ ಬೂಮ್ ಬಿರುಗಾಳಿ ಹೆಂಗಿತ್ತು ಗೊತ್ತಾ..

https://newsfirstlive.com/wp-content/uploads/2024/06/SURYA-1.jpg

Load More