newsfirstkannada.com

ದರ್ಶನ್​ ಮೇಲೆ ಹಳೇ ಕ್ರಿಮಿನಲ್ ಕೇಸ್​ಗಳೆಷ್ಟಿವೆ ಗೊತ್ತಾ? ವಿಜಯ ನಗರ, RR ನಗರ ಸೇರಿ ಎಲ್ಲೆಲ್ಲಿವೆ?

Share :

Published June 21, 2024 at 11:36am

Update June 21, 2024 at 12:52pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಮತ್ತೆರಡು ದಿನ ಪೊಲೀಸ್​ ಕಸ್ಟಡಿ

    ನಟ ದರ್ಶನ್​​ ಹೆಸರಿನಲ್ಲಿವೆ ಸಾಲು ಸಾಲು ಕ್ರಿಮಿನಲ್​ ಕೇಸ್​ಗಳು

    ಪತ್ನಿ ಮೇಲಿನ ಹಲ್ಲೆ ಸೇರಿ ನಟನ ಮೇಲೆ ಇಷ್ಟೊಂದು ಕೇಸ್​ ಇವೆಯಾ?

ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಈಗ ಪೊಲೀಸ್​​ ಕಸ್ಟಡಿಯಲ್ಲಿದ್ದಾರೆ. ತನಿಖೆ ಎದುರಿಸುತ್ತಿದ್ದಾರೆ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ದರ್ಶನ್​ಗೆ ಜೈಲು ಶಿಕ್ಷೆಯಾಗುವ ಬಹುತೇಕ ಲಕ್ಷಣಗಳು ಕಾಣುತ್ತಿವೆ. ಆದರೆ ಅದಕ್ಕೂ ಮುನ್ನ ದರ್ಶನ್​ ಹೆಸರಲ್ಲಿರುವ ಈವರೆಗೆ ಕ್ರಿಮಿನಲ್​ ಕೇಸ್​ಗಳು ಯಾವುವು ಎಂದು ನೋಡೋಣ.

ದರ್ಶನ್ ವಿರುದ್ಧ ದಾಖಲಾಗಿರುವುದು ಒಂದಲ್ಲ, ಎರಡಲ್ಲ, ನಾಲ್ಕು ಕ್ರಿಮಿನಲ್ ಕೇಸ್​ಗಳು ದಾಖಲಾಗಿದೆ. ಪತ್ನಿಯ ಮೇಲೆ ಹಲ್ಲೆ ಸೇರಿದಂತೆ ಈ ನಟ ಮೇಲೆ ಕ್ರಿಮಿನಲ್​ ಕೇಸ್​​ಗಳಿವೆ. ಅವುಗಳಲ್ಲಿ 2011ರಲ್ಲಿ ದರ್ಶನ್ ವಿರುದ್ಧ ಮೊದಲ ಕೇಸ್ ದಾಖಲಾಗಿತ್ತು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 425/2021 ಅಡಿಯಲ್ಲಿ 498(A) 323, 355, 506(B) ಅಡಿಯಲ್ಲಿ ಕೇಸ್​ ದಾಖಲಾಗಿತ್ತು.

ಇದನ್ನೂ ಓದಿ: ದರ್ಶನ್​ ‘ಡೆವಿಲ್’​ ಸಿನಿಮಾಗೆ ಬಂಡವಾಳ ಹಾಕಿದ್ದು ಈ ನಾಯಕ! ಶೂಟಿಂಗ್ ಸ್ಥಗಿತವಾಗಿ ಕಣ್ಣೀರು

ಎರಡನೇ ಕೇಸ್ ತಿ.ನರಸೀಪುರ ಠಾಣೆಯಲ್ಲಿ ದಾಖಲಾಗಿತ್ತು. ಎಫ್ ಓಸಿ 19/2022-23 ಅಡಿಯಲ್ಲಿ ದೂರು ದಾಖಲಾಗಿತ್ತು. WLPA 972, ಕಲಂ 2(1),(5)(14)(16)(36),09,39(01)ax, 40,49ರೆ/ವಿ,50,52,55,57 ಶೆಡ್ಯುಲ್ ಪಾರ್ಟ್ ಬಿ ಬರ್ಡ್ಸ್ ಸೀರಿಯಲ್ ನಂ 231 ಅಡಿ ಫಾರೆಸ್ಟ್ ಆಕ್ಟ್ ನಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಾನ್​ಸ್ಟೇಬಲ್ ಮೇಲೂ ದರ್ಶನ್​ ಪಟಾಲಂ​ ಹಲ್ಲೆ! FIR ಸ್ವೀಕರಿಸಲು ಪೊಲೀಸ್​ ಇಲಾಖೆಯೇ ನಕಾರ!

ಉಳಿದಂತೆ ರಾಜರಾಜೇಶ್ಚರಿ ಪೊಲೀಸ್ ಠಾಣೆಯಲ್ಲಿ ಮೊ.ಸಂ. 144/2024 ಅಡಿ ಕಲಂ 289 IPC ಅಡಿ ದೂರು ದಾಖಲಾಗಿತ್ತು. ಸದ್ಯ ಈಗ ಮತ್ತೊಂದು ಕೇಸ್ ದಾಖಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ‌ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ

ಪತ್ನಿ‌ ಮೇಲೆ ಹಲ್ಲೆ ಮಾಡಿ ಒಮ್ಮೆ ಜೈಲು ಸೇರಿ 26 ದಿನ ಸೆರೆವಾಸ ಅನುಭವಿಸಿದ್ದ ಪ್ರಕರಣ ದರ್ಶನ್​ ಮೇಲಿತ್ತು. ಈಗ ಕೊಲೆ ಆರೋಪದಲ್ಲಿ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಮೇಲೆ ಹಳೇ ಕ್ರಿಮಿನಲ್ ಕೇಸ್​ಗಳೆಷ್ಟಿವೆ ಗೊತ್ತಾ? ವಿಜಯ ನಗರ, RR ನಗರ ಸೇರಿ ಎಲ್ಲೆಲ್ಲಿವೆ?

https://newsfirstlive.com/wp-content/uploads/2024/06/dboss14.jpg

Load More