ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ರಾಜಧಾನಿಯಲ್ಲಿ ನಡೆಯಿತು ಭಯಾನಕ ಘಟನೆ, ಮಹಿಳೆ ಗಂಭೀರ
ಕಟ್ಟಡ ಮೇಲಿಂದ ಬೀಳುತ್ತಿರುವ ಮಹಿಳೆ ದೃಶ್ಯ ಮೊಬೈಲ್ನಲ್ಲಿ ಸೆರೆ
ಇತ್ತೀಚೆಗೆ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಮಹಿಳೆಯೊಬ್ಬಳು ಟೆರೇಸ್ ಮೇಲಿಂದ ನೋಡನೋಡ್ತಿದ್ದಂತೆ ಕೈ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರೋ ಘಟನೆ ರಾಜಧಾನಿಯಲ್ಲಿ ನಡೆದಿದೆ. ಮಹಿಳೆ ಕಟ್ಟಡದ ಮೇಲಿಂದ ಬೀಳುವ ದೃಶ್ಯ ಎದೆ ನಡುಗಿಸುವಂತಿದೆ.
ಆಕೆ ಬೀಳದಂತೆ ಎರಡೂ ಕೈಗಳನ್ನು ಹಿಡಿದಿರುವ ಪತಿ
ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದ ಬಡಾವಣೆಯ ನಿವಾಸಿ 27 ವರ್ಷದ ರುಬಾರ್ ಎಂಬುವಳು ಕಟ್ಟಡದ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ. ರುಬಾಯ್ ಪತಿ ಆಕೆಯ ಕೈಗಳನ್ನು ಬಲವಾಗಿ ಹಿಡಿದುಕೊಂಡಿದ್ದ. ಆದ್ರೆ ಆತನ ಕೈ ಜಾರಿ ರುಬಾಯ್ ಕೆಳಗೆ ಬಿದ್ದಿದ್ದಾಳೆ. ಇನ್ನು ಆಕೆ ಕೆಳಗೆ ಬೀಳುವುದನ್ನು ನೋಡ್ತಿದ್ದ ಕೆಲ ಸ್ಥಳೀಯರು ಆಕೆಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಕಟ್ಟಡದ ಕೆಳಗೆ ಪಾರ್ಕ್ ಮಾಡಲಾಗಿದ್ದ ಬೈಕ್ಗಳ ಮೇಲೆ ಬಿದ್ದ ರುಬಾಯ್ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಟೋದಲ್ಲಿ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗ್ತಿದ್ದು ಸದ್ಯ ಆಕೆ ಕೋಮಾದಲ್ಲಿದ್ದಾಳೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು ಎದೆ ಝಲ್ ಎನಿಸುವಂತಿದೆ.
ಘಟನೆ ನಡೆದಿದ್ದು ಏಕೆ?
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ಮಾಡಿದ್ರೆ ಸೋಲ್ತಾರಾ? ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ; ಕಾರಣವೇನು?
ಇನ್ನು ಈ ನಡುವೆ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪಕ್ಕದಲ್ಲಿದ್ದ ಆಟೋಗೆ ಹತ್ತಿಸಲು ಮುಂದಾದಾಗ ಚಾಲಕ ನಿರಾಕರಿಸೋ ಮೂಲಕ ಮಾನವೀಯತೆಯನ್ನೇ ಮರೆತಿದ್ದಾನೆ. ಬಳಿಕ ಸ್ಥಳೀಯರು ಆತನ ಜೊತೆ ಗಲಾಟೆ ಮಾಡಿ ಬಲವಂತವಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಹಿಳೆ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಜಾರಿ ಬಿದ್ದಳಾ ಅಥವಾ ಪತಿ, ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತಾ, ಪತಿಯೇ ಆಕೆಯನ್ನು ಮೇಲಿದ ತಳ್ಳಿದ್ನಾ ಎನ್ನುವ ಪ್ರಶ್ನೆಗಳಿಗೆ ಪೊಲೀಸರ ಸಂಪೂರ್ಣ ತನಿಖೆ ಬಳಿಕವಷ್ಟೇ ಉತ್ತರ ತಿಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ