ಇಂಡೋ ಬಾಂಗ್ಲಾ ಕಾದಾಟಕ್ಕೆ ಕೌಂಟ್ಡೌನ್
ಗೆದ್ದು ಸೆಮೀಸ್ಗೇರುವ ಹುಮ್ಮಸ್ಸಿನಲ್ಲಿ ಇಂಡಿಯಾ
ಸೆಮೀಸ್ ಜೀವಂತವಾಗಿರಿಸಿಕೊಳ್ಳಲು ಬಾಂಗ್ಲಾ ಫೈಟ್
ಜಸ್ಟ್ ಒಂದೇ ಒಂದು ಮ್ಯಾಚ್.. ಇಂದಿನ ಈ ಒಂದು ಮ್ಯಾಚ್, ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್ ಕ್ರೂಶಿಯಲ್.. ಈ ಒಂದ್ಯ ಪಂದ್ಯಕ್ಕೆ ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಿಸುವ ತಾಕತ್ತಿದೆ. ಹಾಗಾಗಿಯೇ ಇಂದಿನ ಬಾಂಗ್ಲಾ ಎದುರು ಶತಯಾ ಗತಾಯ ಗೆಲ್ಲೋಕೆ ಟೀಮ್ ಇಂಡಿಯಾ ಸ್ಕೆಚ್ ಹಾಕಿದೆ.
ಇಂಡೋ ಬಾಂಗ್ಲಾ ಟೈಗರ್ಸ್ ಕಾದಾಟಕ್ಕೆ ಕೌಂಟ್ಡೌನ್
ಟಿ20 ವಿಶ್ವಕಪ್ನ ಮತ್ತೊಂದು ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಎದುರಾಳಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮೋಸ್ಟ್ ಕ್ರೂಶಿಯಲ್ ಆಗಿದೆ. ಇದಕ್ಕೆ ಕಾರಣ ಸೆಮೀಸ್..
ಇದನ್ನೂ ಓದಿ:ಸಾಮೂಹಿಕ ಅ*ಚಾರ.. ಅರೆನಗ್ನ ಸ್ಥಿತಿಯಲ್ಲಿ 1.5 ಕಿಮೀ ಓಡಿಬಂದು ಜೀವ ಉಳಿಸಿಕೊಂಡ ಮಹಿಳೆ
ಈಗಾಗಲೇ ಸೂಪರ್-8ನ ಮೊದಲ ಪಂದ್ಯದಲ್ಲಿ ಗೆದ್ದಿರುವ ಟೀಮ್ ಇಂಡಿಯಾ, ಇಂದು ಬಾಂಗ್ಲಾ ಎದುರು ಗೆದ್ದು ಸೆಮೀಸ್ಗೆ ಎಂಟ್ರಿ ನೀಡುವ ಲೆಕ್ಕಚಾರದಲ್ಲಿದೆ. ಅತ್ತ ಆಸಿಸ್ ಎದುರು ಸೋತ ಬಾಂಗ್ಲಾ, ರೋಹಿತ್ ಪಡೆಯನ್ನ ಮಣಿಸಿ ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳುವ ಮಹಾದಾಸೆ ಹೊಂದಿದೆ. ಹೀಗಾಗಿ ಇಂದಿನ ಟೈಗರ್ಸ್ ಹೋರಾಟದಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲ ಫ್ಯಾನ್ಸ್ ಮನದಲ್ಲಿ ಮನೆ ಮಾಡಿದೆ.
ಅಜೇಯ ಭಾರತಕ್ಕೆ ಇಂದೇ ಸೆಮೀಸ್ ಗೇರುವ ಕನಸು..!
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನಗುತ್ತಿದೆ. ಸದ್ಯ ಸೂಪರ್-8ನಲ್ಲೂ ಸೂಪರ್ ಪರ್ಫಾಮೆನ್ಸ್ ನೀಡ್ತಿರುವ ರೋಹಿತ್ ಹುಡುಗ್ರು, ಬಾಂಗ್ಲಾ ಎದುರು ಗೆಲುವಿನ ಲಯ ಮುಂದುವರಿಸೋ ತವಕದಲ್ಲಿದ್ದಾರೆ. ಆ ಮೂಲಕ ಇಂದೇ ಸೆಮೀಸ್ ಪ್ಲೇಸ್ ಗ್ಯಾರಂಟಿ ಮಾಡಿಕೊಳ್ಳುವ ಕನಸು ಕಾಣ್ತಿದೆ. ಸೂಪರ್-8ನ ಅಂತಿಮ ಕಾದಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಹೀಗಾಗಿ ಸೇಫ್ ಆ್ಯಂಡ್ ಸೆಕ್ಯುರ್ ಆಗಿ ಇಂದೇ, ಸೆಮೀಸ್ಗೆ ಟಿಕೆಟ್ ಬಹುತೇಕ ಕನ್ಫರ್ಮ್ ಮಾಡಿಕೊಳ್ಳುವ ಪ್ಲಾನ್ನಲ್ಲಿದೆ.
ಇದನ್ನೂ ಓದಿ:ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..
ಸೆಮೀಸ್ ಆಸೆಯ ಭಾರತಕ್ಕೆ ಅದೊಂದೇ ಚಿಂತೆ..!
ಸೆಮೀಸ್ ಕನವರಿಕೆಯಲ್ಲಿರುವ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಬಾಕ್ಸ್ನ ಟಿಕ್ ಮಾಡಿದೆ. ಆದ್ರೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ವೈಫಲ್ಯ ಚಿಂತೆಗೀಡು ಮಾಡಿದೆ. ಬಲವಾಗಬೇಕಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆರಂಭಿಕರಾಗಿ ಫೇಲ್ಯೂರ್ ಆಗ್ತಿದ್ದಾರೆ. ದಿಗ್ಗಜ ಬ್ಯಾಟರ್ಗಳ ಸತತ ವೈಫಲ್ಯ, ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಗಿದ್ದು, ಇನ್ನಾದ್ರೂ ಸಿಡಿದೇಳಬೇಕಿದೆ.
ಕುಂಟುತ್ತಾ ಸಾಗಿದ ಬಾಂಗ್ಲಾ ಬಲವೇ ಬೌಲಿಂಗ್
ಸೋಲಿಲ್ಲದ ಸರದಾರ ಟೀಮ್ ಇಂಡಿಯಾ ಕಥೆ ಒಂದಾದ್ರೆ, ಟೂರ್ನಿಯಲ್ಲಿ ಸೋಲು, ಗೆಲುವಿನ ರುಚಿಯುಂಡಿರುವ ಬಾಂಗ್ಲಾ ಕಥೆ ವಿಭಿನ್ನವಾಗಿದೆ. ಅದರಲ್ಲೂ ಬಾಂಗ್ಲಾ ಬ್ಯಾಟರ್ಗಳ ವೈಫಲ್ಯ ಇನ್ನಿಲ್ಲದೆ ಕಾಡ್ತಿದೆ. ಲಿಟನ್ ದಾಸ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್ರನ್ನ ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ.
ಇದನ್ನೂ ಓದಿ:ಸೆಮಿ ಫೈನಲ್ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..
ಬಾಂಗ್ಲಾ ಬಲವೇ ಬೌಲಿಂಗ್ ಅಟ್ಯಾಕ್.. ವೇಗಿ ಮುಸ್ತಾಫಿಜುರ್ ರೆಹಮಾನ್, ತಂಝಿಮ್ ಹಸನ್ ಸಾಕಿಬ್ ಜೊತೆ ಸ್ಪಿನ್ನರ್ ರಿಶಾದ್ ಹೊಸೈನ್ ಬಿಗ್ ಮ್ಯಾಚ್ ವಿನ್ನರ್ಗಳಾಗಿದ್ದಾರೆ. ಲೀಗ್ ಸ್ಟೇಜ್ನಿಂದಲೂ ಅದ್ಭುತ ದಾಳಿ ಸಂಘಟಿಸ್ತಿರುವ ಇವರು, ಯಾವುದೇ ಕ್ಷಣದಲ್ಲಾದರು ಟೀಮ್ ಇಂಡಿಯಾಗೆ ಕಂಟಕವಾಗಬಲ್ಲರು.
ಡು ಆರ್ ಡೈ ಮ್ಯಾಚ್.. ಸೋತರೆ ಬಾಂಗ್ಲಾ ಔಟ್..!
ಸೂಪರ್-8ಗೆ ಅಂಬೆಗಾಲಿನ ಹೆಜ್ಜೆ ಹಾಕಿದ್ದ ಬಾಂಗ್ಲಾ, ಆಸ್ಟ್ರೇಲಿಯಾ ಎದುರಿನ ಸೂಪರ್ ಫೈಟ್ನಲ್ಲೇ ಮುಖಭಂಗ ಅನುಭವಿಸಿದೆ. ಇದರೊಂದಿಗೆ ಡು ಆರ್ ಡೈ ಪರಿಸ್ಥಿತಿಗೆ ಸಿಲುಕಿರುವ ಬಾಂಗ್ಲಾ, ಸೆಮೀಸ್ ಜೀವಂತವಾಗಿರಿಸಿಕೊಳ್ಳಲು ಶತಯಾ ಗತಾಯ ಗೆಲ್ಲಲೇಬೇಕಿದೆ. ಅಕಸ್ಮಾತ್ ಇಂದು ಸೋಲಿನ ಮುಖಭಂಗ ಅನುಭವಿಸಿದ್ರೆ ಟಿ20 ವಿಶ್ವಕಪ್ನಿಂದ ಹೊರ ಬೀಳಲಿದೆ. ಹೀಗಾಗಿ ಇಂದು ಯಾವ ರೀತಿಯ ಆಟವಾಡುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.
ಇದನ್ನೂ ಓದಿ:ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!
ಒಟ್ನಲ್ಲಿ.. ಇತ್ತ ಟೀಮ್ ಇಂಡಿಯಾ ಒಂದು ಗೆಲುವಿನೊಂದಿಗೆ ಸೆಮೀಸ್ಗೆ ಎಂಟ್ರಿ ನೀಡೋ ಲೆಕ್ಕಚಾರದಲ್ಲಿದ್ರೆ, ಅತ್ತ ಬಾಂಗ್ಲಾ, ಭಾರತಕ್ಕೆ ಟಕ್ಕರ್ ನೀಡಿ ಜೀವಂತವಾಗಿರಿಸಿಕೊಳ್ಳುವ ಮಹಾದಾಸೆಯಲ್ಲಿದೆ. ಹೀಗಾಗಿ ಇಂದಿನ ರಣಕಣದಲ್ಲಿ ಯಾರ್ ಗೆಲ್ತಾರೆ ಅನ್ನೋದು ಕಾದುನೋಡಬೇಕಿದೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್