ಟಿ20 ವಿಶ್ವಕಪ್ನಲ್ಲಿ ಮದಗಜಗಳ ಬಿಗ್ ಬ್ಯಾಟಲ್..!
ಸೂಪರ್-8 ಮ್ಯಾಚ್ ಅಲ್ಲ.. ಇದು ಸೇಡಿನ ಸಮರ..!
ಪ್ರತಿಷ್ಠೆಯ ಕಾಳಗದಲ್ಲಿ ಇಂದು ಯಾರಿಗೆ ವಿಜಯ..?
ವಿಶ್ವ ಕ್ರಿಕೆಟ್ನ ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ನಾನಾ.. ನೀನಾ ಹೋರಾಟ ಆಟಗಾರರು ಪಣತೊಟ್ಟಿದ್ದಾರೆ. ನೂರಕ್ಕೆ ನೂರು ಈ ಮ್ಯಾಚ್ ಗೆಲ್ಲಲು ಆಸ್ಟ್ರೇಲಿಯಾ ಸನ್ನದ್ಧವಾಗಿದ್ರೆ. ಇತ್ತ ವೀರ ಸೇನಾನಿಗಳಂತೆ ಎದೆಯೊಡ್ಡಲು ಇಂಡಿಯನ್ ಕಲಿಗಳು ರೆಡಿಯಾಗಿದ್ದಾರೆ.

ಜಸ್ಟ್ ಒಂದೇ ಹೆಜ್ಜೆ.. ಟೀಮ್ ಇಂಡಿಯಾ ಸೆಮೀಸ್ ಅಂಗಳಕ್ಕೆ ಹೆಜ್ಜೆ ಇಡಲು ಒಂದು ಹೆಜ್ಜೆ ಮಾತ್ರವೇ ಬಾಕಿಯಿದೆ. ಈ ಸೆಮೀಸ್ ಸಮರಕ್ಕೂ ಮುನ್ನವೇ ಬಿಗ್ ಬ್ಯಾಟಲ್ಗೆ ಟಿ20 ವಿಶ್ವಕಪ್ ವೇದಿಕೆಯಾಗ್ತಿದೆ. ಇಂಡೋ-ಆಸಿಸ್ನ ರಣರೋಚಕ ಸೂಪರ್-8 ಫೈಟ್ಗೆ ಕೌಂಟ್ಡೌನ್ ಶುರುವಾಗಿದ್ದು, ಸೆಂಟ್ ಲೂಸಿಯಾದಲ್ಲಿ ನಡೆಯಲಿರುವ ಇಂದಿನ ಪಂದ್ಯ ಉಭಯ ತಂಡಗಳಿಗೆ ಪ್ರತಿಷ್ಠೆಯಾಗಿದೆ. ಇದಕ್ಕೆ ಕಾರಣ ಒಂದು ತಂಡಕ್ಕೆ ಇದು ಸೇಡಿನ ಸಮರವಾಗಿದ್ರೆ. ಮತ್ತೊಂದು ತಂಡಕ್ಕೆ ಸೆಮೀಸ್ಗೆ ಎಂಟ್ರಿ ನೀಡುವ ಪ್ರತಿಷ್ಠೆ. ಹೀಗಾಗಿಯೇ ಇಂದಿನ ಪ್ರತಿಷ್ಠೆಯ ಕಾಳಗದಲ್ಲಿ ಯಾರ್ ಗೆಲ್ತಾರೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.
ಇದನ್ನು ಓದಿ:ಚಾರ್ಜ್ಶೀಟ್ ಆದ್ಮೆಲೆ ದರ್ಶನ್ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!
ಅಜೇಯ ಟೀಮ್ ಇಂಡಿಯಾಕ್ಕೆ ಪ್ರತೀಕಾರದ ಮ್ಯಾಚ್..!
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪಾರಮ್ಯ ಮೆರೆಯುತ್ತಿದೆ. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಜಬರ್ದಸ್ತ್ ಪರ್ಫಾಮೆನ್ಸ್ ನೀಡ್ತಿರುವ ರೋಹಿತ್ ಪಡೆ, ಬಹುತೇಕ ಸೆಮಿಫೈನಲ್ ಕನ್ಫರ್ಮ್ ಮಾಡಿಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾಗೆ ಇಂದಿನ ಪಂದ್ಯ ಔಪಚಾರಿವಾಗಿದ್ರೂ, ಭಾರೀ ಅಂತರದ ಸೋಲು ಕಾಣಬಾರದಷ್ಟೇ. ಹೀಗಾದ್ರೂ, ಆಸ್ಟ್ರೇಲಿಯಾ ಎದುರು ಟೀಮ್ ಇಂಡಿಯಾ ಪ್ರತೀಕಾರ ತೀರಿಸಿಕೊಳ್ಳುವ ಹಠದಲ್ಲಿದೆ. ಇದಕ್ಕೆ ಕಾರಣ ಆ ಮೂರು ಪ್ರಮುಖ ಸೋಲು..
2003ರ ಏಕದಿನ ವಿಶ್ವಕಪ್ನಲ್ಲಿ ಸೋಲು
ಇಂದಿನ ಮ್ಯಾಚ್ ಸೇಡಿನ ಸಮರವಾಗಲು ಕಾರಣ, 2003ರ ಏಕದಿನ ವಿಶ್ವಕಪ್ ಫೈನಲ್, 2023ರಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಎದುರು ಅನುಭವಿಸಿರುವ ಮುಖಭಂಗಗಳಾಗಿವೆ. ಹೌದು! 2023ರ ಏಕದಿನ ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್ಗೆ ಎಂಟ್ರಿ ನೀಡಿದ್ದ ಟೀಮ್ ಇಂಡಿಯಾ, ತವರಿನಲ್ಲಿ ವಿಶ್ವಕಪ್ ಜಯಿಸುವ ಮಹಾದಾಸೆ ಹೊಂದಿತ್ತು. ಆಸ್ಟ್ರೇಲಿಯಾ ಟ್ರೋಫಿ ಜಯಿಸುವ ಕನಸು ನುಚ್ಚುನೂರು ಮಾಡಿತ್ತು. 2023ರ ಜುಲೈನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ನಲ್ಲೂ ಟೀಮ್ ಇಂಡಿಯಾ ಪಾಲಿಗೆ ವಿಲನ್ ಆಗಿತ್ತು.
ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಬರ್ಬರ ಕೊಲೆ.. 17 ವರ್ಷದ ಬಾಲಕನ ತಲೆಗೆ ರಾಡ್ನಿಂದ ಹೊಡೆದು ಹತ್ಯೆ..
2003ರ ಏಕದಿನ ವಿಶ್ವಕಪ್ ಸೋಲಿನ ಅಪಮಾನಕ್ಕೂ ಲೆಕ್ಕಚುಕ್ತಾ ಮಾಡೋ ಶಪಥದಲ್ಲಿದೆ. ಆ ಮೂಲಕ ಒಂದು ಸೋಲಿನಿಂದ 3 ಪ್ರತೀಕಾರ ತೀರಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿ ಭಾರೀ ಗೇಮ್ಪ್ಲಾನ್ ಹಾಗೂ ಸ್ಟ್ರಾಟರ್ಜಿಯನ್ನೇ ರೂಪಿಸಿದೆ.
ಅತಂತ್ರದ ಆಸ್ಟ್ರೇಲಿಯಾಗೆ ಗೆಲುವೊಂದೇ ಗುರಿ..!
ಲೀಗ್ಸ್ಟೇಜ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ, ಬಾಂಗ್ಲಾ ಎದುರಿನ ಸೂಪರ್-8ನಲ್ಲೂ ಸುಲಭ ಗೆಲುವು ದಾಖಲಿಸಿತ್ತು. ಹೀಗಾಗಿ ಸೆಮಿಸ್ಗೆ ನಿರಾಶಾದಾಯಕವಾಗಿ ಎಂಟ್ರಿ ನೀಡುವ ಕನಸಿನಲ್ಲಿತ್ತು. ಆದ್ರೆ, ಅಫ್ಘನ್ ನೀಡಿದ ಶಾಕಿಂಗ್ ಟ್ರೀಟ್ಮೆಂಟ್ಗೆ ಆಸ್ಟ್ರೇಲಿಯಾ ಮಕಾಡೆ ಮಲಗಿದೆ. ಹೀಗಾಗಿ ಸೂಪರ್-8ನ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದ್ರೆ, ಇದೇ ಸುವರ್ಣಾವಕಾಶ ಬಳಸಿಕೊಂಡು ಟೀಮ್ ಇಂಡಿಯಾ, ಆಸ್ಟ್ರೇಲಿಯಾದ ಸೆಮೀಸ್ ಕನಸು ಭಗ್ನಗೊಳಿಸುವ ಲೆಕ್ಕಚಾರದಲ್ಲಿದೆ.
ಇಂದಿನ ಸೂಪರ್-8 ಮ್ಯಾಚ್ನಲ್ಲಿ ಬಲಿಷ್ಠರ ಕಾಳಗ ನಡೀಯುತ್ತಿದ್ದು, ಈ ಬಿಗ್ ಬ್ಯಾಟಲ್ನಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನ ಜಸ್ಟ್ ವೇಯ್ಟ್ ಆ್ಯಂಡ್ ಸೀ..
ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್