newsfirstkannada.com

ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರರು ಎಂದರೆ ಭಯ.. ರೋಹಿತ್, ಕೊಹ್ಲಿ, ಬೂಮ್ರಾ, ಪಂತ್ ಅಲ್ಲವೇ ಅಲ್ಲ..!

Share :

Published June 24, 2024 at 11:48am

    ಇಂಡೋ-ಆಸಿಸ್​​ ಮೆಗಾ ಫೈಟ್​ಗೆ ವೇದಿಕೆ ಸಜ್ಜು

    ಕ್ಯಾಪ್ಟನ್​​ ರೋಹಿತ್​ ಬಲ ಹೆಚ್ಚಿಸಿದ ಆ 3 ಅಸ್ತ್ರಗಳು

    ಆಸಿಸ್ ಮಂತ್ರಕ್ಕೆ ಟೀಮ್​ ಇಂಡಿಯಾದ ತಿರುಮಂತ್ರ ರೆಡಿ

ಇಂಡೋ-ಆಸಿಸ್​​ ಮೆಗಾ ಫೈಟ್​ಗೆ ವಿಶ್ವಕಪ್​ ರಣಕಣದಲ್ಲಿ ವೇದಿಕೆ ಸಜ್ಜಾಗಿದೆ. ಅಟ್ಯಾಕಿಂಗ್​ ಮಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರೋ ಆಸ್ಟ್ರೇಲಿಯಾಗೆ, ಟೀಮ್​ ಇಂಡಿಯಾ ಸಖತ್​ ಕೌಂಟರ್​ ಅಟ್ಯಾಕ್​ ಪ್ಲಾನ್​ನೊಂದಿಗೆ ರೆಡಿಯಾಗಿದೆ. ಅಖಾಡಕ್ಕೆ ಇಳಿಯೋಕೆ ಮೊದಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ, ಕಾಂಗರೂಗಳಿಗೆ ಖೆಡ್ಡಾ ತೋಡಿದ್ದಾರೆ.

ವಿಶ್ವಕಪ್​ ಮೆಗಾ ಟೂರ್ನಿಯ ಸೋಲಿಲ್ಲದ ಸರದಾರ ಟೀಮ್​ ಇಂಡಿಯಾ ಮುಂದಿರೋದು ಬಿಗ್​ ಚಾಲೆಂಜ್​. ಟೂರ್ನಿ ಆರಂಭದಿಂದ ಅಬ್ಬರದ ಆಟದೊಂದಿಗೆ ಸೆಮಿಫೈನಲ್​ನತ್ತ ದಾಪುಗಾಲಿಟ್ಟಿರುವ ರೋಹಿತ್​ ಪಡೆ ಇಂದು ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಸೂಪರ್​​ 8 ಹಂತದ ಹೈವೋಲ್ಟೆಜ್​ ಹಣಾಹಣಿಯಲ್ಲಿ ಗೆದ್ದು ಸೆಮಿಸ್​​​ಗೆ ರಾಯಲ್​ ಎಂಟ್ರಿ ಕೊಡಲು ಬ್ಲೂ ಬಾಯ್ಸ್​ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ:ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್​​ಗೆ ಹೋಗಲು ಇದೆ ಅವಕಾಶ..!

ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶಾಕಿಂಗ್​ ರೀತಿಯಲ್ಲಿ ಆಸ್ಟ್ರೇಲಿಯಾ ಸೋಲುಂಡಿದೆ. ಹೀಗಾಗಿ ಇಂದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂದಿನ ಪಂದ್ಯದಲ್ಲಿ ಸೋತರೆ, ಕಾಂಗರೂಗಳ ಪಾಲಿಗೆ ಸೆಮಿಫೈನಲ್ ಎಂಟ್ರಿ ಕಲ್ಲು ಮುಳ್ಳಿನ ಹಾದಿಯಾಗಲಿದೆ. ಹೀಗಾಗಿ ಶತಾಯಗತಾಯ ಗೆದ್ದೇ ತೀರಲು ಆಸಿಸ್​ ಪಡೆ ಪಣತೊಟ್ಟಿದೆ. ಟೀಮ್​ ಇಂಡಿಯಾ ಕ್ಯಾಪ್ಟನ್​ ಕಾಂಗರೂಗಳ ಬೇಟೆಗೆ ಅದಾಗಲೇ ಖೆಡ್ಡಾ ತೋಡಿದ್ದಾರೆ.

ಕಾಂಗರೂಗಳ ಬೇಟೆಗೆ ಸ್ಪಿನ್​ ಖೆಡ್ಡಾ
ಬಲಿಷ್ಠ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಲು ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಪ್ಲಾನ್​ ರೆಡಿಯಾಗಿದೆ. ಕಾಂಗರೂಗಳನ್ನು ಬೇಟೆಯಾಡಲು ಕ್ಯಾಪ್ಟನ್​​ ರೋಹಿತ್​​ ಸ್ಪಿನ್​ ಖೆಡ್ಡಾ ತೋಡಿದ್ದಾರೆ. ಬತ್ತಳಿಕೆಯಲ್ಲಿರೋ 3 ಪ್ರಮುಖ ಅಸ್ತ್ರಗಳನ್ನು ಸೆಂಟ್​​ ಲೂಸಿಯಾದಲ್ಲಿ ಪ್ರಯೋಗಿಸಲು ರೋಹಿತ್​ ರೆಡಿಯಾಗಿದ್ದಾರೆ.

ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!

ಕುಲ್​ದೀಪ್​ ಕೈಚಳಕ, ಆಸಿಸ್​​ಗೆ ನಡುಕ..!
ಸೂಪರ್​ 8 ಸ್ಟೇಜ್​ನ ಕದನಗಳು ಆರಂಭವಾದ ಮೇಲೆ ಪ್ಲೇಯಿಂಗ್​ ಇಲೆವೆನ್​ಗೆ ಎಂಟ್ರಿ ಕೊಟ್ಟ ಕುಲ್​​ದೀಪ್​ ಯಾದವ್​​​, ಕೈಚಳಕ್ಕೆ ಬ್ಯಾಟ್ಸ್​ಮನ್​ಗಳು ಶಾಕ್​ ಆಗಿದ್ದಾರೆ. ಹಾಕಿದ 8 ಓವರ್​​ಗಳಲ್ಲೇ 5 ವಿಕೆಟ್​ ಬೇಟೆಯಾಡಿ ವಿಂಡೀಸ್​ ನಾಡಲ್ಲಿ ದರ್ಬಾರ್​ ನಡೆಸ್ತಿದ್ದಾರೆ. ರೆಡ್​ ಹಾಟ್​ ಫಾರ್ಮ್​ನಲ್ಲಿರೋ ಕುಲ್​​ದೀಪ್​ರನ್ನ, ಆಸ್ಟ್ರೇಲಿಯನ್ನರಿಗೆ, ಅದರಲ್ಲೂ ಪ್ರಮುಖವಾಗಿ ಲೆಫ್ಟ್​ ಹ್ಯಾಂಡೆಡ್​ ಬ್ಯಾಟರ್ಸ್​​​​ ಪಾಲಿಗೆ ಸಿಂಹಸ್ವಪ್ನವಾಗಿ ಕಾಡ್ತಿದ್ದಾರೆ. ಸ್ಪಿನ್​ ಜಾದೂವಿನಿಂದ ಬ್ಯಾಟ್ಸ್​​ಮನ್​​ಗಳನ್ನು ಕಕ್ಕಾಬಿಕ್ಕಿಯಾಗಿಸಿರೋ ಚೈನಾಮನ್​ ಸ್ಪಿನ್ನರ್​​, ಆಸಿಸ್​ ಕ್ಯಾಂಪ್​ನಲ್ಲಿ ನಡುಕ ಹುಟ್ಟಿಸಿದ್ರೆ ಟೀಮ್​ ಇಂಡಿಯಾದ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.

ಆಸಿಸ್​ಗೆ ಅಕ್ಷರ್​​ ಪಟೇಲ್​ ಆತಂಕ..!
ಲೆಫ್ಟ್​ ಆರ್ಮ್​ ಸ್ಪಿನ್ನರ್​ ಅಕ್ಷರ್​ ಪಟೇಲ್​ ಈ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಬಲ ಹೆಚ್ಚಿಸಿದ್ದಾರೆ. ಪವರ್​​ಪ್ಲೇನಲ್ಲೇ ಪವರ್​ಫುಲ್​ ದಾಳಿಯನ್ನ ಸಂಘಟಿಸ್ತಾ ಬ್ಯಾಟರ್​​ಗಳಿಗೆ ಶಾಕ್​ ನೀಡ್ತಿದ್ದಾರೆ. ಹಾಕಿದ 11 ಓವರ್​​ಗಳಲ್ಲಿ 4 ವಿಕೆಟ್​ ಬೇಟೆಯಾಡಿರೋದಲ್ಲದೇ, ಕೇವಲ 7ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. ಫಾರ್ಮ್​ನಲ್ಲಿರೋ ಅಕ್ಷರ್​, ಆಸ್ಟ್ರೇಲಿಯಾ ಎದುರು ಟಿ20ಯಲ್ಲಿ ಸಾಲಿಡ್ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಅಕ್ಷರ್​ ಪಟೇಲ್​ರ ಈ ಅದ್ಭುತ ಪರ್ಫಾಮೆನ್ಸ್​​ ರೋಹಿತ್​ ಪಡೆಯ ಬಲ ಹೆಚ್ಚಿಸಿದೆ.

ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

ರೈಟ್​ ಹ್ಯಾಂಡ್​​ ಬ್ಯಾಟರ್ಸ್​ಗೆ ಜಡೇಜಾ ಕಂಟಕ
ಆಸ್ಟ್ರೇಲಿಯಾ ರೈಟ್​​ ಹ್ಯಾಂಡ್​ ಬ್ಯಾಟರ್ಸ್​ಗೆ ರವಿಂದ್ರ ಜಡೇಜಾ ಟೆನ್ಶನ್​ ತಂದಿಟ್ಟಿದ್ದಾರೆ. ವಿಶ್ವಕಪ್​ನಲ್ಲಿ ಫಾರ್ಮ್​ಗಾಗಿ ಪರದಾಡಿದ್ದ ಜಡೇಜಾ ಕಳೆದ ಪಂದ್ಯದಲ್ಲಿ ರಿಧಮ್​ ಕಂಡುಕೊಳ್ಳುವಲ್ಲಿ ಯಶಸ್ಸಿಯಾಗಿದ್ದಾರೆ. ಕರಿಯರ್​​ನಲ್ಲಿ ರೈಟ್​​ ಹ್ಯಾಂಡ್​ ಬ್ಯಾಟರ್ಸ್​ಗೆ ಹೆಚ್ಚು ಟ್ರಬಲ್​ ಮಾಡಿರೋ ಜಡೇಜಾ, ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳ ಎದುರೂ ಮೇಲುಗೈ ಸಾಧಿಸಿದ್ದಾರೆ. ಬಾಂಗ್ಲಾ ವಿರುದ್ಧ ವಿಕೆಟ್​ ಬೇಟೆಯಾಡಿ ಅಕೌಂಟ್​ ಓಪನ್​ ಮಾಡಿರೋ ಜಡ್ಡು ಆಸಿಸ್​ಗೆ ಬ್ಯಾಟರ್ಸ್​ನ ಕಾಡಲು ಸಜ್ಜಾಗಿದ್ದಾರೆ.

ಆಸಿಸ್​ನ ಬಲಿಷ್ಠ ಬ್ಯಾಟಿಂಗ್​ ಲೈನ್ ​ಅಪ್​ ಕಟ್ಟಿ ಹಾಕಲು ಕ್ಯಾಪ್ಟನ್​ ರೋಹಿತ್​ ಶರ್ಮಾ, ಸಮರ್ಥ ಪ್ಲಾನ್​ನೊಂದಿಗೆ ರೆಡಿಯಾಗಿದ್ದಾರೆ. ಈ ಪ್ಲಾನ್​ ಆನ್​ಫೀಲ್ಡ್​ನಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನು ಓದಿ:ಚಾರ್ಜ್​ಶೀಟ್ ಆದ್ಮೆಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರರು ಎಂದರೆ ಭಯ.. ರೋಹಿತ್, ಕೊಹ್ಲಿ, ಬೂಮ್ರಾ, ಪಂತ್ ಅಲ್ಲವೇ ಅಲ್ಲ..!

https://newsfirstlive.com/wp-content/uploads/2024/06/IND-VS-AUS-1.jpg

Load More