ಜಿಮ್ ಟ್ರೈನರ್ ಆದ ಗಂಡನಿಗೆ ಡಿವೋರ್ಸ್ ನೀಡಲು ಪತ್ನಿ ಯತ್ನ
ಡಿವೋರ್ಸ್ ಬೇಡವೆಂದು ಯಾರು ಹೇಳಿದ್ರು ಕೇಳುತ್ತಿಲ್ಲ ಹೆಂಡತಿ
ಕಳೆದ ವರ್ಷ ಇಬ್ರು ಮದುವೆಯಾಗಿದ್ರು, ಹೆಂಡತಿ ತೂಕ ಎಷ್ಟಿತ್ತು?
ಲಕ್ನೋ: ಈಗೀಗ ಗಂಡ-ಹೆಂಡತಿ ಇಬ್ಬರು ಸಾಮಾನ್ಯ ವಿಚಾರಗಳಿಗೂ ವಿಚ್ಛೇದನ ಪಡೆಯುತ್ತಿದ್ದಾರೆ. ಈ ವಿಚಾರಗಳು ಜನ ಸಾಮಾನ್ಯರನ್ನ ಯೋಚನೆ ಮಾಡುವಂತೆ ಮಾಡಿ ಬಿಡುತ್ತಿವೆ. ಸದ್ಯ ಇಂತಹದ್ದೆ ಒಂದು ಸಂಗತಿ ನಡೆದಿದ್ದು ಹೆಂಡತಿಯ ದೇಹದ ತೂಕ ಇಳಿಸಲು ಜಿಮ್ ಟ್ರೈನರ್ ಆದ ಗಂಡನಿಂದ ಆಗಿಲ್ಲವೆಂದು ಪತ್ನಿಯೇ ಡಿವೋರ್ಸ್ ನೀಡಲು ಮುಂದಾಗಿದ್ದಾರೆ.
ಉತ್ತರ ಪ್ರದೇಶದ ನ್ಯೂ ಆಗ್ರಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದು ಬೆಳಕಿಗೆ ಬಂದಿದೆ. ಮಹಿಳೆ ಮದುವೆಗು ಮೊದಲೇ ಜಿಮ್ ಟ್ರೈನರ್ ಜೊತೆ ಈ ಬಗ್ಗೆ ಮಾತನಾಡಿ ಷರತ್ತುಗಳನ್ನು ವಿಧಿಸಿದ್ದಳು. ನಾನು ನಿನ್ನನ್ನು ಮದುವೆ ಆಗುತ್ತೇನೆ. ಷರತ್ತಿನಂತೆ ಮದುವೆಯಾದ ಮೇಲೆ ನನ್ನ ದೇಹದ ತೂಕವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ನಿಮಗೆ ವಿಚ್ಛೇದನ ನೀಡುತ್ತೇನೆ ಎಂದು ಕಡ ಖಂಡಿತವಾಗಿ ಹೇಳಿದ್ದಳು. ಇದಕ್ಕೆ ಜಿಮ್ ಟ್ರೈನರ್ ಆದ ವ್ಯಕ್ತಿ ಒಪ್ಪಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.
ಅದರಂತೆ ಕಳೆದ ವರ್ಷ ಇಬ್ಬರು ವಿವಾಹವಾಗಿದ್ದರು. ಆದರೆ ಹಸೆಮಣೆ ಏರಿ ಒಂದು ವರ್ಷ ಕಳೆದರು 75 ಕೆ.ಜಿ ಇದ್ದ ಮಹಿಳೆ ತೂಕ ಹಾಗೆ ಇದೆ. ಒಂದು ಗ್ರಾಂ ಕೂಡ ಕಡಿಮೆಯಾಗಿಲ್ಲ. ಗಂಡ ಎಷ್ಟೇ ಪ್ರಯತ್ನ ಪಟ್ಟರೂ ಹೆಂಡತಿಯ ತೂಕ ಇಳಿಸಲು ಆಗಿಲ್ಲ. ಆಕೆಯ ತೂಕ ಮೊದಲು ಎಷ್ಟಿತ್ತೋ ಈಗಲೂ ಅಷ್ಟೇ ಇದೆ. ಗಂಡ ಆಕೆಯ ಜೊತೆಗಿರಲು ಇಷ್ಟಪಡುತ್ತಾನೆ. ಆದರೆ ತೂಕ ಇಳಿಸಿಲ್ಲವೆಂದು ಬೇಸರಗೊಂಡ ಪತ್ನಿ ಈಗ ವಿಚ್ಛೇದನ ಪಡೆಯಲು ಹಠ ಹಿಡಿದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ. ಪೊಲೀಸರು ಈ ಪ್ರಕರಣವನ್ನ ಕುಟುಂಬ ಸಲಹಾ ಕೇಂದ್ರಕ್ಕೆ ಹಸ್ತಾಂತರ ಮಾಡಿದ್ದಾರೆ.
ಮಹಿಳೆಯನ್ನು ಕೂರಿಸಿಕೊಂಡು ಕುಟುಂಬದ ಹಿರಿಯರು, ಪೊಲೀಸರು, ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಎಷ್ಟೇ ಹೇಳಿದರು ಮಹಿಳೆ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಇನ್ನೊಮ್ಮೆ ಒಪ್ಪಿಸುವ ಪ್ರಯತ್ನ ಮಾಡೋಣವೆಂದು ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ದಿನಾಂಕ ನಿಗದಿ ಮಾಡಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ