ಭಾರತಕ್ಕೆ ಭಾರೀ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯಾವಳಿ
ವಿರಾಟ್ ಕೊಹ್ಲಿ ಔಟ್ ಆಗಿದ್ದರಿಂದ ಅಭಿಮಾನಿ ಬಳಗದಲ್ಲಿ ಬೇಸರ
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರನ್ ಮಷಿನ್ ಎಂದೇ ಹೆಸರು ಪಡೆದಿರುವ ವಿರಾಟ್ ಕೊಹ್ಲಿಯವರು ಮತ್ತೊಮ್ಮೆ ಡಕೌಟ್ ಆಗಿದ್ದಾರೆ.
ಇದನ್ನೂ ಓದಿ: ಕ್ಯಾಸಿನೊ ಗೇಮ್ನಲ್ಲಿ ಕೋಟಿ ಕೋಟಿ ಹಣ ಗೆದ್ದ.. ಖುಷಿಯಲ್ಲಿ ಇರುವಾಗಲೇ ಕಾರ್ಡಿಕ್ ಅರೆಸ್ಟ್, ದುರಂತ ಸಾವು
ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್ನ ಡೇರೆನ್ ಸೆಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಓಪನರ್ ಆಗಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಲಯ ಕಂಡುಕೊಳ್ಳುವಷ್ಟರಲ್ಲೇ ಕೊಹ್ಲಿ ಡಕೌಟ್ ಆಗಿದ್ದಾರೆ. ಇದು ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. 5 ಬಾಲ್ ಎದುರಿಸಿದ ವಿರಾಟ್ ಒಂದು ರನ್ ಕೂಡ ಬಾರಿಸಿದೆ ಔಟ್ ಆಗಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿಂದು ಯಾರಾಗ್ತಾರೆ ಮ್ಯಾಚ್ ವಿನ್ನರ್..? ಎಲ್ಲರ ಕಣ್ಣು ಈ ಆಲ್ರೌಂಡರ್ ಮೇಲೆ!
2ನೇ ಓವರ್ ಮಾಡುತ್ತಿದ್ದ ಆಸಿಸ್ನ ಹಜಲ್ವುಡ್ನ ಓವರ್ನಲ್ಲಿ ವಿರಾಟ್ ಕೊಹ್ಲಿ ಬಿಗ್ ಶಾಟ್ ಬಾರಿಸಿದರು. ಆದರೆ ಆ ಬಾಲ್ ನೇರ ಹೋಗಿ ಟೀಮ್ ಡೇವಿಡ್ ಕೈ ಸೇರಿತು. ಇದರಿಂದ ಟೀಮ್ ಇಂಡಿಯಾ ಕೊಹ್ಲಿಯ ಮಹತ್ವದ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಡಕೌಟ್ ಆಗುತ್ತಿರುವುದು ಇದು 2ನೇ ಬಾರಿ ಆಗಿದೆ. ಸದ್ಯ ರೋಹಿತ್, ಪಂತ್ ಬ್ಯಾಟಿಂಗ್ ಮಾಡುತ್ತಿದ್ದು 3 ಓವರ್ಗೆ 35 ರನ್ನಿಂದ ಭಾರತ ಒಂದು ವಿಕೆಟ್ ಕಳೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ