newsfirstkannada.com

ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?

Share :

Published June 26, 2024 at 11:05am

    ರಾಜ್ಯದಲ್ಲಿ ಐದು ದಿನಗಳ ಕಾಲ ಭಾರೀ ಮಳೆಯ ಸೂಚನೆ

    ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ಘೋಷಣೆ

    ಬೆಂಗಳೂರಲ್ಲಿ ಎಷ್ಟು ದಿನ ಮಳೆ ಬರುತ್ತೆ ಗೊತ್ತಾ..?

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಭಾಗಗಳಲ್ಲೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ

ಎಲ್ಲೆಲ್ಲಿ ಆರೆಂಜ್ ಅಲರ್ಟ್?
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಮಂಡ್ಯ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ

ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ಬಾಗಲಕೋಟೆ, ಗದಗ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ

ಇದನ್ನೂ ಓದಿ:ಮಳೆ ಮಾಡಿದ ಅನಾಹುತಕ್ಕೆ ನಾಲ್ವರು ಸಾವು.. ಇಂದು ಮುಂಜಾನೆ ನಡೆಯಿತು ಘೋರ ದುರಂತ.. Photos

ಬೆಂಗಳೂರಿಗೆ ಏನು..?
ಬೆಂಗಳೂರಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಸಾಧ್ಯತೆ ಇದೆ. ಇಂದಿನಿಂದ ಜೂನ್ 29ರ ವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಸದ್ಯ ನಗರದಲ್ಲಿ ಮೋಡ ಕವಿದ ವಾತಾವರಣ ಇದೆ. ಮುಂಜಾನೆಯಿಂದಲೇ ನಗರದ ಕೆಲವು ಭಾಗದಲ್ಲಿ ತುಂತುರು ಮಳೆ ಬರುತ್ತಿದೆ. ಇದೇ ರೀತಿ ಮುಂದಿನ ಮೂರು ದಿನಗಳ ಕಾಲ ವಾತಾವರಣ ಇರುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?

https://newsfirstlive.com/wp-content/uploads/2024/05/RAIN-15.jpg

Load More