ಅಫ್ಘಾನ್ ಕೆಚ್ಚೆದೆಯ ಹೋರಾಟದ ಪ್ರತಿಫಲವೇ ಗೆಲುವು
ಟಿ20 ವಿಶ್ವಕಪ್ನಲ್ಲಿ ಇತಿಹಾಸ ನಿರ್ಮಿಸಿದ ಅಫ್ಘಾನ್
ತೆರೆ ಹಿಂದಿನ ಹೀರೋಗಳಿಗೆ ಒಂದು ಸೆಲ್ಯೂಟ್..!
ಸಾಧಿಸುತ್ತೇನೆ ಎಂಬ ಛಲ.. ಕೆಚ್ಚೆದೆಯ ಹೋರಾಟ.. ತಂಡದ ಗೆಲುವಿಗಾಗಿ ಏನನ್ನ ಬೇಕಾದ್ರೂ ಮಾಡ್ತೀನಿ ಅನ್ನೋ ಮನೋಭಾವ.. ಇಂದು ಅಫ್ಘಾನಿಸ್ತಾನ ತಂಡವನ್ನ ಸೆಮಿಫೈನಲ್ಗೇರಿಸಿದೆ. ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಅಫ್ಘನ್ ಆಟಗಾರರು ಬಲಿಷ್ಠ ಆಸ್ಟ್ರೇಲಿಯಾವನ್ನೆ ವಿಶ್ವಕಪ್ನಿಂದ ಕಿಕ್ಔಟ್ ಮಾಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ. ಸೂಪರ್-8ನ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ರಶೀದ್ ಖಾನ್ ಬಳಗ, ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವಿಗೆ ಅಫ್ಘನ್ ಹೋರಾಡಿದ ರೀತಿ ಮೈ ಜುಮ್ ಎನಿಸುವಂತಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?
ಬಾಂಗ್ಲಾ ಟೈಗರ್ಸ್ನ ಬೇಟೆಯಾಡಿದ ಆಫ್ಫನ್ಸ್..!
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘನ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಜಸ್ಟ್ 115 ರನ್ ಗಳಿಸಿತ್ತು. ಮಳೆ ಅಡ್ಡಿಪಡಿಸಿದ ಪರಿಣಾಮ ಬಾಂಗ್ಲಾಗೆ 19 ಓವರ್ಗಳಲ್ಲಿ 114 ರನ್ಗಳ ಗುರಿ ನೀಡಲಾಯ್ತು. ಈ ಟಾರ್ಗೆಟ್ನ 12.1 ಎಸೆತದಲ್ಲೇ ತಲುಪಿದ್ರೆ ಬಾಂಗ್ಲಾಗೆ ಸೆಮಿಸ್ ಪ್ರವೇಶದ ಅವಕಾಶ ಇತ್ತು. ಅದೇ ಮಹಾದಾಸೆಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಲೆಕ್ಕಚಾರ ತಲೆಕೆಳಗಾಯ್ತು.
ಕೊನೆವರೆಗೂ ಫೈಟರ್ಸ್ನಂತೆ ಆಫ್ಘನ್ಸ್ ಹೋರಾಟ
ಅಫ್ಘನ್ ತಂಡದ ಹೋರಾಟ ನಿಜಕ್ಕೂ ಮೈ ಜುಮ್ ಅನ್ನಿಸುವಂತಿತ್ತು. ಚೇಸಿಂಗ್ಗಿಳಿದ ಆರಂಭದಲ್ಲಿ ಬಾಂಗ್ಲಾ ಮೇಲುಗೈ ಸಾಧಿಸಿತ್ತು. ಒಂದು ಹಂತದಲ್ಲಿ ಅಫ್ಘನ್ ಸೋಲಿನ ಸುಳಿಗೆ ಸಿಲುಕಿತ್ತು. ಆದ್ರೂ, ಛಲ, ಗೆಲುವಿನ ಹಠ ಆಟಗಾರರಲ್ಲಿ ಕಡಿಮೆಯಾಗಲಿಲ್ಲ. ಪದೇ ಪದೇ ಪಂದ್ಯಕ್ಕೆ ಮಳೆ ಅಡ್ಡಿಯಾದರೂ, ತಾಳ್ಮೆ ಕಳೆದುಕೊಳ್ಳದ ಅಫ್ಘನ್ನರು, ಬಾಂಗ್ಲಾ ಟೈಗರ್ಸ್ನ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು.
ಇದನ್ನೂ ಓದಿ:ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ
ಕ್ಯಾಪ್ಟನ್ ರಶೀದ್ ಖಾನ್ ಸೂಪರ್ ಸ್ಪೆಲ್..!
ಅಫ್ಘನ್ ಪಡೆಯ ಗೇಮ್ ಚೇಂಜರ್ಸ್ ಕ್ಯಾಪ್ಟನ್ ರಶೀದ್ ಹಾಗೂ ವೇಗಿ ನವೀನ್ ಉಲ್ ಹಕ್..! ಅಲ್ಪಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವುದು ಸುಲಭದ್ದಾಗಿರಲಿಲ್ಲ. ಆದ್ರೆ, ಇದನ್ನ ಸಾಧ್ಯವಾಗಿಸಿದ ಶ್ರೇಯ ಇವರಿಬ್ಬರಿಗೆ ಸಲ್ಲುತ್ತೆ. ಸೂಪರ್ ಸ್ಪೆಲ್ ಮಾಡಿದ ರಶೀದ್, 4 ಓವರ್ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ್ರು. ಆ ಮೂಲಕ ಬಾಂಗ್ಲಾ ಬ್ಯಾಟಿಂಗ್ ಬೆನ್ನಲುಬನ್ನೇ ಮುರಿದ್ರು.
ಮತ್ತೊಂದೆಡೆ ಅಗ್ರೆಸ್ಸಿವ್ ಆಗಿ ಕಾಣ್ತಿದ್ದ ನವೀನ್, ಆರಂಭದಲ್ಲೇ 2 ವಿಕೆಟ್ ಕಬಳಿಸಿ ಬ್ರೇಕ್ ಥ್ರೂ ನೀಡಿದ್ರು. ಬಳಿಕ 18ನೇ ಓವರ್ನಲ್ಲಿ ದಾಳಿಗಿಳಿದ ನವೀನ್ ಮುಂದೆ, ಅನುಭವಿ ಲಿಟನ್ ದಾಸ್ ಎದುರು 12 ರನ್ ಡಿಫೆಂಡ್ ಮಾಡಿಕೊಳ್ಳುವ ಚಾಲೆಂಜ್ ಇತ್ತು. ಆದ್ರೆ, ಲಿಟನ್ ದಾಸ್ಗೆ ಅಬ್ಬರಿಸಲು ಅವಕಾಶ ನೀಡದ ನವೀನ್, ಬ್ಯಾಕ್ ಟು ಬ್ಯಾಕ್ ಟಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ವಿಕೆಟ್ ಉರುಳಿಸಿ ಗೆಲುವು ತಂದಿಟ್ರು.
ಟಿ20 ವಿಶ್ವಕಪ್ನಲ್ಲಿ ಇತಿಹಾಸ ನಿರ್ಮಾಣ
ಬಾಂಗ್ಲಾ ಎದುರಿನ ಗೆಲುವಿನೊಂದಿಗೆ ಸೆಮಿಫೈನಲ್ ಟಿಕೆಟ್ ಗಿಟ್ಟಿಸಿಕೊಂಡ ಅಫ್ಘನ್, ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ವಿಶ್ವ ಚಾಂಪಿಯನ್ ಆಗುವತ್ತ ಹೆಜ್ಜೆ ಹಾಕುವುದರ ಜೊತೆ ಜೊತೆಗೆ ಟೀಮ್ ಇಂಡಿಯಾ ಬಳಿಕ ಏಷ್ಯಾದಲ್ಲಿ ನಾವೇ ಬಲಾಢ್ಯರು ಎಂಬ ಸಂದೇಶವನ್ನು ಸಾರಿದೆ.
ಇದನ್ನೂ ಓದಿ:ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಮಳೆಗೆ ಗೋಡೆ ಕುಸಿದು ಗಂಡ, ಹೆಂಡತಿ, ಇಬ್ಬರು ಮಕ್ಕಳು ಸಾವು
ತೆರೆ ಹಿಂದಿನ ಹೀರೋಗಳಿಗೆ ಒಂದು ಸೆಲ್ಯೂಟ್..!
ಆನ್ಫೀಲ್ಡ್ನಲ್ಲಿ ಆಟಗಾರರ ಆಟ ಮಾತ್ರವೇ ಗೆಲುವಿಗೆ ಕಾರಣವಾಗಲಿಲ್ಲ. ತೆರೆ ಹಿಂದೆ ಗೇಮ್ಪ್ಲಾನ್, ಸ್ಟ್ರಾಟರ್ಜಿ ರೂಪಿಸ್ತಿದ್ದ ಹೆಡ್ ಕೋಚ್ ಜೊನಾಥನ್ ಟ್ರಾಟ್, ಬೌಲಿಂಗ್ ಕನ್ಸಲ್ಟೆಂಟ್ ಡ್ವೇನ್ ಬ್ರಾವೋಗೂ ಸೇರುತ್ತೆ. ಯಾಕಂದ್ರೆ, ಕ್ರೂಶಿಯಲ್ ಟೈಮ್ನಲ್ಲಿ ಇವರು ನೀಡ್ತಿದ್ದ ಸಣ್ಣ ಸಣ್ಣ ಇನ್ಫುಟ್ಸ್, ಆನ್ಫೀಲ್ಡ್ನಲ್ಲಿ ಬಿಗ್ ಇಂಪ್ಯಾಕ್ಟ್ ತಂದು ಕೊಡ್ತು. ಒಂದು ರೀತಿ ಹೆಡ್ ಕೋಚ್ ಜೋನಾಥನ್ ಟ್ರಾಟ್, ಅನ್ಅಫಿಶಿಯಲ್ ಕ್ಯಾಪ್ಟನ್ ಆಗಿದ್ರು.
ಆಸ್ಟ್ರೇಲಿಯಾ ಪಾಲಿಗೆ ಅಫ್ಘನ್ನರೇ ವಿಲನ್ಸ್..!
ಸೂಪರ್-8ನಲ್ಲಿ ಆಸ್ಟ್ರೇಲಿಯಾಗೆ ಮೊದಲ ಆಘಾತ ನೀಡಿದ್ದ ಅಫ್ಘನ್, ಆಸಿಸ್ ಪಡೆಯನ್ನ ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೀಗ ಬಾಂಗ್ಲಾವನ್ನು ಮಣ್ಣು ಮುಕ್ಕಿಸುವುದರೊಂದಿಗೆ ಅಫ್ಘಾನಿಸ್ತಾನ ಆಸಿಸ್ ತಂಡವನ್ನ ವಿಶ್ವಕಪ್ನಿಂದ ಕಿಕ್ಔಟ್ ಮಾಡಿತು. ಸೆಮೀಸ್ಗೆ ಎಂಟ್ರಿ ನೀಡಿರುವ ಅಫ್ಘನ್ ಮುಂದಿನ ಟಾರ್ಗೆಟ್, ಬಲಿಷ್ಠ ಸೌತ್ ಆಫ್ರಿಕಾ ಆಗಿದೆ. ಈ ಸೆಮಿಫೈನಲ್ನಲ್ಲಿ ಚೋಕರ್ಸ್ ಹಣೆಪಟ್ಟಿಯ ಸೌತ್ ಆಫ್ರಿಕಾವನ್ನೇ ಮಣಿಸಿ ಫೈನಲ್ಗೇರಿದ್ರು ಅಚ್ಚರಿ ಇಲ್ಲ.
ವಿಶೇಷ ವರದಿ: ಸಂತೋಷ್
ಇದನ್ನೂ ಓದಿ:ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದವರ ಮೇಲೆ ಫೈರಿಂಗ್.. ಐವರು ಸಾವು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್