newsfirstkannada.com

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ.. ಹೊನ್ನಾವರ-ಸಾಗರ-ಶಿವಮೊಗ್ಗ ಮಾರ್ಗ ಬಂದ್..!

Share :

Published June 27, 2024 at 8:32am

    ಸಿದ್ದಾಪುರದ ಹಸ್ವಿಗೊಳಿಯಲ್ಲೂ ಗುಡ್ಡ ಕುಸಿತ

    ಮನೆ ಮೇಲೆ ಗುಡ್ಡ ಬೀಳುವ ಆತಂಕ ಶುರುವಾಗಿದೆ

    ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ

ಉತ್ತರ ಕನ್ನಡ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಹೊನ್ನಾವರದ ಭಾಸ್ಕೇರಿ ಬಳಿ ಗುಡ್ಡ ಕುಸಿತ ಸಂಭವಿಸಿದೆ.

ಗುಡ್ಡ ಕುಸಿತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206 (ಹೊನ್ನಾವರ -ಸಾಗರ -ಶಿವಮೊಗ್ಗ) ಸಂಪೂರ್ಣ ಬಂದ್ ಆಗಿದೆ. ಗುಡ್ಡ ಕುಸಿದು ರಸ್ತೆಗೆ ಬಂಡೆಗಳು ಉರುಳಿ ಬಿದ್ದಿವೆ. ಹೀಗಾಗಿ ಕಾರವಾರದಿಂದ ಬೆಂಗಳೂರು ತೆರಳುವವರಿಗೆ ಸಂಚಾರ ಸಮಸ್ಯೆ ಉಂಟಾಗಿದೆ.

ಇದನ್ನೂ ಓದಿ:ಮೀನು ಹಿಡಿಯಲು ಹೋದಾಗ ಭೀಕರ ಅಪಘಾತ.. ಓರ್ವ ಯುವಕ ಸ್ಥಳದಲ್ಲೇ ಸಾವು

ಇತ್ತ ಸಿದ್ದಾಪುರ ತಾಲೂಕಿನ ಹಸ್ವಿಗುಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಹಸ್ವಿಗುಳಿಯ ವೆಂಕಟರಮಣ ತಿಮ್ಮ ನಾಯ್ಕ, ಸದಾನಂದ ತಿಮ್ಮ ನಾಯ್ಕ ಹಾಗೂ ಪಾರ್ವತಿ ತಿಮ್ಮ ನಾಯ್ಕರವರ ವಾಸದ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿತ ಆಗಿದೆ. ಅತಿಯಾದ ಮಳೆಯಿಂದ ಗುಡ್ಡ ಕುಸಿಯುತ್ತಿದ್ದು, ಮನೆಗಳಿಗೆ ಹಾನಿ ಆಗುವ ಸಂಭವ ಇದೆ. ಗುಡ್ಡ ಕುಸಿಯುತ್ತಿರುವ ಮನೆಗಳ ಹಿಂಭಾಗದಲ್ಲಿ ಯಾರೂ ಹೋಗದಂತೆ ತಾಲೂಕಾ ಆಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಕರ್ನಾಟಕದ 2 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ.. ಭಾರೀ ಮಳೆ.. ರೆಡ್​ ಅಲರ್ಟ್​ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ.. ಹೊನ್ನಾವರ-ಸಾಗರ-ಶಿವಮೊಗ್ಗ ಮಾರ್ಗ ಬಂದ್..!

https://newsfirstlive.com/wp-content/uploads/2024/06/RAIN-28.jpg

Load More