newsfirstkannada.com

Kalki 2898 AD Review: ಹಾಲಿವುಡ್ ರೇಂಜ್ ಮೇಕಿಂಗ್‌; ಪ್ರಭಾಸ್‌ ‘ಕಲ್ಕಿ’ಗೆ ಸಿಕ್ಕ ರೇಟಿಂಗ್ ಎಷ್ಟು?

Share :

Published June 27, 2024 at 2:47pm

    ಯೂನಿವರ್ಸಲ್ ಸಿನಿಮಾ, ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌!

    ದೀಪಿಕಾ ಪಾತ್ರವೇ ಕಲ್ಕಿ ಚಿತ್ರದ ತಿರುವು ಹಾಗೂ ಪ್ರಧಾನ ಕಥಾ ವಸ್ತು

    ಕಲ್ಕಿ 2898 AD ಚಿತ್ರಕ್ಕೆ ಅಮಿತಾಭ್​ ಬಚ್ಚನ್ ಅವರೇ ದೊಡ್ಡ ಶಕ್ತಿ

ಡಾರ್ಲಿಂಗ್ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಅಭಿನಯದ ಕಲ್ಕಿ 2898 AD ಸಿನಿಮಾಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಇದು ಪಕ್ಕಾ ಯೂನಿವರ್ಸಲ್ ಸಿನಿಮಾ. ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌ನಲ್ಲಿದೆ ಎನ್ನುತ್ತಿದ್ದಾರೆ.

ಕಲ್ಕಿ ನೋಡಿದ ಸಿನಿ ಪ್ರೇಕ್ಷಕರಿಗೆ ಹಾಲಿವುಡ್ ಸಿನಿಮಾ ನೋಡಿದ ಅನುಭವ ಆಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸೆಟ್​ಗಳಲ್ಲಿ ಇಡೀ ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ.

ಅದ್ಭುತ ಆ್ಯಕ್ಷನ್ ಸೀನ್‌ಗಳು!
ಕಲ್ಕಿ ಸಿನಿಮಾದಲ್ಲಿ ಪ್ರಮುಖವಾಗಿ ಮಾನವ ಸಮಾಜವನ್ನು ಮೀರಿದ ಲೋಕವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಪಾತ್ರಗಳ ಗೆಟಪ್, ಅವರು ಬಳಸುವ ವಾಹನಗಳೆಲ್ಲವೂ ವಿಶೇಷವಾಗಿದೆ. ಆ್ಯಕ್ಷನ್ ಸೀನ್‌ಗಳಂತೂ ಬೇರೆ ಲೆವೆಲ್‌ನಲ್ಲಿ ಮೂಡಿ ಬಂದಿದೆ. ನಿರ್ದೇಶಕರ ಕಲ್ಪನೆ ಹಾಗೂ ಅದನ್ನ ತೆರೆ ಮೇಲೆ ತಂದಿರುವ ರೀತಿ ಒಂಥರಾ ಸಾಧನೆಯೇ ಸರಿ. ಒಟ್ಟಿನಲ್ಲಿ ಕಲ್ಕಿ ನೋಡಿದ ಅಭಿಮಾನಿಗಳಿಗೆ ಥೇಟ್ ಹಾಲಿವುಡ್ ಸಿನಿಮಾಗಳಲ್ಲಿ ನೋಡುವ ಸೀನ್​ಗಳು ಕಣ್ಮುಂದೆ ಬಂದಿವೆ.

ಇದನ್ನೂ ಓದಿ: ಕಲ್ಕಿ ಪ್ರಭಾಸ್​ಗೆ ವಾರ್ನ್​ ಮಾಡಿದ ರಾಜಮೌಳಿ.. 10 ವರ್ಷ ಹಾಕೊಂಡು ತುಳಿಯುತ್ತೇನೆ ಎಂದ ಸ್ಟಾರ್​ ಡೈರೆಕ್ಟರ್​ ಜಕ್ಕಣ್ಣ 

ಡಾರ್ಲಿಂಗ್ ಫ್ಯಾನ್ಸ್‌ಗೆ ಹಬ್ಬ!
ಕಲ್ಕಿ 2898 AD ಸಿನಿಮಾ ಪಕ್ಕಾ ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್‌ ಹಬ್ಬವಾಗಿದೆ. ಪ್ರಭಾಸ್​ ಕಾಮಿಡಿ, ಹೀರೋಯಿಸಂ, ಮ್ಯಾನರಿಸಂ ಎಲ್ಲವೂ ಈ ಚಿತ್ರದಲ್ಲಿದೆ. ಈ ಹಿಂದಿನ ಪ್ರಭಾಸ್​ ಇವರಲ್ಲ. ಇದು ಕಂಪ್ಲೀಟ್​ ನ್ಯೂ ಲುಕ್ ನ್ಯೂ ಗೆಟಪ್‌ ಎನ್ನಬಹುದು. ಸಲಾರ್ ಆದ್ಮೇಲೆ ಪ್ರಭಾಸ್​ ಸಿನಿ ಕರಿಯರ್‌ಗೆ ಇದು ಒಳ್ಳೆಯ ಚಿತ್ರ ಎನ್ನಬಹುದು.

ದೀಪಿಕಾ ಪಡುಕೋಣೆ ತುಂಬಾ ಮುಖ್ಯವಾದ ಪಾತ್ರ ನಿರ್ವಹಿಸಿದ್ದಾರೆ. ದೀಪಿಕಾ ಪಾತ್ರವೇ ಕಲ್ಕಿ ಚಿತ್ರದ ತಿರುವು ಹಾಗೂ ಪ್ರಧಾನ ಕಥಾ ವಸ್ತು ಆಗಿದೆ. ಸಿಕ್ಕ ಅವಕಾಶದಲ್ಲಿ ದೀಪಿಕಾ ಪಡುಕೋಣೆ ಅವರು ಅಷ್ಟೇ ನೀಟ್ ಆಗಿ ಅಭಿನಯಿಸಿದ್ದಾರೆ.

ಕಲ್ಕಿ ಸಿನಿಮಾದ ಸ್ಪೆಷಲ್ ರೋಲ್​ನಲ್ಲಿ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಜಮೌಳಿ, ದಿಶಾ ಪಟಾನಿ, ಶೋಭನಾ, ಬ್ರಹ್ಮಾನಂದಂ, ಮಾಳವಿಕಾ ನಾಯರ್ ಹೀಗೆ ದೊಡ್ಡ ತಾರಾಗಣವೇ ಇದೆ. ಎಲ್ಲರೂ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ.

ಇದನ್ನೂ ಓದಿ: Kalki 2898 AD Release: ಶುರುವಾಯ್ತು ಕಲ್ಕಿ 2898 AD ಹವಾ.. ರಿಲೀಸ್ ಆದ ದಿನವೇ ಬಿಗ್ ಟಾರ್ಗೆಟ್..! 

ಬುಜ್ಜಿ ಖದರ್ ಸೂಪರ್‌!
ಬುಜ್ಜಿ ಪಾತ್ರದಲ್ಲಿ ಕಾರ​ನ್ನು ಕಲ್ಕಿ ಸಿನಿಮಾದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅದರಲ್ಲಿ ಕೀರ್ತಿ ಸುರೇಶ್​ ವಾಯ್ಸ್​ ಎಕ್ಸ್‌ಟ್ರಾ ಪವರ್ ಕೊಟ್ಟಿದೆ.

ಇಂಟರ್​ವಲ್​ ಫೈಟ್​ ಹೈಲೈಟ್​!
ಕಲ್ಕಿ 2898 AD ಸಿನಿಮಾದ ಕ್ಲೈಮ್ಯಾಕ್ಸ್​ ಕೊನೆಯ 30 ನಿಮಿಷ ಅದ್ಭುತವಾಗಿ ಮೂಡಿ ಬಂದಿದೆ.

ಕಲ್ಕಿ ಕಥೆ ಏನು? 
ಕಲಿಯುಗದ ಅಂತ್ಯ ಹಾಗೂ ಕಲ್ಕಿ ಆಗಮನದ ನಡುವೆ ನಡೆಯೋ ಕಥೆಯೇ ಕಲ್ಕಿ 2898 AD ಸಿನಿಮಾ. ಅಶ್ವತ್ಥಾಮ ಇಡೀ ಚಿತ್ರದ ಪ್ರಮುಖ ಕಥಾಹಂದರ. ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಮೋಘವಾಗಿ ಅಭಿನಯಿಸಿದ್ದಾರೆ. ಇಡೀ ಚಿತ್ರಕ್ಕೆ ಅಮಿತಾಭ್​ ಬಚ್ಚನ್ ಅವರೇ ದೊಡ್ಡ ಶಕ್ತಿ ಕಾಣಿಸಿದ್ದಾರೆ.

ರೇಟಿಂಗ್‌ನಲ್ಲಿ ಎಷ್ಟು ಮಾರ್ಕ್‌??
ಅದ್ಭುತ ಪ್ರಯತ್ನ, ಅದ್ಭುತ ಕಲ್ಪನೆ, ನಾಗ್ ಅಶ್ವಿನ್​ ಡೈರೆಕ್ಷನ್​ಗೆ ಫುಲ್ ಮಾರ್ಕ್ಸ್ ಕೊಡಬಹುದು. ಕಲ್ಕಿ ಸಿನಿಮಾ ಚೆನ್ನಾಗಿದೆ. ವಿಶ್ಯೂಲ್​​ ಟ್ರೀಟ್‌ಮೆಂಟ್ ಸಿಕ್ಕಿರುವ ಹಾಲಿವುಡ್​ ಶೈಲಿಯ ತೆಲುಗು ಸಿನಿಮಾವನ್ನು ಸಿನಿಪ್ರಿಯರೇ ನೋಡಲೇಬೇಕು.

Rating: ⭐️⭐️⭐️⭐️

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kalki 2898 AD Review: ಹಾಲಿವುಡ್ ರೇಂಜ್ ಮೇಕಿಂಗ್‌; ಪ್ರಭಾಸ್‌ ‘ಕಲ್ಕಿ’ಗೆ ಸಿಕ್ಕ ರೇಟಿಂಗ್ ಎಷ್ಟು?

https://newsfirstlive.com/wp-content/uploads/2024/06/Kalki-Review.jpg

Load More