newsfirstkannada.com

IND vs RSA ಇವತ್ತು ಫೈನಲ್ ನಡೆಯೋದೇ ಡೌಟ್​.. ವೆದರ್​ ರಿಪೋರ್ಟ್​ನಲ್ಲಿ ಶಾಕಿಂಗ್ ಮಾಹಿತಿ..!

Share :

Published June 29, 2024 at 8:08am

    ಇಂದು ರಾತ್ರಿ 8 ಗಂಟೆಯಿಂದ ಹೈವೋಲ್ಟೇಜ್ ಪಂದ್ಯ

    ಬಾರ್ಬಡೋಸ್‌ ವೆದರ್​​ ರಿಪೋರ್ಟ್ ಅಪ್​ಡೇಟ್​

    ಶಾಕಿಂಗ್ ನ್ಯೂಸ್​ ​ಕೊಟ್ಟ ಹವಾಮಾನ ಇಲಾಖೆ

ಭಾರತ ತಂಡವು ಇಂಗ್ಲೆಂಡ್ ಅನ್ನು 68 ರನ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಈ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ಬಾರ್ಬಡೋಸ್‌ನ ಬ್ರಿಜ್‌ಟೌನ್‌ನಲ್ಲಿ ರಾತ್ರಿ 8 ಗಂಟೆಯಿಂದ ಫೈನಲ್ ಪಂದ್ಯವನ್ನು ಆಡಲಿದೆ.

T20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಉಭಯ ತಂಡಗಳು ಇದುವರೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಒಂದೂ ಪಂದ್ಯವನ್ನೂ ಸೋತಿಲ್ಲ. ಇದೀಗ ಫೈನಲ್ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ.

ಇದನ್ನೂ ಓದಿ: ಕೊಹ್ಲಿ ವಿರುದ್ಧ ಜನ ಭಾರೀ ಆಕ್ರೋಶ.. ಆದರೂ ಸ್ನೇಹಿತನ ಬಿಟ್ಟು ಕೊಡದ ಕ್ಯಾಪ್ಟನ್ ರೋಹಿತ್ ಶರ್ಮಾ

ಹವಾಮಾನ ಇಲಾಖೆ ಏನ್ ಹೇಳ್ತಿದೆ..?
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಜೂನ್ 29 ರಂದು ಹಗಲಿನಲ್ಲಿ ಮಳೆಯ ಸಂಭವ ಇದೆ. ಪ್ರತಿಶತ 78 ಮಳೆ ಬರುವ ಸಾಧ್ಯತೆ ಇದೆ. ಜೋರಾದ ಗಾಳಿ ಕೂಡ ಇರಲಿದೆ. ಕೊನೆಯವರೆಗೂ ಮೋಡ ಕವಿದ ವಾತಾವರಣ ಇರಲಿದೆ. ರಾತ್ರಿ ವೇಳೆ ಶೇ.87ರಷ್ಟು ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ 30 ಅಂತಿಮ ಪಂದ್ಯಕ್ಕೆ ಮೀಸಲು ದಿನ ನಿಗಧಿ ಆಗಿದೆ. ಆದರೆ ಜೂನ್ 30 ರಂದು ಕೂಡ ಮಳೆ ಬೀಳುವ ಅಪಾಯ ಇದೆ. ಜೂನ್ 30 ರಂದು ಶೇ.61 ರಷ್ಟು ಮಳೆಯಾಗುವ ಸಂಭವವಿದ್ದು, ರಾತ್ರಿ ವೇಳೆ ಶೇ.49 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೀಸಲು ದಿನವೂ ಪಂದ್ಯ ನಡೆಯುವ ಸಾಧ್ಯತೆ ಇಲ್ಲ.

ಇದನ್ನೂ ಓದಿ:ಇವತ್ತು ವಿಶ್ವಕಪ್​​ ಫೈನಲ್.. ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ವಿರಾಟ್ ಕೊಹ್ಲಿ ಔಟ್​​..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs RSA ಇವತ್ತು ಫೈನಲ್ ನಡೆಯೋದೇ ಡೌಟ್​.. ವೆದರ್​ ರಿಪೋರ್ಟ್​ನಲ್ಲಿ ಶಾಕಿಂಗ್ ಮಾಹಿತಿ..!

https://newsfirstlive.com/wp-content/uploads/2024/06/ROHIT-SHARMA-12.jpg

Load More