ಆಫ್ರಿಕಾ ಫೈನಲ್ಗೆ ಬರುತ್ತೆಂದು ಯಾರೂ ಅಂದುಕೊಂಡಿರಲಿಲ್ಲ!
ಎಂಟೂ ಪಂದ್ಯ ಗೆದ್ದ ಆಫ್ರಿಕಾ ಭಾರತಕ್ಕೆ ಸಡ್ಡು ಹೊಡೆಯುತ್ತಾ?
ಫಸ್ಟ್ ವಿಶ್ವಕಪ್ನಲ್ಲಿ ದುರಾದೃಷ್ಟವಶಾತ್ ರೀತಿ ಸೋತಿದ್ದ ಆಫ್ರಿಕಾ
ಒಂದಲ್ಲ.. ಎರಡಲ್ಲ.. ಬರೋಬ್ಬರಿ 32 ವರ್ಷ ವಿಶ್ವ ಕ್ರಿಕೆಟ್ನಲ್ಲಿ ಜೋಕರ್ಸ್ ಆಗಿ ಕರೆಸಿಕೊಳ್ತಿದ್ದ ಟೀಮ್, 7 ಬಾರಿ ಸೆಮೀಸ್ನಲ್ಲೇ ಮುಖಭಂಗ ಅನುಭವಿಸಿದ್ದ ಆಫ್ರಿಕಾ, ಐಸಿಸಿ ಈವೆಂಟ್ನಲ್ಲಿ ಒಮ್ಮೆಯೂ ಫೈನಲ್ಸ್ ಕಂಡಿರಲಿಲ್ಲ. ಐತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಸ್ ತಲುಪಿ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡಿದೆ. ಇದಕ್ಕೆ ಕಾರಣ ಈ ಲಕ್ಕಿ ಕ್ಯಾಪ್ಟನ್ ಏಡನ್ ಮಾಕ್ರಮ್.
ವಿಶ್ವ ಶ್ರೇಷ್ಠ ಆಟಗಾರರು.. ಘಟಾನುಘಟಿ ನಾಯಕರು.. ವಿಶ್ವ ದರ್ಜೆಯ ಭಯಾನಕ ಬೌಲರ್ಗಳು.. ಅಪಾಯಕಾರಿ ಟೀಮ್ ಎಂಬ ಹೆಗ್ಗಳಿಕೆ. ಒಂದೇ ಒಂದು ಕೊರಗು ನಿನ್ನೆಯ ತನಕ ಸೌತ್ ಆಫ್ರಿಕಾಗೆ ಕಾಡಿತ್ತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 32 ವರ್ಷಗಳಿಂದ ಸೆಮೀಸ್ ಎಂಬ ಚಕ್ರವ್ಯೂಹವ ಗೆಲ್ಲದ ನೋವು, ಯಾತನೆ, ಕೊರಗು, ಆಟಗಾರರು ಹಾಕಿದ್ದ ಕಣ್ಣೀರು ಅಷ್ಟಿಷ್ಟಲ್ಲ. ಈ ಎಲ್ಲ ನೋವಿಗೆ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಗೆಲುವಿನ ಮುಲಾಮು ಸಿಕ್ಕಿದೆ.
ಆಫ್ಘಾನ್ ಎದುರು ಅಮೋಘ ಜಯ ಸಾಧಿಸಿದ ಆಫ್ರಿಕಾ, ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಸಿ ಈವೆಂಟ್ನಲ್ಲಿ ಫೈನಲ್ ತಲುಪಿದೆ. 32 ವರ್ಷಗಳ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿದೆ. ಇದರೊಂದಿಗೆ ನಾಯಕ ಮಾಕ್ರಮ್, ಸೌತ್ ಆಫ್ರಿಕಾ ಪಾಲಿನ ಲಕ್ಕಿ ಕ್ಯಾಪ್ಟನ್ ಆಗಿದ್ದಾರೆ. ಇದಕ್ಕೆಲ್ಲ ಕಾರಣ ಗೆಲುವು.
ಈ T20 ವಿಶ್ವಕಪ್ನಲ್ಲಿ ಎಲ್ಲ ಪಂದ್ಯಗಳಲ್ಲಿ ಗೆಲುವು
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಸೌತ್ ಆಫ್ರಿಕಾ ಪ್ರದರ್ಶನ ಅದ್ಭುತ. ಟೂರ್ನಿಯ ಆರಂಭದಲ್ಲಿ ದಿಗ್ಗಜ ಕ್ರಿಕೆಟಿಗರು, ಸೌತ್ ಆಫ್ರಿಕಾವನ್ನು ಲೆಕ್ಕಕ್ಕೂ ಇಟ್ಟಿರಲಿಲ್ಲ. ಸೂಪರ್-8 ಸ್ಟೇಜ್ ಕೊನೆ ಅಂತಾನೇ ಭವಿಷ್ಯ ನುಡಿಯಲಾಗಿತ್ತು. ಈ ಎಲ್ಲ ಭವಿಷ್ಯವನ್ನೂ ಸುಳ್ಳಾಗಿಸಿದ ಸೌತ್ ಆಫ್ರಿಕಾ, ಎಂಟಕ್ಕೆ ಎಂಟೂ ಪಂದ್ಯಗಳಲ್ಲೂ ಗೆದ್ದು ಸಾಧಿಸಿದೆ.
ಚೋಕರ್ಸ್ ಪಟ್ಟ ಕಳಚಿದ ಮಾಕ್ರಮ್
ಏಡನ್ ಮಾಕ್ರಮ್, ಸೌತ್ ಆಫ್ರಿಕನ್ ಲಕ್ಕಿ ಕ್ಯಾಪ್ಟನ್. ಇದಕ್ಕೆ ಕಾರಣ ಮಾಕ್ರಮ್ ನಾಯಕತ್ವದಲ್ಲಿ ಮಾಡಿದ ಸಾಧನೆ. 1992, 1999, 2007, 2015, 2023ರ ಏಕದಿನ ವಿಶ್ವಕಪ್, 2009ರ ಟಿ20, 2014 ಟಿ20 ವಿಶ್ವಕಪ್ಗಳಲ್ಲಿ ಸೆಮೀಸ್ ತಲುಪಿದ್ದರು. ಸೆಮೀಸ್ನಲ್ಲೇ ನಿರಾಸೆ ಅನುಭವಿಸಿತ್ತು. ಈ ಕಾರಣಕ್ಕೆ 32 ವರ್ಷಗಳಿಂದ ವಿಶ್ವ ಕ್ರಿಕೆಟ್ನಲ್ಲಿ ಚೋಕರ್ಸ್ ಹಣೆಪಟ್ಟಿ ಹೊಂದಿತ್ತು.
ಆಫ್ರಿಕಾದ ಯಾವ ನಾಯಕನೂ ಮಾಡಿಲ್ಲ ಸಾಧನೆ
ಬ್ಯಾನ್ ಬಳಿಕ 1992ರಲ್ಲಿ ವಿಶ್ವ ಕ್ರಿಕೆಟ್ಗೆ ಮರಳಿದ್ದ ಸೌತ್ ಆಫ್ರಿಕಾ. ಅಂದಿನಿಂದ ಹಲವು ನಾಯಕರನ್ನು ನೋಡಿದೆ. ಮೊದಲ ವಿಶ್ವಕಪ್ನಲ್ಲೇ ಕೆಪ್ಲರ್ ವೆಸಲ್ಸ್ ನಾಯಕತ್ವದಲ್ಲಿ ದುರಾದೃಷ್ಟವಶಾತ್ ರೀತಿಯಲ್ಲಿ ಸೋತಿತ್ತು. ಸೌತ್ ಆಫ್ರಿಕಾದ ಸಕ್ಸಸ್ಫುಲ್ ನಾಯಕರು ಎನಿಸಿಕೊಂಡಿದ್ದ ಹ್ಯಾನ್ಸಿ ಕ್ರೊನ್ಯೆ, ಗ್ರೇಮ್ ಸ್ಮಿತ್, ಮಾರ್ಕ್ ಬೌಷರ್, ಡಿವಿಲಿಯರ್ಸ್, ಫಾಫ್ ಡುಪ್ಲೆಸಿ ನಾಯಕತ್ವದಲ್ಲೂ ಸೆಮೀಸ್ನಲ್ಲೇ ಪಯಣ ಅಂತ್ಯಗೊಳಿಸಿದ್ದ ಸೌತ್ ಆಫ್ರಿಕಾ, 2023ರ ಏಕದಿನ ವಿಶ್ವಕಪ್ನಲ್ಲಿ ತೆಂಬಾ ಬಾವುಮಾ ನೇತೃತ್ವದಲ್ಲೂ ಮುಗ್ಗರಿಸಿ ಚೋಕರ್ಸ್ ಹಣೆಪಟ್ಟಿ ಕಳಚುವಲ್ಲಿ ವಿಫಲವಾಗಿತ್ತು.
2023 ಏಕದಿನ ವಿಶ್ವಕಪ್ನಲ್ಲಿ 2 ಪಂದ್ಯಗಳಲ್ಲಿ ಗೆಲುವು
2023ರ ಏಕದಿನ ವಿಶ್ವಕಪ್ನಲ್ಲಿ ಸೌತ್ ಆಫ್ರಿಕಾ ಸೋತಿದ್ದರು, ಮಾಕ್ರಮ್ ನಾಯಕತ್ವಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ರು. ಇದಕ್ಕೆ ಕಾರಣ ತೆಂಬಾ ಬಾವುಮಾ ಅಲಭ್ಯತೆಯಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾ ತಂಡವನ್ನು ಸೋಲಿಸಿದ್ದ ಮಾಕ್ರಮ್, ಏಕದಿನ ವಿಶ್ವಕಪ್ನಲ್ಲಿ ಆಫ್ರಿಕಾ ತಂಡದ ಸೆಮಿಫೈನಲ್ ಹಾದಿ ಸುಲಭವಾಗಿಸಿದ್ರು. ಪ್ರಸಕ್ತ ವಿಶ್ವಕಪ್ನಲ್ಲೂ ಸೋಲನ್ನೇ ಅರಿಯದ ನಾಯಕರಾಗಿ ಮುನ್ನುಗ್ಗುತ್ತಿದ್ದಾರೆ.
ಸನ್ರೈಸರ್ಸ್ ಈಸ್ಟನ್ ಕೇಪ್ SAT20 ಚಾಂಪಿಯನ್ಸ್
ಐಸಿಸಿ ಈವೆಂಟ್ನಲ್ಲಿ ಮಾತ್ರವೇ ಅಲ್ಲ, 2023ರ ಚೊಚ್ಚಲ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲೂ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಚೊಚ್ಚಲ ಸೀಸನ್ನಲ್ಲೇ ನಾಯಕರಾಗಿ ಅದ್ಭುತವಾದ ಪರ್ಫಾಮೆನ್ಸ್ ನೀಡಿದ್ದ ಮಾಕ್ರಮ್, ಸನ್ ರೈಸರ್ಸ್ ಫ್ರಾಂಚೈಸಿಗೆ ಗೆಲುವಿನ ಸಿಹಿಯನ್ನ ನೀಡಿದ್ರು ಅನ್ನೋದು ಮರೆಯುವಂತಿಲ್ಲ.
ಇದನ್ನೂ ಓದಿ: IND vs SA; ಹಿಟ್ಮ್ಯಾನ್ ಇಂದಿನ ಬಿಗ್ ಮ್ಯಾಚ್ ವಿನ್ನರ್.. ಇದಕ್ಕೆ ಅಸಲಿ ಕಾರಣ ಇಲ್ಲಿದೆ!
ದ.ಆಫ್ರಿಕಾಕ್ಕೆU-19 ವರ್ಲ್ಡ್ಕಪ್ ಗೆದ್ದು ಕೊಟ್ಟ ನಾಯಕ..!
ಟಿ20 ವಿಶ್ವಕಪ್ ಜಯಿಸಿಕೊಡುವ ನಿರೀಕ್ಷೆ ಹುಟ್ಟಿಹಾಕಿದ ಮಾಕ್ರಮ್, 19ರ ವಯಸ್ಸಿನಲ್ಲಿ ಆಫ್ರಿಕಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2014ರಲ್ಲಿ ಅಂಡರ್-19 ನಾಯಕರಾಗಿದ್ದ ಮಾಕ್ರಮ್, ಪಾಕ್ ಎದುರಿನ ಫೈನಲ್ನಲ್ಲಿ ಅಜೇಯ 66 ರನ್ ಬಾರಿಸಿ ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ 6ಕ್ಕೆ ಆರೂ ಪಂದ್ಯವನ್ನ ಗೆದ್ದು ಸೌತ್ ಆಫ್ರಿಕಾ, ಟೂರ್ನಿಯಲ್ಲಿ ಅಜೇಯವಾಗಿತ್ತು. ವಿಶ್ವಕಪ್ನಲ್ಲಿ ಸೋಲನ್ನರಿಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ತಂಡವನ್ನ ಅದ್ಭುತವಾಗಿ ಮುನ್ನಡೆಸ್ತಿರುವ ಮಾಕ್ರಮ್, ತಂಡಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಡುವ ಕನಸು ಕಾಣ್ತಿದ್ದು. ಎಷ್ಟರ ಮಟ್ಟಿಗೆ ಸಕ್ಸಸ್ ಕಾಣ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ